ಈ ಪುಟವನ್ನು ಪ್ರಕಟಿಸಲಾಗಿದೆ

- 20 -

ಲಂಬಾಯಮಾನವಾದ ಪ್ರಾಕಾರಗಳು, ಉನ್ನತವಾದ ತೆನೆಗಳು, ವಿಸ್ತಾರವಾದ ಪರಿಗೆಯು ಕೋಟೆಯನ್ನು ಬಲಪಡಿಸಿದ್ದುವು. ದೂರದೃಷ್ಟಿಗೆ ಈ ದುರ್ಗವು ಒಂದೇಯಾಗಿ ತೋರಿದ್ದರೂ, ಇದರಲ್ಲಿ ಒಂದರ ಳಗೊಂದಾಗಿ ಮೂರು ಕೋಟೆಗಳಿದ್ದುವು. ದುರ್ಗದ ಅಡಿಯಲ್ಲಿ ದೇವಗಿರಿ ನಗರವು ಹುದುಗಿಕೊಂಡು ಭದ್ರವಾಗಿತ್ತು. ಇಂತಹ ಕೋಟೆಯನ್ನು ಶತ್ರುವು ಮಹಾ ಸೈನ್ಯದೊಡನೆ ೧೦ ವರ್ಷಗಳ ವರೆಗೆ ಮುತ್ತಿದರೂ ರಾಮರಾಜನು ಸುಖವಾಗಿಯೂ ನಿರಾಂತಕವಾಗಿಯೂ ನಿದ್ದೆ ಹೋಗಬಹುದಿತ್ತು. ಮುಸಲ್ಮಾನರ ಸೇನಾ ಸಮುದ್ರವು ಉತ್ತರ ಹಿಂದುಸ್ಥಾನದ ಮೇರೆಯನ್ನು ಅತಿಕ್ರಮಿಸಿ, ಚಿರಕಾಲ ದೇವಗಿರಿಯ ಪ್ರಾಕಾರಗಳ ಮೇಲೆ ಬಂದು ಬಡಿದರೂ, ಅದರ ಸ್ವಾತಂತ್ರ್ಯವು ಮುಳುಗಿ ನಾಶವಾಗುತ್ತಿದ್ದಿಲ್ಲ. ವಿಧಾತೃನು ಮಾತ್ರ ಹಾಗೆ ಎಣಿಸಿರಲಿಲ್ಲ.

ಮಧ್ಯರಾತ್ರಿ ಅಷ್ಟಮಿಯ ಚಂದ್ರನು ದುಃಖದಿಂದ ಅಸ್ತಮಿಸುತ್ತಲಿದ್ದನು. ಅಂಧಕಾರವು ಮೆಲ್ಲಮೆಲ್ಲನೆ ದೇವಗಿರಿಯ ಹೊರವಳಯವನ್ನೆಲ್ಲಾ ಆಕ್ರಮಿಸಿಕೊಳ್ಳತೊಡಗಿತು. ದೇವಗಿರಿಯ ಪಾಳಯದಲ್ಲಿ ಶಾವಲುಗಾರರು ದೀವಟಿಗೆಗಳನ್ನು ಹಿಡಿದುಕೊಂಡು ಅತ್ತಿತ್ತ ತಿರುಗುತ್ತಿದ್ದರು. ವೀರರು ಶಸ್ತ್ರ ಕವಚಗಳನ್ನು ತೊಟ್ಟುಕೊಳ್ಳುವ ಝಣತ್ಕಾರ, ಯುದ್ಧಾಶ್ವಗಳ ಹೇಷಧ್ವನಿ, ಭಟರ ಕಲಕಲ - ಇವೆಲ್ಲಾ ನಿಶ್ಯಬ್ದವಾದ ರಾತ್ರಿಯ ಕರ್ಣವನ್ನು ಭೇದಿಸಿ ಹೋಗುವಂತಿದ್ದುವು. ರಾಮದೇವನು ತಾನೇ ಪಾಳಯದಲ್ಲಿ ಸಂಚರಿಸುತ್ತ, ಪಾತಃಕಾಲದ ಯುದ್ಧಕ್ಕೆ ಸೈನಿಕರಲ್ಲಿ ಭೀತರಾದವರನ್ನು ಉತ್ಸಾಹಗೊಳಿಸುವ ಶತ್ರುಚಲನೆಯನ್ನು ತಿಳಿಯುವುದಕ್ಕೆ ನೆಲಕ್ಕೆ ಒರಗಿ, ಕಿವಿ ಕೊಡುತಿದ್ದನು. ಅಲ್ಲಾವುದ್ದೀನನ ಪಾಳಯವು ದುರ್ಗದಿಂದ ೧೦ ಮೈಲು ದೂರವಿದ್ದುದರಿಂದ ಶತ್ರುಚಲನೆಗಳೇನೂ ತೋರುತ್ತಿರಲಿಲ್ಲ. ಕೃಷ್ಣರಾಜನು ತಾನೇ ಮುಂದು ಹೋಗಿ ಪರೀಕ್ಷಿಸುವೆನೆಂದು ಹೇಳಿ ಕೋಟೆಯ ಗೋಡೆಯನ್ನು ಹತ್ತಲು ಹೋದನು.

ಅಲ್ಲಾವುದ್ದೀನನ ಸೈನಿಕರೆಲ್ಲರು ಗಾಂಜಾವಿನ ಬಲದಿಂದ ಸುಖವಾಗಿ ನಿದ್ದೆ ಹೋಗುತ್ತಿದ್ದರು. ಅಲ್ಲಲ್ಲಿ ಒಬ್ಬಿಬ್ಬರು ಕಾವಲುಗಾರರು ಪಹರೇ ಮಾಡುತ್ತಿದ್ದರು. ಇಷ್ಟರಲ್ಲಿ ಅಲ್ಲಾವುದ್ದೀನನ ಪಾಳಯದಲ್ಲಿ ಒಂದು ದೀಪವನ್ನು ಯಾರೋ ಹಚ್ಚಿದರು. ಡೇರೆಯ ಒಳಗೆ ಒಬ್ಬ ಯುವಕನು ಏನನ್ನೂ