ಈ ಪುಟವನ್ನು ಪ್ರಕಟಿಸಲಾಗಿದೆ

- 24 -

ಕೃಷ್ಣರಾಜ- “ಸಖಿ! ವೀರಮತಿ! ನನ್ನನ್ನು! ನೀನು ಪ್ರೀತಿಸಲಿಲ್ಲವೇ?”

ವೀರಮತಿಯ ಉತ್ಸಾಹಿತವಾದ ಹೃದಯವು ಈ ಪ್ರಣಯಪ್ರಸ್ತಾಪದಿಂದ ಫಕ್ಕನೆ ಪರಿವರ್ತಿತವಾಯಿತು. ಕೃಷ್ಣರಾಜನ ಮಾಲಿಕ್ಕಾಫರರ ಗುಪ್ತ ಸಂಭಾಷಣದಿಂದ ಉದ್ರೇಕಿತವಾದ ಅವಳ ಸ್ವದೇಶಾನುರಾಗವು ಸರ್ವ ದೇಹವನ್ನು ಆವರಿಸಿಕೊಂಡು ಅವಳ ಹಸ್ತದಿಂದ ಈ ಘೋರಕೃತ್ಯವನ್ನು ಹೇಗೆ ನಡೆಯಿಸಿತೋ, ಹಾಗೆಯೇ ಆ ಮನೋಭಾವವು ಶಾಂತವಾಗುತ್ತಲೇ ಪ್ರಾಣವಲ್ಲಭನ ಅಂತಿಮ ದರ್ಶನದಿಂದ ಅವಳ ಮನಸ್ಸನ್ನು ಆಕ್ರಮಿಸಿ, ತಾನೇ ತಾನಾಗಿ ನಿಂತ ಪ್ರಣಯವು ಅವಳನ್ನು ದುಃಖಕ್ಕೆ ಗುರಿಮಾಡಿತು. ಕೃಷ್ಣ ರಾಜನು ಉಜ್ವಲ ಮುಖದಿಂದ “ಪ್ರಾಣೇಶ್ವರೀ! ರಾಜ್ಯ—— ಬೇಡ—— ನಿನ್ನ—— ಚುಂ——ಬ——ನ——ನಾನು——ಸಾ——ಯು” ಎಂದನು. ಅವನ ಕಡೆಯ ಮಾತುಗಳು ನಾಲಗೆಯಲ್ಲೇ ಉಳಿದುಹೋದುವು.

ವೀರಮತಿಯು ಆ ಮೃತದೇಹವನ್ನು ಚುಂಬಿಸಿದಳು; ಮತ್ತೊಮ್ಮೆ ಚುಂಬಿಸಿದಳು; ಪುನಃ ಚುಂಬಿಸಿದಳು. ಅಯ್ಯೋ! ವಿಧಾತೃನು ಈ ಸುಂದರವಾದ ದೇಹದಲ್ಲಿ ಕಪಟವನ್ನು ಏಕೆ ಅಡಗಿಸಿಟ್ಟನು? ಮಧುರ ಪುಷ್ಪದಲ್ಲಿ ಕ್ರಿಮಿ ಇರುವುದೆಂದು ಹೇಳುವರಲ್ಲವೆ? ಆದಕಾರಣದಿಂದಲೇ ಅದು ಸುಂದರ ಪುಷ್ಪವೆನಿಸುವುದೇ? ಪ್ರಿಯನೇ! ನಿನ್ನ ದೇಹವು ಚಂದ್ರನಂತೆ ಶೀತಲವಾಯಿ ತಲ್ಲಾ ! ಚಂದ್ರನ ಕಳಂಕು ಗೋಚರವಾಗಿದೆ. ನಿನ್ನ ಕಳಂಕವನ್ನು ನೀನು ಮರೆಗೊಳಿಸಿ, ನನಗೆ ಈ ದುರ್ಗತಿಯನ್ನು ತಂದುಬಿಟ್ಟಿಯಲ್ಲ! ನಿನ್ನ ಸ್ಥಿತಿಯನ್ನು ನೋಡಲಾರದೆ “ಆಕಾಶದೀಪಗಳು” ಕಣ್ಮುಚ್ಚಿದುವು. ನನ್ನ ಕೈ ದೀಪವೇ! ನಿನ್ನ ಜೀವಜ್ಯೋತಿಯನ್ನು ನಾನು ನಂದಿಸಿದೆನಲ್ಲಾ! ಮರಳಿ ಇದನ್ನು ಹಚ್ಚುವುದಕ್ಕೆ ನಾನು ಬಲ್ಲೆನೆ? ಮುಸಲ್ಮಾನರಿಗೆ ಸಿಕ್ಕಿದರೇನು? ಸರಿ! ಇನ್ನು ವಿಳಂಬ ಮಾಡಲಾರೆನು. ನಿನ್ನನ್ನು ನಾನು ಬಿಟ್ಟಿರಲಾರೆನು. ಸರಿ! ಸರಿ! ಮುಸಲ್ಮಾನರು ಕೋಟೆ ನುಗ್ಗಿದರು!” ಹೀಗೆಂದು ಪ್ರಲಾಪಿಸುತ್ತಾ ವೀರಮತಿಯು ಪುನಃ “ನನ್ನ ಪ್ರಾಣವಲ್ಲಭನೇ! ಈ ಕಾಠಾರಿಯು ನಿನ್ನನ್ನು ಎಷ್ಟು ತಿವಿಯಿತೋ ನಾನು ಇದನ್ನು ನೋಡುವೆನು” ಎಂದು ಹೇಳಿ ಕಠಾರಿಯನ್ನು ಮೃತದೇಹದಿಂದ ಈಚೆಗೆ ಸೆಳೆದಳು. “ಶರಪುಷ್ಪವೇ! ನಿನ್ನನ್ನು ಇನ್ನೊಮ್ಮೆ ಆಘ್ರಾಣಿಸುವೆನು” ಎಂದು ಹೇಳಿ ಪುನಃ ಪುನಃ ಚುಂಬಿಸಿ “ಕೃಷ್ಣ !