ಈ ಪುಟವನ್ನು ಪ್ರಕಟಿಸಲಾಗಿದೆ

- 45 -

ಸೂಚಿತವಾಗಿರಲಿಲ್ಲ. ಆದರೂ ಶಿವಾಜಿಯು ಕೋಟೆಯನ್ನು ದಾಟುವುದಾದರೆ, ಅವರಂಗಜೀಬನ ಸೈನಿಕರ ಕತ್ತಿಗಳು ಒರೆಯಿಂದ ಹಾರಲು ಸಿದ್ಧವಾಗಿದ್ದುವು. ಮರು ದಿನಗಳಿಂದ ಮೊಗಲ್ ಸೈನಿಕರು ಆಯುಧಪಾಣಿಗಳಾಗಿ ಹಗಲಿರುಳು ತನ್ನ ಶಿಬಿರವನ್ನು ಬಿಡದೆ ಕಾಡುವುದನ್ನು ಶಿವಾಜಿಯು ತಿಳಿದುಕೊಂಡನು. ಆ ಮೈಗಾವಲಿನ ಅರ್ಧವನ್ನು ಶಿವಾಜಿಯು ತಿಳಿಯ ಹೋಗಲಿಲ್ಲ. ಈ ಸಂಕಷ್ಟಕರವಾದ ಸಮಸ್ಯೆಯಿಂದ ರಕ್ತಪಾತವಿಲ್ಲದೆ ಹೇಗೆ ಪಾರಾಗಬೇಕೆಂದು ಅವನು ಒಂದೆರಡು ದಿನ ತಾನೆ ವಿಚಾರಮಾಡಿದನು. ರಹಸ್ಯದಲ್ಲಿ ಪಲಾಯನ ಮಾಡುವುದಕ್ಕೆ ಅವನ ಬಳಿಯ ದಳವು ಅಧಿಕವಾಗಿತ್ತು; ಅವರನ್ನೆಲ್ಲಾ ಕಟ್ಟಿಕೊಂಡರೆ, ಪಲಾಯನದಲ್ಲಿ ಗುಟ್ಟು ನಿಲ್ಲಲಾರದು. ಬಹಿರಂಗ ಯುದ್ಧವನ್ನು ಮಾಡುವುದಕ್ಕೆ ದಳವು ಅಲ್ಪವಾಗಿತ್ತು; ಅಲ್ಪ ಸೇನೆಯನ್ನು ನಂಬಿ ಯುದ್ಧ ಮಾಡುವುದು ಹುಚ್ಚುತ ತನವೆಂದು ಶಿವಾಜಿ ಎಣಿಸಿದನು.

ನಾಲ್ಕು ದಿನಗಳು ಕಳೆದುಹೋದುವು. ರಾಜಸಿಂಹನು ದಿನಕ್ಕೆ ಅನೇಕಾವರ್ತಿ ಮರಾಟರ ಪಾಳೆಯಕ್ಕೆ ಬಂದು ಹೋಗಿ, ಶಿವಾಜಿಗೆ ಬೇಕು ಬೇಕಾದುದನ್ನು ಒದಗಿಸುತ್ತ, ಆತನು ಉಳುಕೊಂಡ ಮಂದಿರದ ವಿಷಯವಾಗಿ ಬಹಳ ಶ್ರಮಗೊಳ್ಳುತ್ತ, ಶಿವಾಜಿಯ ಮಹಾ ಹಿತಚಿಂತಕನೆಂದು ನಟಿಸುತ್ತ ಇರುವುದನ್ನು ಶಿವಾಜಿಯು ತಿಳಿದುಕೊಂಡನು. ಆದಕ್ಕೆ ತಕ್ಕುದಾದ ಪ್ರತಿಕಾರವನ್ನು ಮಾಡಲು ಉದ್ಯೋಗಿಸಿದನು ಅವನ ಸರ್ವ ವ್ಯಾಪಕ ಬುದ್ಧಿಯ ಮುಂದೆ ಅವರಂಗಜೇಬನ ಪ್ರಯತ್ನಗಳೂ ರಾಜಸಿಂಹನ ಕಾರ್ಯಗಳೂ ಕುಂಠಿತವಾದುವ. ಈ ಸಂದರ್ಭದಲ್ಲಿ ಶಿವಾಜಿಯ ಕುಲದೇವತೆಯಾದ ಭವಾನಿಯು ಅವನ ಮೈಮೇಲೆ ಬಂದು, “ಶಿವಾ! ಹೆದರ ಬೇಡ! ಯಾವಾತನು ಜನನೀಜನ್ಮಭೂಮಿಯನ್ನು ಪ್ರೀತಿಸಿ, ಅದನ್ನು ಉದ್ಧಾರಮಾಡಲು ಪ್ರಯತ್ನಿಸುವನೋ, ಅವನು ನನ್ನ ಭಕ್ತನು, ಭಕ್ತರಲ್ಲಿ ಭಕ್ತನು. ಅವನಿಗೆ ಯಾವುದೊ೦ದು ಆಪತ್ತು ತಗಲಲಾರದು. ಅಂತಹನನ್ನು ಹಾಳುಮಾಡಲು ಬಗೆದವರು ಆ ದೇಶವತ್ಸಲನ ವೈಭವ ಪ್ರಾಭವವನ್ನು ನೋಡುವುದಕ್ಕೆ ಉಳಿಯದೆ, ನರಕಕ್ಕೆ ಇಳಿದು ಹೋಗುವರು. ನೀನು ಭಯಪಡಬೇಡ! ನಿನ್ನ ಕೋರಿಕೆಗಳೆಲ್ಲವು ಸಿದ್ಧಿಸುವು” ಎಂದು ಹೇಳಿದಳು.