ಈ ಪುಟವನ್ನು ಪ್ರಕಟಿಸಲಾಗಿದೆ

- 47 -

ಏನಾಗುವುದೆಂದು ಚಿಂತಿಸಿದಳು. ಅಸ್ವಸ್ಥವು ಸ್ವಲ್ಪ ಗುಣವಾದಂತೆ ಸುದ್ದಿ ಎದ್ದಿತು. ತಾನು ಕ್ಷೇಮವನ್ನು ಹೊಂದಿದುದಕ್ಕೆ, ಶಿವಾಜಿಯು ಪ್ರತಿ ಬೃಹಸ್ಪತಿವಾರ ಗುರುಪೂಜೆಯನ್ನು ಮಾಡಲಾರಂಭಿಸಿದನು. ಪ್ರತಿ ಗುರುವಾರ ಹಗಲು ಮಹೋತ್ಸವದಿಂದ ಪೂಜೆಯನ್ನೂ ರಾತ್ರಿ ಭಗವನ್ನಾಮ ಸಂಕೀರ್ತನವನ್ನೂ ಮಾಡಿ, ದೇವರಿಗೆ ನಿವೇದನ ಮಾಡಿದ ಭಕ್ಷ್ಯಾದಿಗಳನ್ನು ದೊಡ್ಡ ದೊಡ್ಡ ಬಿದಿರ ಬುಟ್ಟಿಗಳಲ್ಲಿ ತುಂಬಿ, ಬ್ರಾಹ್ಮಣರಿಗೂ, ಮುಖ್ಯಮುಖ್ಯರಾದ ಅಧಿಕಾರಿಗಳಿಗೂ ಬೈರಾಗಿಗಳಿಗೂ, ಫಕೀರರಿಗೂ ಹಂಚುವಂತೆ ಆಜ್ಞೆ ಮಾಡಿದನು. ಮೊದಲು ಮೊದಲು ಕಾವಲುಗಾರರು ಬುಟ್ಟಿಗಳನ್ನು ಶೋಧಿಸದೆ ಬಿಡುತ್ತಿರಲಿಲ್ಲ. ಪ್ರತಿ ಗುರುವಾರವೂ ಈ ರೀತಿಯಾಗಿ ಭಕ್ಷದ ಬುಟ್ಟಿಗಳು ಹೋಗಲಾರಂಭಿಸಿದಂತೆ, ಮೊಗಲ್ ಕಾವಲುಗಾರರು ತಮ್ಮ ತಮ್ಮ ಕಾರ್ಯದಲ್ಲಿ ಉದಾಸೀನರಾಗಿ, ಪರೀಕ್ಷೆ ಮಾಡದೆಯೇ ಬುಟ್ಟಿಗಳನ್ನು ಬಿಡುತ್ತ ಬಂದರು, ಶಿವಾಜಿಯು ಗುಣಹೊಂದುತ್ತ ಬರುವಷ್ಟಕ್ಕೆ ಈ ಪೂಜೆಯು ಮಹಾವೈಭವದಿಂದ ನಡೆಯ ತೊಡಗಿತು. ಈ ವೈಭವವು ಹೆಚ್ಚಿದಷ್ಟಕ್ಕೆ ಕಾವಲುಗಾರರ ಕಾರ್ಯಗಳು ಸಡಿಲವಾಗುತ್ತ ಬಂದವು. ಶಿವಾಜಿಯು ಯಾವ ಉಪಾಯಗಳಿಂದ ತನ್ನ ಉದ್ದೇಶವನ್ನು ಕೊನೆಗಾಣಿಸಬೇಕೆಂದಿದ್ದನೋ ಅವೇ ಉಪಾಯಗಳು ಫಲಿಸುವುದಕ್ಕೆ ಅನುಕೂಲವಾಗಿ ಸಮಯವು ಬಂದೊದಗಿತು.

ಅವರಂಗಜೀಬನು ಶಿವಾಜಿಯ ಪೂಜಾಕೃತ್ಯಗಳನ್ನು ನೋಡಿ ಮಾಯಾವಿಯಾದ ಶಿವಾಜಿಯು ಅವುಗಳನ್ನು ಏಕೆ ನಡೆಯಿಸುವನೆಂದು ರಾಜಸಿಂಹನೊಡನೆ ವಿಚಾರಿಸಿದನು. ರಾಜಸಿಂಹನು ಅವುಗಳಿಂದ ಮೋಸವೇನೂ ನಡೆಯಲಾರದೆಂದು ಬಾದಶಹನಿಗೆ ಭರವಸೆಯಿತ್ತನು. ಸಂದೇಹಗ್ರಸ್ತನಾದ ಬಾದಶಹನಿಗೆ ಈ ಉತ್ತರವು ಸಮರ್ಪಕವಾಗಲಿಲ್ಲ. ಶಿವಾಜಿಯ ಮೇಲಿನ ಕಾವಲನ್ನು ಬಿಗಿಮಾಡುವಂತೆ, ಅವನು ತನ್ನ ಸೈನಿಕರಿಗೆ ಆಜ್ಞೆ ಮಾಡಿದನು. ಹಾಗೂ ತಾವು ಯೋಚಿಸಿದ ಕಾರ್ಯವನ್ನು ಬೇಗನೆ ನೆರವೇರಿಸಬೇಕೆಂದು ರಾಜಸಿಂಹನಿಗೆ ಸೂಚಿಸಿದನು. ಎಂದಿನಂತೆ ಬೃಹಸ್ಪತಿ ವಾರವು ಬಂದಿತು. ಪೂಜೆಯು ಸ್ವಲ್ಪ ವಿಳಂಬವಾಗಿ ನಡೆಯಿತು. ರಾತ್ರಿ ೪ ಗಳಿಗೆಯಾಯಿತು. ಭಿಕ್ಷುಕರೂ, ಬಡವರ, 'ಪೀರರೂ', ಫಕೀರರೂ ಶಿವಾಜಿಯ ಶಿಬಿರವನ್ನು ಮುತ್ತಿಕೊಂಡಿದ್ದರು. ಎಂದಿನಂತೆ