ಈ ಪುಟವನ್ನು ಪ್ರಕಟಿಸಲಾಗಿದೆ

- 53 -

ಯನ್ನು ನಡೆಯಿಸುತ್ತಲಿದ್ದನೋ, ಆ ಮಾತುಗಳನ್ನೆಲ್ಲಾ ಶೈಲಿನಿಯು ಮಹಡಿಯ ಕೊಟಡಿಯಲ್ಲಿ ಇದ್ದು ಕೇಳಿದ್ದಳು. ಅದಕ್ಕೋಸ್ಕರವೇ ಅವಳ ಹೃದಯವು ಮರಾಟರ ಶಿಬಿರಕ್ಕೆ ಹಾರಿಹೋಗುವುದಕ್ಕೆ ಸಂಕಷ್ಟಗೊಳ್ಳುತ್ತಲಿತ್ತು.

ಶೈಲಿನಿಯು ಕಾಲುನಡೆ ಯಾಗಿ ಹೋಗುತ್ತಿದ್ದಳು. ಹಾದಿಯಲ್ಲಿ ತಾನೇ ಆತ್ಮಗತವಿಚಾರ ಮಾಡಿಕೊಳ್ಳುತಿದ್ದಳು. ಅವಳ ಇದಿರಿಗೆ ಆಕಾಶದಲ್ಲಿ ಚಂದ್ರನು ಉದಯವಾಗುತ್ತಲಿದ್ದನು. ರೋಹಿಣಿ ನಕ್ಷತ್ರವು ಚಂದ್ರನ ಸಮಾಸಕ್ಕೆ ಬರುವಂತೆ ಅವಸರಗೊಳ್ಳುತಲಿತ್ತು, ಶೈಲಿನಿಯು ನಿಶಾನಾಥನನ್ನು ನೋಡಿ ಏನೇನೋ ಹೇಳತೊಡಗಿದ್ದಳು. “ಚಂದ್ರನೇ! ನೀನು ವಿರಹಿಗಳ ವೈರಿ ಎಂಬುದು ನಿಜವೇ? ನೀನು ಕಾಮುಕರ ತಾಪಕಾರಕನೆಂಬುದು ಸತ್ಯವೇ? ಹಾಗಿದ್ದರೆ ಈ ಕತ್ತಲಾದ, ಕಂಗಾಣದ ಹಾದಿಯಲ್ಲಿ ನನ್ನ ಮಾರ್ಗ ಪ್ರದರ್ಶಕನಾಗಿ ಏಕೆ ಉದಯಿಸುತ್ತಲಿರುವೆ? ನಿನ್ನ ರೋಹಿಣಿಯು ನಿನ್ನ ಸಮೀಪಕ್ಕೆ ಬರುತ್ತಿರುವಳು. ನೀನು ದೂರದೂರಕ್ಕೆ ಹೋಗುತ್ತಿರುವುದೇಕೆ? ನನ್ನ ಜೀವಿತೇಶನು ನಿನ್ನಂತೆ ಗಗನದಲ್ಲಿ ಚಲಿಸುತ್ತಿದ್ದರೆ, ನಾನು ರೋಹಿಣಿಯಂತೆ ಅವನನ್ನು ಅನುವರ್ತಿಸುತ್ತಿದ್ದೆನು. ನನ್ನ ಪ್ರಿಯನು ನಿನ್ನಂತೆಯೇ ಇರುವನು; ನಿನ್ನಂತೆಯೇ ಸೌಂದರ್ಯಮಯನು; ಸುಧಾಮಯನು; ಶಾಂತನು. ಛೀ! ಛೀ! ಈ ಸಾಮ್ಯವು ಸರಿಹೋಗದು. ಅವನ ಪ್ರೀತಿಯು ನಿನ್ನಂತೆ ದಿನೇ ದಿನೇ ಕುಂದಬಹುದೇ? ನೀನು ರೋಹಿಣಿಯಿಂದ ದೂರಕ್ಕೆ ಮನಸ್ವಿಯಾಗಿ ಸಾರುವಂತೆ, ಅವನ ಪ್ರೀತಿಯು ಗಳಿತವಾಗಬಹುದೇ? ಹಾಗೆ ಪ್ರೇಮವು ಕುಂದದಿದ್ದರೆ ಮೊನ್ನೆ ನನ್ನೊಡನೆ ಏತಕ್ಕೆ ಅಷ್ಟು ಉದಾಸೀನನಾದನು? ನಾವು ಏಕಾಂತದಲ್ಲಿದ್ದರೂ ನನ್ನನ್ನು ಸರಿಯಾಗಿ ಆದರಿಸಲಿಲ್ಲವೇಕೆ? ನನ್ನ ಪ್ರೇಮಸಲ್ಲಾಪವನ್ನು ಕಳ್ಳುನುಡಿಗಳಿಂದ ಜಗುಳಿಸಿದನೇಕೆ? “ನನ್ನ ಪ್ರೇಮಪಾಶದಲ್ಲಿ ಸಿಕ್ಕಿ ಮೋಸಹೋದೆ” ಎಂದು ಮೈಮರೆದಂತೆ ಹೇಳಿದನೇತಕ್ಕೆ? ನನ್ನನ್ನು ಮಧುರವಾದ ಮಾತುಗಳಿಂದ ಕಳುಹಿಸಿ ಕೊಡಲಿಲ್ಲವೇಕೆ? ಛ! ಮನವೇ ಕೊಂಚ ತಡೆ! ತಡೆ! ಸುಮ್ಮನೆ ಬಹಳ ದೂರಕ್ಕೆ ಯೋಚಿಸುತ್ತಿರುವೆ. ನೀನೂ ಅವನ ಪಕ್ಷ ವಾಗಿ ಹೇಳಲಾರೆಯಾ? ಶಿವಾಜಿಯು ಕಾರ್ಯಾ೦ತರದಲ್ಲಿರಬಹುದು. ದುಷ್ಟ ಅವರಂಗಜೇಬನ