ಈ ಪುಟವನ್ನು ಪ್ರಕಟಿಸಲಾಗಿದೆ

- 59 -

“ಒಳಗೆ ಹೋಗುವುದಕ್ಕೆ ಯಾರ ಅಪ್ಪಣೆಯೂ ಇಲ್ಲ' ಎಂದು ಹೊರಗಿಂದ ಮಾತುಗಳು ಕೇಳಿಸಿದುವು.

ಯುವಕನು ಒಮ್ಮೆ ಮಾತನಾಡಲಿಲ್ಲ. ಬಳಿಕ ಶೈಲಿನಿಯ ಮುಖವನ್ನು ತುಂಬಾ ನೋಡುತ್ತ, “ಶೈಲಿಸಿ! ನೀನು ನನ್ನಿಂದ ವಂಚಿತಳಾದೆ. ವಂಚಿತಳಾದೆ. ನೀನು ಹೇಗೆ ವಂಚಿತ ಇವೆ ಎಂದು ನಾನೇ ಬಾಯಿಟ್ಟು ಹೇಳುವ ಬದಲಾಗಿ ಈ ಪತ್ರವೇ ತಿಳಿಸುವುದು; ಇದನ್ನು ಓದಿ ನೋಡಿ, ನನ್ನ ಅಪರಾಧವನ್ನು ಕ್ಷಮಿ: ಸು!” ಎಂದು ಹೇಳಿ, ಅಲ್ಲಿಯೇ ಕೈಗಳಿ೦ದ ಕಣ್ಣು ಮುಚ್ಚಿ ನಿಂತುಬಿಟ್ಟನು.

ಹೊರಕ್ಕೆ ಮುಆಜಮನು ಪಸರೇಯವನನ್ನು ಗದರಿಸಿ, ಬಂದನು. ಅವನು ಕೊಟ್ಟಡಿಗೆ ಇದಿರಾಗಿ ಬರುವುದನ್ನು ಕೈಬಿಸಿಯು ಕಂಡು “ರಾಜಾಧಿರಾಜ! ನನ್ನನ್ನ ರಕ್ಷಿಸು! ರಕ್ಷಿಸು !!” ಎಂದು ಕೂಗಿದಳು.

ಮುಆಜಮನು ಶೈಲಿನಿಯನ್ನು ಸ್ವರದಿಂದ ಗುರುತಿಸಿದನು. ಅವನು ಒಳಕೊಟ್ಟಡಿಯ ಸವಿಾಪಸ್ಥನಾಗಿ “ಶಿವಾಜಿರಾಜ! ಇದೇನು ಅಕೃತ್ಯವನ್ನು ಮಾಡುವೆ?” ಎಂದು ಕೇಳಿದನು.

ಶೈಲಿನಿಯ ಪ್ರಾಣವಲ್ಲಭನು ಮುಂದೆ ಬಂದು, ಶೈಲಿನಿಯನ್ನು ತನ್ನ ಬೆನ್ನ ಹಿಂದೆ ಇರಿಸಿ, “ನನ್ನ ಏಕಾಂತದ ಕೊಟ್ಟಡಿಗೆ ನೀನು ಯಾರ ಅನುಮತಿಯಿಂದ ಪ್ರವೇಶಮಾಡಿದೆ?” ಎಂದು ಕೇಳಿದನು, “ಎಲ್ಲವೂ ನಮ್ಮದಾದಲ್ಲಿ ನಾವು ಯಾರೊಡನೆ ಕೇಳಬೇಕು?" ನಿಂದು ನುಜಮನು ಉತ್ತರ ಕೊಟ್ಟನು. ಪುನಃ ನಮ್ಮ ನಗರದಲ್ಲಿ ಹೆಣ್ಣು ಕಳವು ಆಗದಂತೆ ನಾವು ಸಾಗರೂಕರಾಗಿರಬೇಕು.” ಎಂದು ಮುಂದರಿಸಿದನು,

ಅವನ ಪ್ರತಿದ್ವಂದ್ವಿಯು ಉದ್ರೇಕಗೊಂಡನು. ಇಬ್ಬರಿಗೂ ಮಾತಿಗೆ ಮಾತು ಬಂದಿತು. ಮುಸಲ್ಮಾನನು ಕತ್ತಿಯನ್ನು ತೋರಿಸಿದನು, ಒಡನೆ ಹಿಂದುವು ಖಡ್ಗವನ್ನು ಕೈಯಲ್ಲಿ ಹಿಡಿದು, ಕೊಟ್ಟ ಡಿಯ ಹೊರಕ್ಕೆ ಹೋದನು. ಮುಜ ಮನು ಮುಂದೆ ಓಡ ತೊಡಗಿದನು. ಮಂದಿರದ ಒಳಕ್ಕೆ ಒಂದು ಮನಲೆಯಿಂದ ಮತ್ತೊಂದು ಮೂಲೆಗೆ ಓಡಿಯೋಡಿ,