ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಪುಷ್ಪಗಳ ಸ್ವಭಾವವೂ, ಕಾರವೂ. ದಳಗಳೂ ಅವುಗಳಕೆಲಸವೂ:-ಹೂವಿನಲ್ಲಿ ಅಂದವುಳ್ಳ ಭಾಗವು ದಳ ಗಳೇ, ಪುಕೋಶದಂತೆಯೇ ದಳಗಳ ಪತ್ಯೇಕವಾಗಿಯಾಗಲಿ, ಒಂದಾ ಗಿಯಾಗಲಿ ಇರುವವು. ದಳಗಳು ಬಂದಾಗಿಸೇರಿರುವುದರಿಂದ, ದಳವೃತವು ಹಲವುಬಗೆಯ ಆಕಾರಗಳನ್ನು ಹೊಂದಿರುವುವು. ಉನ್ನತಧ ಹೂವಿನ ದಳದ ನಾಳಗಳು ಫನಲ್ (ಹುಯೊಳವೆ) ಯನ್ನು ಹೋಲುವುವು. ಬದನೆಯ ಹೂವಿನ ದಳವೃತ್ತನ್ನು ಹೋಲತಕ್ಕವು,ಚಕಾಕಾರಗಳೆಂದು ಹೇಳಲ್ಪಡುವುವು. ಕೆಲವು ಬಗೆಯ ಮಲ್ಲಿಗೆಯ ಹೂವಿನಲ್ಲಿ, ದಳದ ನಾಳವು ಮೇಲುಗಡೆಯಲ್ಲಿ ಅಗ ಲವಾಗಿಬಿಚ್ಚಿಕೊಂಡು ತಟ್ಟೆಯಂತಿರುವುವು. ಪುಷ್ಪಕೋಶದಂತೆಯೇ ದಳಗ ಳ ಹೂಗಳ ಒಳಭಾಗಗಳನ್ನು ಮುಚ್ಚಿಕೊಂಡು, ಅವು ಪಕ್ವವಾಗುವವರೆ ಗೂ ಅವುಗಳನ್ನು ಪೋನ್ನಿಸುವುವು, ಮತ್ತು ದಳಗಳು ಅಂದವನ್ನು ಹೊಂದಿ ರುವುದೂ, ವಾಸನೆಯುಳ್ಳದಾಗಿರುವುದೂ, ಕೆಲವು ಕೀಟಗಳಿಗೆ, ಹೂವಿರುವ ಅಂಶವನ್ನು ತಿಳಿಸಿಕೊಡುವುದಕ್ಕಾಗಿಯೇ, ಕೆಲವು ಗಿಡಗಳಲ್ಲಿ, ಹೂಗಳು ಮಾಡಬೇಕಾದ ವ್ಯಾಪಾರಕ್ಕೆ ದುಂಬಿಗಳಾಗಲಿ, ಕೀಟಗಳಾಗಲಿ ಬಂದು, ಹೂವಿ ನಲ್ಲಿ ಸಂಚರಿಸಬೇಕಾದುದು ಅವಶ್ಯವು. ಇದಕ್ಕೆ ಕಾರಣವು ಮೇಲಿನ ಅಧ್ಯಾಯ ದಲ್ಲಿ ತಿಳಿಯುವುದು. ದಳ ವೆಂಬುದು ಕೆಲವು ಹೂಗಳಲ್ಲಿ ಪುಚ್ಛಗಳನ್ನು ಹೊಂದಿರುವು! ದುಂಟು. ಕಣಿಗಿಲೆ, ಬಿಳಿ ಹಾಲೆ (ಪಟ 82.) ಈ ಹೂಗಳ ದಳಗಳಲ್ಲಿ ಪುಚ್ಚ ಗಳುಂಟು. ಕೆಲವು ಹೂಗಳಲ್ಲಿ, ದಳಗಳೆ ಉಂಟಾಗುವುದಿಲ್ಲ. ಇದಕ್ಕೆ ಉದಾಹರಣವಾಗಿ, ನಾಡು ಬಾದಾಮಿ, ಅಳಲೇಕಾಯಿ, ಚಂದುನಗೆ ಇವುಗ ೪ಾಗಿರುವುವು' ಮೊಗ್ಗುಗಳಲ್ಲಿ ದಳಗಳ ಹೊರದಳಗಳ ಹಲವುಬಗೆಯಾಗಿ ಸೇರಿ ಕೊಂಡಿರುವುವು. ಕೆಲವು ಹೂಗಳ ದಳಗಳು ಒಂದನ್ನೊಂದು ಒಳಗಡಗಿಸಿ ಕೊಂಡಿರುವುವು. ಈ ಸ್ಥಿತಿಯನ್ನು ಸುರಹೊನ್ನೆ, ಆವರಿಕೆ, ಅಗಸೆ,