ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

150 ಓಷಧಿ ಶಾಸ್ತ್ರ ) [IX ನೆಯ ದಲ್ಲಿ ಶಬ್ದ ವುಂಟಾಗುವುದರಿಂದ ಹುಡುಗರು ಈ ಕಾಯನ್ನು ಪಠಾಸುಕಾ ಯೆಂದು ಹೇಳುವರು. ಕಾಯಿಗಳಲ್ಲಿಯ ಬೀಜಗಳಲ್ಲಿಯ ಕೆಲವು ಬಹಳ ಹಗುರವಾಗಿರುವುದೂ ಉಂಟು. ಹೀಗಿರುವುದು ಗಾಳಿಯಿಂದ ಹಾರು ವುದಕ್ಕೆ ಬಹಳ ಅನುಕೂಲವು, ಕಾಯಿಗಳಲ್ಲಿ ಕೆಲವು ತಟ್ಟೆಯಾಗಿಯ, ಬೀಜವಿರುವ ಭಾಗಹೊರತು ಮಿಕ್ಕ ಭಾಗವೆಲ್ಲಾ ತೆಳ್ಳಗೂ ಇರುವುದುಂಟು, ಕರಚೀಕಾಯಿ, ಧೂಪದ ಮರದಕಾಯಿ, ಕಾಡುಹೊನ್ನೆಕಾಯಿ, ಇವೆಲ್ಲವೂ ಈಬಗೆಯಾದುವುಗಳೇ, ಕರಚೀಕಾಯಿಯಲ್ಲಿ ಬೀಜವು ಒಂದು ಅಂಚಿನಲ್ಲಿ ಸೇರಿಕೊಂಡಿರುವುದು ಕಾಡುಹೊನ್ನೆ ಕಾಯಿಯಲ್ಲಿಯ, ಧೂಪದ ಮರದ ಕಾ ಯಿಯಲ್ಲಿಯ, ಬೀಜವು ಮಧ್ಯದಲ್ಲಿರುವುದು. ಹೀಗೆಯೇ ಬೀಜಗಳಲ್ಲಿಯ ಅಂಕುರವು ಅಂಚಿನಲ್ಲಿಯಾಗಲಿ, ನಡುವೆಯಾಗಲಿ ಸೇರಿರುವುದು. 129 ನೇ ಪಟದಲ್ಲಿ ಈ ಬಗೆಯ ಬೀಜಗಳು ಕಾಣಿಸಲ್ಪಟ್ಟಿರುವುವು. ಇವುಗಳಲ್ಲಿ ಅಂಕು ರವೂ ಅಂಚಿನಲ್ಲಿಯಾಗಲಿ, ನಡುವೆಯಾಗಲಿ, ಸೇರಿರುವುದು. ಬೀಜಗಳ ಮೇ ವಿರುವ ರೋಮಗಳ ಅವು ಚೆದರಿ ಬೀಳುವುದಕ್ಕೆ ಅನುಕೂಲವಾದ ಸಾಧನ ಗಳಾಗಿಯೇ ಇರುವುವು. 130 ನೇ ಪಟದಲ್ಲಿ ಕಾಣಿಸಿರುವ ಬೀಜಗಳಲ್ಲಿರು ವಂತೆಯ 124-125 ನೇ ಪಟಗಳಲ್ಲಿ ಕಾಣುವ ಕಾಯಿಗಳಲ್ಲಿರುವಂತೆ ಯ ರೋಮಗಳಿದ್ದರೆ, ಇದು ಸುಲಭವಾಗಿ ಹಾರಿ ಎರಚಲ್ಪಡುವುದಲ್ಲವೆ ?