ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಬೀಜಗಳು ಮೊಳೆತು ಬೆಳೆಯುವ ಕುಮ. 151 ೧೦ ನೆಯ ಅಧ್ಯಾಯ. ಬೀಜಗಳು ಮೊಳೆತು ಬೆಳೆಯುವ ಕ್ರಮ. ಬೀಜಗಳ ಒಳಗಿನ ಸ್ಥಿತಿಯನ್ನು ಗಮನಿಸಿನೋಡಿದರೆ, ಅವು ಬಹು ಸೂಕ್ಷ್ಮವಾದ ಚಿಕ್ಕ ಗಿಡವನ್ನು ಒಳಗಡಗಿಸಿಕೊಂಡಿರುವ ಒಂದುಗೂಡೆಂದೇ ಹೇಳಬಹುದಾಗಿದೆ. ಬೀಜಗಳು ಬಲಿತ ಮೇಲೆ ಒಣಗಿಹೋಗುವುವು. ಒಳ ಗಿರುವ ಪಿಂಡವೂ ಸ್ವಂಭಿಸಿ ಇರುವುದು. ತೇವವಿಲ್ಲದೆ ಒಣಗಿರುವವರೆಗೂ ಬೀಜಗಳುಕೆಡದೇ ಇರುವುವು. ಬೀಜಗಳಲ್ಲಿ ತೇವಹತ್ತಿದರೆ ಬೇಗ ಕೆಟ್ಟು ಹೋಗುವುವು. ಆದುದರಿಂದಲೇ ಪೈರಿಡುವವರು ಎತ್ತುವುದಕ್ಕೆ ಉಪಯೋಗಿ ಸುವ ಬೀಗದಕಾಳುಗಳನ್ನು ಅಡಿಗಡಿಗೆ ಒಣಗಿಸಿಟ್ಟು ಕೊಳ್ಳುವರು. ಬೀಜಗಳು ಒಣಗಿರುವವರೆಗೂ ಮೊಳೆಯದೇ ಇರುವುವು. ತೇವ ತಗುಲಿದರೆ ಮೊಳೆ ಬಿಡಲಾರಂಭಿಸುವುವು. ಒಣಗಿದ್ದರೂ ಕೆಲವು ಬೀಜಗಳು ಶೀಘ್ರದಲ್ಲಿ ಕೆಟ್ಟು ಹೋಗುವುವು. ಬಹುಕಾಲದವರೆಗೆ ಕೆಡದೇ ಇರುವ ಬೀಜ ಗಳ ಉಂಟು, ಬತ್ತ, ರಾಗಿ ಮುಂತಾದ ಧಾನ್ಯಗಳು ಒಂದೆರಡು ವರುಷಗಳ ವರೆಗೂ ಕೆಡುವುವಲ್ಲ. ಅದಕ್ಕೆ ಮೇಲೆ ಸರಿಯಾಗಿ ಮೊಳೆಯತಕ್ಕವುಗಳಲ್ಲ. ಅವರೆ, ಬಟಾಣಿ, ತೊಗರಿ ಮುಂತಾದ ಬೇಳೆಯ ಜಾತಿಗಳ ಬಹಳ ದಿವಸ ನಿಲ್ಲತಕ್ಕವುಗಳಲ್ಲ, ಹುಣಿಸೆ, ಹೊನ್ನೆ, ಓತಿ, ಮುಂತಾದ ಬೀಜಗಳು ಬಹುದಿವಸಕೆಡದೇ ಇರುವ ಸ್ವಭಾವವುಳ್ಳವುಗಳು.