ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಬೀಜಗಳು ಮೊಳೆತು ಬೆಳೆಯುವ ಕುನ್ನು, 161 ಬಿದ್ದ ಮೇಲೆ ದೊಡ್ಡದಾಗಿ ಬೆಳೆದು ಎಲೆಗಳನ್ನು ಹೊಂದುವುವು. ಮಾವಿನಬೀಜ ದಲ್ಲಿ ಅಂಕುರದಳವು ಬಹಳ ಮಂದವಾಗಿರುವುದರಿಂದಲೂ,ಆಹಾರಪದಾರ್ಥವು ಬಹಳವಾಗಿ ಸಂಗ್ರಹಿಸಲ್ಪಟ್ಟಿರುವುದರಿಂದಲೂ, ಮೇಲಿನ ಮೊಳೆಯು ಒಡದು ಕೆಟ್ಟು ಹೋದರೂ, ಬೇರೆ ಹೊಸಮೊಳೆಗಳು ಹೊರಡುತ್ತಿರುವುವು. ಅ೦ಕುರ ದಳಗಳು ಹೆಚ್ಚು ಘನವಾಗಿಲ್ಲ ದುವುಗಳಲ್ಲಿ, ಇವು ಬೀದತೂಕನ್ನು ಬಿಟ್ಟು ಹೊರಕ್ಕೆ ಹೊರಡುವುವು, ಏಕಾ೦ಕುರ ದಳ ಬೀಜಗಳು ಪಾಯಕವಾಗಿ ಅಂಕುರಛೇದನ ವನ್ನು ಹೊಂದಿದುವುಗಳೇ, ಮತ್ತು ಆಬೀಜ ಗಳಲ್ಲಿ ಅಂಕುರದಳವೂ ಒಂದೇ ಇರುವುದು. ಈ ಬೀಜಗಳು ಮೊಳೆಯುವ ರೀತಿಯನ್ನು ತಿಳಿದುಕೊಳ್ಳ ಬೇಕಾದರೆ, ಈಚಲು ಬೀಜ ವನ್ನು ಉದಾಹರಣವಾಗಿ ತೆಗೆದು ಕೊಳ್ಳ ಬಹುದು. ಈಚಲುಬೀಜವು ಭೂಮಿಯಲ್ಲಿಯೇ ನಿಂ ತು, ಬಹಳ ನಿದಾನವಾಗಿ ಮೊಳೆತು, ಹೊರಕ್ಕೆ ಪಟ 136.--- ಮಾವಿನ ಸಸಿ, ಬರುವದು. ಆ ಬೀಜದ ಸಮುವಾದ ಕಡೆ ಯ, ನಡುವೆ ಇರುವ ಮೂಳೆಯ ಕೆಳ ತುದಿಯು ಹೊರಕ್ಕೆ ಹೊರಟು ಬೆಳೆದು, ನೆಲದೊಳಗೆ ನುಗ್ಗಿ ಹೋಗುವುದು. ಅಂಕುರದಳವು ಮಾತ್ರವೇ ಬೀಜದೊಳಗೆ ನಿಂತಿರುವುದು, ಇತರ ಭಾಗಗಳನ್ನೂ ಹೊರಕ್ಕೆ ಬಂದುಬಿಡುವುವು. ಮೊಳೆಯ ಕೆಳತುದಿಯು ಉದ್ದವಾಗಿ ಬೆಳೆದಮೇಲೆ, ದಪ್ಪನಾಗುವುದು. ಕೆಳಮುಖವಾಗಿ ಹೋಗುವ ಕೆಳಗಿನ ದಂಟಿನಲ್ಲಿ ಬೇರುಗಳುಂಟಾಗುತ್ತಿರುವಾಗಲೇ, ಮೊಳೆಯ | ಮೇಲುದಂಟು ಬೆಳೆದು ಭೂಮಿಯನ್ನು ಭೇದಿಸಿಕೊಂಡು, ಒಂದು ಕಡ್ಡಿಯಂತೆ 11