ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓಪ್ರಧಿ ಶಾಸ್ತ್ರ ) | ನೆಯ ಇವು ವಿಶೇಷವಾಗಿ ಸಮುದ್ರದ ಬಂಡೆಗಳ ಮೇಲೆ ಬೇರೂರಿದಂತೆ ಜೀವಿಸುತ್ತಿರು ವುವು. ಗಿಡಗಳು, ಮಲಿಕೆಗಳು,ಗರಿಕೆ ಮುಂತಾದುವುಗಳ ಹೀಗೆ ಚಲನ ಶಕ್ತಿಯಿಲ್ಲದವುಗಳ, ಈ ಕಾರಣದಿಂದಲೇ ಇವುಗಳನ್ನು ಜೀವವಿಲ್ಲದವು ಗಳೆಂದು ಹೇಳುವುದುಂಚಿತವಲ್ಲ. ದೇವವಿಲ್ಲದವುಗಳಿಗೆ ಸಂಚಾರಶಕ್ತಿಯಿಲ್ಲ. ಎಷ್ಟು ದಿವಸಗಳಾದರೂ ಹಾಕಿದ ಸ್ಥಳದಲ್ಲಿಯೇ ಬಿದ್ದಿರುವುದು ಮಾತ್ರವಲ್ಲದೆ, ಸ್ವಭಾವದಲ್ಲಿಯಾಗಲಿ, ಅಥವಾ ಸ್ವರೂಪದಲ್ಲಿಯಾಗಲಿ, ತಾವಾಗಿಯೇ ವ್ಯ ತ್ಯಾಸ ಹೊಂದಲಾರವು. - ಒಂದು ಕಲ್ಲು ಸಕ್ಕರೆಯ ಚರನ್ನಾಗಲಿ, ಅಥವಾ ಒಂದು ಕಲ್ಲನ್ನಾಗಲಿ, ಒಂದುಸ್ಥಳದಲ್ಲಿ ಹಾಕಿಟ್ಟರೆ, ಅವು ಎಷ್ಟು ದಿವಸವಾದರೂ ವ್ಯತ್ಯಾಸಹೊಂದದೆ ಒಂದೇರೀತಿಯಲ್ಲಿರುವುವು. ತೇವವಾಗಲಿ, ಅಥವಾ ಬಹಳ ಉಧ್ಯವಾಗಲಿ, ಇವಕ್ಕೆ ತಗುಲಿದಹೊರತು, ಆಕಾರದಲ್ಲಿ ವ್ಯತ್ಯಾಸವನ್ನು ಹೊ೦ದವು. ಯಾರಾದರೂ ಒಡೆದ ಹೊರತು ತುಂಡುಗಳಾಗವು ತಾವಾಗಿ ಬೆಳೆದು ಆಕಾರದಲ್ಲಿ ಉಬ್ಬು ವುದೂ ಇಲ್ಲ. ದೇವವುಳ್ಳವುಗಳಾದರೆ ಯಾವಾಗಲೂ ಒಂದೇ ರೀತಿಯಲ್ಲಿ ರದೆ, ಅಡಿಗಡಿಗೆ ಆಕಾರದಲ್ಲಿ ವ್ಯತ್ಯಾಸ ಹೊಂದುತ್ತಿರುವುವಲ್ಲದೆ, ಆಹಾ ರವನ್ನು ತೆಗೆದುಕೊಂಡು ವೃದ್ಧಿ ಹೊಂದಿ,ಆಕಾರದಲ್ಲಿ ಹೆಚ್ಚುತ್ತಲೇ ಬರುವುವು. ಕಲ್ಲು ಸಕ್ಕರೆ ಕರಗಿದನೀರನ್ನು ಶಾಕವಾದ ಒಂದು ಸ್ಥಳದಲ್ಲಿಟ್ಟಿದ್ದರೆ, ಆ ನೀರು ಸ್ವಲ್ಪ ಸ್ವಲ್ಪವಾಗಿ ಆವಿಯಾಗಿ ಹೋಗುತ್ತ, ಅದರೊಳಗಿನ ಸಕ್ಕರೆಯ ಸಣ್ಣ ಸಣ್ಣ ಹರಳುಗಳು ಆಕಾರದಲ್ಲಿ ಉಬ್ಬುತ್ತಾ ಬರುವುವು. ಘಟ್ಟಿಯಾದ ಪದಾರ್ಥವೂ ನೀರಿನಲ್ಲಿ ಕರಗಿರುವ ವಸ್ತುವೂ ಒಂದೇ ಆಗಿರುವುದರಿಂದ, ಆ ನೀರೊಳಗೆ ಸೇರಿದ್ದ ಸಣ್ಣಸಣ್ಣ ರೇಣುಗಳು, ನಾಲ್ಕು ಕಡೆಯಿಂದಲೂ ಸ್ವಲ್ಪ ಸ್ವಲ್ಪವಾಗಿ ಮೇಲೆ ಮೇಲೆ ಬಂದು ಸೇರುವುದರಿಂದ, ಆಕಾರದಲ್ಲಿ ಹೆಚ್ಚುತ್ತಾ ಬರುವುವು. ಜೀವದಂತುಗಳ ಬೆಳೆವಳಿಕೆಯೋ ಎಂದರೆ, ಹೀಗೆ ಮೇಲೆ ಮೇಲೆ ಹೊರಗೆ ವಸ್ತುಗಳು ಸೇರಿಸಲ್ಪಡುವುದರಿಂದ ಉಂಟಾಗತಕ್ಕುದಲ್ಲ. ಸದಾರ್ಥ