ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ದೇವವುಳ್ಳವುಗಳ ಗುಣವೂ ಲಕ್ಷಣವೂ ಮೊದಲನೆಯದು ಜೀವಾಣುವಿನ ಒಂದು ತುಂಡು, ಇದು ಕಟ್ಟೆ, ಕಾಲುವೆ ಮೊದಲಾದುವು ಗಳಲ್ಲಿ, ನೀರಿನ ಕೆಳಗೆ, ಕೆಸರಿನಲ್ಲಿ ವಿಶೇಷವಾಗಿ ಜೀವಿಸುತ್ತಿ, ರುವ ದು. ಇದನ್ನು ಅಂಗೈಯರು . ಅಮೀಬಾ ” ( Aneba) ಎಂದು ಹೇಳುವರು, ಇದಕ್ಕೆ ತಾನಾಗಿ ಸಂಚರಿಸುವ ಸಾಮರ್ಥ್ಯವುಂಟು. ಆಹಾರ ನನ್ನೂ ತೆಗೆದು ಕೊಳ್ಳುವುದು. ಇದು ಒಡೆದು ಬೇರೆಬೇರೆ ಎರಡುಜಂತುಗಳಾಗಿ ಬಿಡುವುದು. ಅಡಿಗಡಿಗೆ ಹೀಗೆ ಬೇರೆಯಾಗುತ್ತಿರುವುದರಿಂದ, ಈಜಂತುಗಳು ಹೇರಳವಾಗಿ ಹುಟ್ಟಿ ಹೆಚ್ಚುತ್ತಿರುವುವು. ಇವು ನೀರಿನಲ್ಲಿರುವ ಬೇರೆ ಜಂತುಗ ಳನ್ನಾಗಲಿ, ಅಥವಾ ಸೂಕ್ಷ್ಮವಾದ ಗಿಡಗಳನ್ನಾಗಲಿ, ಆಹಾರವಾಗಿ ಉಪ ಯೋಗಿಸಿಕೊಳ್ಳುವುವು, ಹಸುರು ಪದಾರ್ಥವಿಲ್ಲದಿರುವುದರಿಂದಲೇ, ತಾವಾಗಿ ಆಹಾರ ಪದಾರ್ಥಗಳನ್ನುಂಟು ಮಾಡಿಕೊಳ್ಳುವ ಶಕ್ತಿಯು ಇವುಗಳಿಗಿಲ್ಲ. ಆ ದುದರಿಂದ ಇವುಗಳನ್ನು ಸೂಕ್ಷ್ಮವಾದ ದಂತುಗಳೆಂದೇ ಎಣಿಸಬೇಕಾಗಿದೆ. ಚಿತ್ರದಲ್ಲಿ ಕಾಣಿಸಲ್ಪಟ್ಟ ಉಳಿದ ಮೂರು ಆಕೃತಿಗಳಲ್ಲಿಯ, ಈ ಜೀವಾಣುಗಳು ಸಣ್ಣ ಸಣ್ಣ ಗೂಡುಗಳಲ್ಲಿ ಇರಿಸಲ್ಪಟ್ಟಿರುವುವು. ಈ ಕಾರಣ ದಿಂದ ಈ ಮೂರೂ ಚಲನವಿಲ್ಲದುವುಗಳಾಗಿರುವುವು. ಎರಡನೆಯದರಲ್ಲಿ ಯ, ಮೂರನೆಯದರಲ್ಲಿಯ ಜೀವಾಣುಗಳೊಳಗೆ ಹಸುರು ಪದಾರ್ಥವು ತುಂಬಿರುವುದರಿಂದ, ಅವು ಸೂಕ್ಷ್ಮಗಳಾಗಿದ್ದರೂ, ತಾವಾಗಿಯೇ ತಮ್ಮ ಆಹಾ ರ ಪದಾರ್ಥಗಳನ್ನುಂಟು ಮಾಡಿಕೊಳ್ಳುವುವು. ನಾಲ್ಕನೆಯದರ ಜೀವಾಣುವಿ ನಲ್ಲಿ ಹಸುರುಪದಾರ್ಥವಿಲ್ಲದಿರುವುದರಿಂದಲೇ, ಇದು, ತನ್ನ ಆಹಾರವನ್ನು ತಾನೇ ಮಾಡಿಕೊಳ್ಳಲಾರದು. ಗಿಡಗಳನ್ನು ಯಂತ ಗಳೆಂದೇ ಹೇಳಬಹುದು. ಆದರೆ, ಮನುಷ್ಯರಿಂದ ಮಾಡಲ್ಪಟ್ಟ ಯಂತ್ರಗಳಂತೆ ಸುಲಭ ವಾದುವುಗಳಲ್ಲ. ಗಿಡಗಳೆಂಬ ಯಂತ್ರಗಳನ್ನು ಬಹಳ ತೊಡಕಾದ ಅದ್ಭುತ ಯಂತ)ಗಳಂತೆ