ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

254 ಓಷಧಿ ಶಾಸ್ತ್ರ (XIII ನೆಯ ಹಸುರಾಗಿ ಕಾಣುವ ರೇಣುಗಳೆ ಎಲೆಯ ಹಸುರಿನ ರೇಣುಗಳು. ಈ ರೇಣುಗಳು ಜೀವಾಣುವಿನಲ್ಲಿ ತುಂಬಿರುವುದರಿಂದಲೇ ಎಲೆಗಳು ಹಸುರಾಗಿ ಕಾಣುವುವು. ಎಲೆಗಳು ಹಸುರಾಗಿರುವುದು ಓಷಧಿಗಳಿಗೆ ಅವಶ್ಯವೆಂದೂ, ಇದ ರಿಂದ ಆಹಾರಗಳನ್ನು ಸಂಗ್ರಹಿಸುವ ಕೆಲಸವು ಇವುಗಳಿಗೆ ಸಾಧ್ಯವಾಗುವುದೆಂ ದೂ, ಹಿಂದೆ ಅನೇಕವೃತಿ ತಿಳಿಸಲ್ಪಟ್ಟಿದೆ. ಹಸಿಯಾಗಿರುವ ಭಾಗಗಳಲ್ಲಿ ಕಾ ಣುವಚಿಕ್ಕ ಗೂಡುಗಳಲ್ಲಿ ಎಲೆಯ ಹಸುರು ರೇಣುಗಳು ಹೇರಳವಾಗಿರುವುವು . ಇತರ ಕಡೆಗಳಲ್ಲಿರುವ ಚಿಕ್ಕ ಗೂಡುಗಳಲ್ಲಿ ಈ ಬಗೆಯ ಹಸುರುರೇಣುಗಳು ವಿಶೇಷವಾಗಿರುವುದಿಲ್ಲ. ಥಳಥಳನೆ ಹೊಳೆಯುವ ರೇಣುಗಳಲ್ಲಿ ಕೆಲವು ಪಿರೇಣುಗಳು, ಅಥವಾ ಹಿಟ್ಟಿನ ಪುಡಿಗಳು. ಈ ಎರಡುಬಗೆಯ ರೇಗ ಇನ್ನೂ ಕುರಿತು ಮುಂದಿನ ಅಧ್ಯಾಯದಲ್ಲಿ ವಿವರಿಸುವೆವು - ಎಳೆದಂಟಿನಲ್ಲಿ ನೆತ್ತಿಯನ್ನು ಹೆರೆದು ತೆಗೆದ ತುಂಡಿನಲ್ಲಿ, (203 ನೆಯ ಪಟವನ್ನು ನೋಡಿರಿ) ಎರಡು ನಾಳ ಕೂರ್ಚಸಮೂಹಗಳು ಕಾಣುವುವು. ದಂಟು ಎಳೆದಾಗಿರುವುದರಿಂದ ಈ ಸಮುಹಗಳು ಸೇರಿರದೆ ಸತ್ಯೇಕವಾಗಿರು ವುವು. ಈ ಎರಡಕ್ಕೂ ನಡುವೆ ಇರುವಚಿಕ್ಕ ಗೂಡುಗಳ ಸಮುದಾಯಕ್ಕೆ * ದಿಂಡಿನ ರೇಖೆ ?' ಯೆಂದು ಹೆಸರು. ನಾಳ ಕೂರ್ಚಗಳಿಗೆ ಒಳ ಭಾಗದಲ್ಲಿ ರುವ ದೊಡ್ಡಗೂಡುಗಳ ಸಮೂಹವಾದ ದಿಂಡನ, ಹೊರಗಿರುವ ಚಿಕ್ಕ ಗೂಡುಗಳ ಸಮೂಹವಾದ ಪಟ್ಟಿಯನ್ನೂ ಸೇರಿಸುವುದರಿಂದ, ಈಭಾಗಕ್ಕೆ ದಿಂಡಿನರೇಖೆಯೆಂದು ಹೆಸರಿಡುವುದು ಚಿತವಾಗಿದೆ. ಇಲ್ಲಿ, 203 ನೆಯ ಪಟದಲ್ಲಿ, ನಾಳ ಕೂರ್ಚಕ್ಕೆ ಹೊರಗೆ ಕಾ ಣುವ ಗೂಡುಗಳ ನಾದು ಸುತ್ತುಗಳ ಪಟ್ಟಿಯ ಹೊರ ಭಾಗವು. ಪಟ್ಟಿಯಲ್ಲಿ ನಾಳ ಕೂರ್ಚಗಳ ಭಾಗವೂ ಸ್ವಲ್ಪ ಸೇರಿರುವುದು. ಆ ದುದರಿಂದ ಆ ಕೂರ್ಚ ಸಮೂಹಗಳನ್ನು ಬಿಟ್ಟು ಉಳಿದ ಭಾಗಕ್ಕೆ ವಲ್ಕಲ” ವೆಂದು ಹೆಸರು.