ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಒಳಗಿನ ಸ್ವರೂಪ. 273 ರುವ ಭಾಗಗಳನ್ನೆಲ್ಲ ಒಳಗೊಂಡಿರುವ ಹಾಗೆ ಸೀಳಲ್ಪಟ್ಟಿದ್ದರೆ, ಅದರ ದಾರುವಿನಲ್ಲಿ, ದಿಂಡಿಗೆ ಸಮೀಪವಾಗಿ, ಉಂಗುರದ ಕೊಳವೆಗಳ , ತಿರಿಚು ಗೋಳ ವೆಗಳ, ಬಲೆಯ ಕೊಳವೆಗಳ, ಕಾಣುವುವು, ಮತ್ತು ಇವುಗಳಿಗೆ ಆಚೆ ತಗ್ಗು ಗೊಳವೆಗಳ ವೃದ್ಧಿ ಕೋಶವೂ, ಇವುಗಳಿಗೂ ಆಚೆಗೆ ಶಣವೂ ನಲವೂ ಕೂಡ ಚೆನ್ನಾಗಿ ಕಾಣುವುವು. ಹಾಗೆ ಉದ್ದವಾಗಿ ಸೀಳುವುದರಲ್ಲಿಯೇ, ನಡುಭಾಗವನ್ನು ಬಿಟ್ಟು ಎಂ ದಲೆ ದಿಂಡನ್ನು ಬಿಟ್ಟು, ನಡುವೆ ದಾರುವೂ, ಎರಡು ಪಕ್ಕಗಳಲ್ಲಿ ನಲವೂ ಸೇರಿರುವಂತೆ,ಒಂದುಪಕವಾಗಿ ಸೀಳಿದ ತುಂಡಿನೊಳಗೆ ಕಾಣುವದಾರುವಿನಲ್ಲಿ, ಮಂದವಾದ ಪಕ್ಕದ ತಡಿಕೆಗಳುಳ್ಳ ಸಾಧಾರಣವಾದ ಗೂಡುಗಳ, ಕೆಲವು ತ ಗುಗೊಳವೆಗಳ , ಇಟ್ಟಿಗೆಗಳನ್ನು ಕನವಾಗಿ ಅಡುಕಿಟ್ಟಂತೆ ಬಹಳ ಅಂದ ವಾಗಿ ಕಾಣುವ ಸಣ್ಣಗೂಡುಗಳ ಸಮುದಾಯವೂ, ಅಲ್ಲಲ್ಲಿ ಕಾಣುವುವು. (ಪಟ 213.) ಹೀಗೆ ಕ್ರಮವಾಗಿ ಕಾಣುವ ಗೂಡುಗಳ ಸಮುದಾಯವೇ ದಿಂ ಡಿನ ರೇಖೆಯ ತುದಿಯು. ಈ ರೇಖೆಗಳು ದಂಟಿನ ನಡುಭಾಗವನ್ನೂ ಸೇರಿಸಿ. ನೀಳಿದ ಕೆಲವು ತುಂಡುಗಳಲ್ಲಿ ಕಾಣುವುವು. ಹೊನ್ನೆ, ಹೂವರಳಿ, ಅಗಸೆ ಈ ಮರಗಳ ದಂಟಿನ ಒಳಗಿನ ಸ್ವರೂ ಪವು, ಹೆಚ್ಚುಕಡಿಮೆಯಾಗಿ, ಮುಖ್ಯಾಂಕಗಳಲ್ಲಿ ಒಂದೇ ವಿಧವಾಗಿಯೇ ಇರು ವುವು. ಇವುಗಳಲ್ಲಾ ದಂಟಿನ ವೃದ್ಧಿಜನಕಗಳು ಶೀಘ್ರದಲ್ಲಿಯೇ ವಲಯಾಕೃತಿಹೊಂದುವುವು. ಮರವು ಬಿದ್ದು ಹೋಗುವವರೆಗೂ ದಾರುವು ಅಧಿಕವಾಗುತ್ತಲೇ ಬರುವುವು, ನೀರು ಹೆಚ್ಚಾಗಿಲ್ಲದೆ ಮಿತವಾಗಿರುವ ಕಡೆಗಳಲ್ಲಿ ಎಲೆಗಳನ್ನೂ, ಕೊಂಬೆಗಳನ್ನೂ ಹೇರಳವಾಗಿ ಹೊಂದಿ ಬೆಳೆ ಯುವ ವೃಕ್ಷಗಳಲ್ಲೆಲ್ಲಾ ದಾರುವು ಅಧಿಕವಾಗುತ್ತಲೇ ಇರುವುವು. ಇದಕ್ಕೆ ಕಾರಣವು ಮುಂದಿನ ಅಧ್ಯಾಯದಲ್ಲಿ ವಿವರಿಸಲ್ಪಡುವುದು, ಉನ್ನತ, ತುರುವೆ, ಬೆಂಡೆ, ಈ ದಂಟುಗಳ, ಕುಂಬಳದ ಬಳ್ಳಿಯ ದಂಟ, ಅಧಿಕವಾಗಿ ದಪ್ಪನಾಗುವುದೂ ಇಲ್ಲ, ದಾರವೂ ಹೆಚ್ಚು ವುದಿಲ್ಲ . 18.