ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

290 ಓಷಧಿ ಶಾಸ್ತ್ರ ) [XIII ನೆಯ ಮೊಗ್ಗೆ ಮತ್ತು ಬೇರುಗಳ ತುದಿಯ ಸ್ವರೂಪವು 5, 32, 33 ನೆಯ ಪಟಗಳಲ್ಲಿ ಕಾಣಿಸಲ್ಪಟ್ಟಿರುವುವು. ಇವುಗಳೆರಡಲ್ಲಿರುವ ಗೂಡುಗಳನ್ನೂ ಆಕಾರದಲ್ಲಿ ಒಂದೇ ವಿಧ. ಎಲ್ಲಾ ಗೂಡುಗಳಲ್ಲಿಯ ಜೀವಾಣುವು ತುಂ ಬಿರುವುದು. ಗಮನಿಸಿ ನೋಡಿದರೆ ಜೀವಾಣುವಿನಲ್ಲಿ ಒಂದು ಉಂಡೆಯು ಕಾಣುವುದು. ಅದರಲ್ಲಿ ಮುಕ್ಕಾಲುಪಾಲನ್ನು ಈ ಉಂಡೆಯೇ ಆವರಿಸಿರುವುದು ಈ ಬಗೆಯ ಉಂಡೆಗಳು ಗೂಡುಗಳೊಳಗಿನ ಜೀವಾಣುವಿನಲ್ಲಿ ಎಲ್ಲಾ ಕಾಲಗಳಲ್ಲಿಯ ಇರುವುವು. ಈ ಉಂಡೆಯು ಜೀವಾಣುವಿನ ಮುಖ್ಯ ಭಾಗವು, ಗೂಡುಗಳೆಂದೊಂದೂ ಎರಡಾಗಿ ವಿಭಾಗ ಹೊಂದುವುದಕ್ಕೆ, ಈ ಉಂಡೆಯಲ್ಲಿಯೇ ಮೊದಲು ಆರಂಭಿಸಿ, ಆಮೇಲೆ ಇತರ ಭಾಗಗಳೂ ಬೇರೆ ಯಾಗಿ ಒಡೆಯುವುವು. ಈ ಉಂಡೆಯು ಬಹುಮುಖ್ಯವಾದ ಭಾಗವಾದುದರಿಂದ, ಇದನ್ನು ಜೀವಪರಮಾಣು?” ಅಥವಾ “ಜೀವಾಣು ವಧಾನ ಎಂದು ಹೇಳಿ ಬೇಕು. ಗರ್ಭಾಧಾನವೆಂಬುದು ಈ ಜೀವಪರಮಾಣುಗಳ ಸಂಯೋಗವೇ, ಗಿಡಗಳ ದಂಟು, ಎತಿ, ಮೊಗ್ಗೆ, ಬೇರು ಮೊದಲಾದ ಭಾಗಗಳನ್ನು ಕುಮವಾಗಿ ತಿಳಿದುಕೊಂಡೆವು. ಪುಷ್ಪಗಳೆಳಗಿನ ಸ್ವರೂಪವನ್ನೂ ತಿಳಿದು ಕೊಳ್ಳಬೇಕಲ್ಲವೆ ? ವೃಂತದ ಸ್ವರೂಪವೂ ದಂಟಿನ ಸ್ವರೂಪವನ್ನೇ ಅನು ಸರಿಸಿರುವಂತೆ, ಹೊರದಳಗಳು, ದಳಗಳು, ಇವುಗಳ ಸ್ವರೂಪವೂ ಸತುಗಳ ಸರೂಪದಂತಿರುವುದು. ಕೆಲವು ಹೊರದಳೆಗಳಲ್ಲಿ ಎಲೆಯ ಹಸುರಿನ ರೇಣು ಗಳು ಇರುವುದಿಲ್ಲ. ಕೆಲವುಗಳಲ್ಲಿರುವುವು. ದಳಗಳಲ್ಲಿಯಾದರೆ, ಅವು ಇರುವುದೇ ಇಲ್ಲ. ಇದಕ್ಕೆ ಬದಲಾಗಿ ಹಲವು ಬಗೆಯ ಬಣ್ಣಗಳನ್ನು ಹೋಂ ದಿದ ಬೇರೆ ರೇಣುಗಳಾಗಲಿ ನೀರಾಗಲಿ ಇರುವುವು. ಕೇಸರಗಳು, ಅಂಡ ಕೋಕ, ಇವುಗಳಲ್ಲಿಯ, ನಾಳಕೂರ್ಚಗಳ ಜೀವಾಣುಗಳಿಂದ ತುಂಬಿದ ಗೂಡುಗಳ ಇರುವುವು.