ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-298 ಓಷಧಿ ಶಾಸ್ತ್ರ ) [XIV ನೆಯ ಆದುದರಿಂದ, ಎಲೆಗಳ ಗೂಡುಗಳಲ್ಲಿರುವ ನೀರಿನಲ್ಲಿ, ಉಪ್ಪು ಮೊದಲಾದ ವಸ್ತುಗಳು ಹೆಚ್ಚಾಗುತ್ತಾ ಬರುವುವಲ್ಲವೆ ? ಈ ವಿಧವಾಗಿ ಉಪ್ಪುಗಳು ಹೆಚ್ಚಾಗಿ ನಿಂತು, ಮಂದವಾದ ನೀರುಳ್ಳ ಗೂಡುಗಳಿಗೆ ಸಮೀಪವಾಗಿಯ ಸುತ್ತಲೂ ಇರುವ ಒಳಗಡೆಯ ಕೆಲವು ಗೂಡುಗಳಲ್ಲಿ ನೀರು ಹೆಚ್ಚಾಗಿರು ವುದು, ನೀರು ಕಡಿಮೆಯಾಗಿರುವ ಗೂಡುಗಳಿಗೆ ಇವುಗಳಿಂದ ನೀರು ಹೋಗಿ ಸೇರುವುದು. ಇವೂಕೂಡ, ತಮ್ಮೊಳಗಿರುವ ನೀರು ಮಂದವಾದ ಮೇಲೆ, ಸಮೀಪದಲ್ಲಿರುವ ಗೂಡುಗಳೊಳಗಿನ ನೀರನ್ನು ಆಕರ್ಪಿಸಿಕೊಳ್ಳುವುವು. ಹೀಗೆಯೇ ಎಲೆಗಳಿಂದ ಹಿಡಿದು ಬೇರಿನವರೆಗೂ ಹಿಂಭಾಗದಿಂದ ನೀರು ಎಳೆಯ ಲ್ಪಡುವುದು, ಎಲೆಗಳಿಂದ ನೀರು ಆವಿಯಾಗಿ ಹೋಗುವುದೇ ನೀರೇತಕ್ಕೆ ಕಾರಣವೆಂದು ಕೆಲವರು ಹೇಳುವರು. ಆಂಗ್ಲೀಯರಲ್ಲಿ ಸಸ್ಯಶಾಸ್ತ್ರ ರು ಹೇಳ ವ ಅಭಿಪ್ರಾಯವೂ ಇದೇ, ಬೇರೆ ಕಾರಣಗಳೂ ಇರಬಹುದು. ಆ ಕಾರಣಗಳನ್ನು ಕುರಿತು ನಾವು ಇಲ್ಲಿ ವಿವರಿಸುವುದು ಅಸಾಧ್ಯವು, ನೀರು ಏರುವುದುಂಟೆಂದು ಮಾತು ನಮಗೆ ತಿಳಿದರೆ ಸಾಕಾಗಿದೆ. ಹುಣಿಸೆ, ಹೊನ್ನೆ, ಹೂವರಳಿ ಮುಂತಾದ ಗಿಡಗಳಲ್ಲಿ ಎಲೆಗಳು ಬಹ 'ಳ ಹೆಚ್ಚಾಗಿರುವುದರಿಂದ, ಆವಿಯಾಗಿ ಹೊರಟು ಹೋಗುವ ನೀರ ಹೆಚ್ಚಾ ಗಿಯೇ ಇರುವುದು. ನೀರಾವರಿಯಿಲ್ಲದೆ ಭೂಮಿಯು ಒಣಗಿದ ಕಡೆಗಳಲ್ಲಿಯೇ ಈ ಮರಗಳು ಬೆಳೆಯುವುವು. ಆದುದರಿಂದ ಬೇರಿನ ರೋಮಗಳಿಗೆ ನೀರು ಆಗಾಗ್ಗೆ ಸೇರುತ್ತಲೇ ಇರಬೇಕು. ನೀರು ಏರುವುದೂ ಬಹಳ ವೇಗವಾಗಿ ಯೇ ಇರಬೇಕು, ಸಾಧಾರಣವಾದ ಗೂಡುಗಳಲ್ಲಿ ನೀರು ಬಹಳ ವೇಗವಾಗಿ ವಿರುವುದಿಲ್ಲ. ಬಹಳ ವೇಗದಿಂದ ನೀರು ಸಂಚರಿಸುವುದಕ್ಕಾಗಿ, ಕೆಲವು ಗೂಡುಗಳು ದಾರುವಿನ ಭಾಗಗಳಾಗಿ ಬದಲಾಯಿಸಿರುವುವು. ಮತ್ತು ದಾ ರುವೂ ಹೆಚ್ಚಾಗುತ್ತಲೇ ಇರುವುದಕ್ಕೂ ಸಾಧನವು ಏರ್ಪಟ್ಟಿರುವುದು. ದಾರುವಿನ ನಾಳಗಳ ಮತ್ತು ಅದರ ಗೂಡುಗಳ ಮಾರ್ಗವಾಗಿ, ನೀರು