ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.] ಗಿಡಗಳ ದಳಕೆಯ ಕೆಲಸವೂ. 299 ಒಂದು ಘಂಟೆಯ ಕಾಲಕ್ಕೆ ಸರಾಸರಿಯಾಗಿ 40 ಅಥವಾ 50 ಅಂಗುಲದವರೆಗೆ ಸಂಚಾರ ಮಾಡುತ್ತಿರುವುದಾಗಿ ನಿರ್ಧರಿಸಿರುವರು, ದೊಡ್ಡ ಮರಗಳಲ್ಲಿ ದಾರು ಭಾಗಗಳು ಹೆಚ್ಚಾಗಿ ಉಂಟಾಗದಿದ್ದರೆ ನೀರು ಎಲೆಗಳಿಗೆ ಸೇರುವುದಿಲ್ಲ. ಆ ದುದರಿಂದಲೇ ವೃಕ್ಷಗಳಲ್ಲಿ ದಾರುವು ಬೆಳೆಯುತ್ತಲೇ ಇರುವುದು. ನೀರು ಸಂಚಾರ ಮಾಡುವುದು ಹೊಸದಾರುಗಳ ಮಾರ್ಗವಾಗಿಯೇ ಹಳೆಯ ದಾರುಭಾಗಗಳಲ್ಲಿ ನೀರು ವ್ಯಾಪಿಸುವುದಿಲ್ಲ. ಹೊಸ ದಾಗಿ ಉಂಟಾಗತಕ್ಕೆ ಎಳೆ ದಾರುಗಳಲ್ಲಿಯೂ ಕೂಡ, ಆ ದಾರುವು ಸರಿ ಯಾದ ಸ್ಥಿತಿಯಲ್ಲಿರುವವರೆಗೆ ಮಾತ್ರವೇ ನೀರು ಏರುವುದು. ಇದು ಒಣಗಿದ ರೆ, ಅಥವಾ, ಇದರಲ್ಲಿ ವಿಷವಸ್ತುಗಳು ಬಂದು ಸೇರಿದ್ದರೆ, ನೀರೇತವು ನಿಂತು ಹೋಗುವುದು. ನೀರು ದಾರುವಿನ ಹೊಸ ಭಾಗಗಳಲ್ಲಿಯೇ ಏರು ತಿರುವುದೆಂಬುದನ್ನು ಬಹಳ ಸುಲಭವಾಗಿ ನಿರೂಪಿಸಬಹುದು. ಒಂದು ಮರದ ದಂಟಿನಲ್ಲಿ ಎಲ್ಲಿಯಾದರೂ ಒಂದು ಕಡೆಯಲ್ಲಿ ಪಟ್ಟಿಯನ್ನು ಸಂಪೂ ರ್ಣವಾಗಿ ತೆಗೆದು ಬಿಸಾಡಿದರೆ, ಮೇಲಿನ ಕೊಂಬೆಗಳು ಬಾಡಿ ಹೋಗುವು ದಿಲ್ಲ. ಬೆಳೆಯುತ್ತಲೇ ಇರುವುವು. ಪಟ್ಟಿಯಸಂಗಡ ದಾರುವನ್ನೂ ಸ್ವಲ್ಪ ಆಳವಾಗಿ ಕಡಿದು ಹಾಕಿದರೆ ಗಿಡವು ಕೆಟ್ಟು ಹೋಗುವುದು. ಅನೇಕವೃಕ್ಷಗ ಇಲ್ಲಿ ಹಳೆಯದರುಗಳಿರಬೇಕಾದ ಕಡೆಗಳಲ್ಲಿ ಪೊಳ್ಳುಗಳಿದ್ದರೂ,ಮರಗಳಲ್ಲಿ ನೀರು ಸೇರುವುದರಿಂದ, ಹಳೆಯದಾರುವು ನೀರೇರುವುದಕ್ಕೆ ಉಪಯೋಗವಿ "ವೆಂದು ಊಹಿಸಬಹುದು. ನೀರಿನಲ್ಲಿ ತೇಲುತ್ತಲಾಗಲಿ ಮುಳುಗಿಯಾಗಲಿ ಬೆಳೆಯುವ ಗಿಡಗಳಲ್ಲಿ, ದಾರುವು ಹೆಚ್ಚಾಗಿರುವುದೇ ಇಲ್ಲ. (216 ನೆಯ ಪಟವನ್ನು ನೋಡಿರಿ) ಇವುಗಳಲ್ಲೆಲ್ಲಾ ನೀರು ವೇಗವಾಗಿ ಸಂಚರಿಸಬೇಕಾ ದುದಿಲ್ಲ. ಆ ಗಿಡಗಳಿಗೆ ನಾನಾ ಕಡೆಗಳಲ್ಲಿಯ ನೀರು ಇರುವುದರಿಂದ, ನೀ ರು ಒಳಹೊಕ್ಕ ಸಂಚರಿಸಬೇಕಾದ ಭಾಗಗಳು ಅದಕ್ಕೆ ಸಮೀಪವಾಗಿಯೇ ಇರು ವುವು. ಸಾಮಾನ್ಯವಾದ ಗೂಡುಗಳ ಮಾರ್ಗವಾಗಿಯೇ ಬೇಕಾದಷ್ಟು ನೀರು