ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ ಗಿಡಗಳ ಸ್ಪಭಾವವೂ ಆಕಾರವೂ, 15 ಗಳು ಒತ್ತಾಗಿ ಬೆಳೆದಿರುವ ತೋಪುಗಳಲ್ಲಿ, ಆಮರಗಳ ಮೇಲೆ ಹಚ್ಚುವ ಬಳ್ಳಿ ಗಳು, ಕೆಳಭಾಗದಲ್ಲಿ ಕವಲೊಡೆದು ಹಬ್ಬದೆ, ನೇರವಾಗಿ ಮೇಲುಮುಖಕ್ಕೆ ಏರಿ, ಮರದ ತುದಿಯ ಕೊಂಬೆಗಳನ್ನು ಸಮೀಪಿಸಿ, ಅಲ್ಲಿಯೇ ವಿಶೇಷವಾಗಿ ಹಬ್ಬಿ ಬೆಳೆಯುವುವು. ನಮ್ಮ ಮನೆಗಳಲ್ಲಿಯೂ, ತೋಟಗಳಲ್ಲಿ , ಹಂದರದಮೇಲೆ ಹಬ್ಬಿಸಲ್ಪಡುವ ಹಾಗಲ, ಪಡವಲ, ಅವರೆಮೊದಲಾದ ಬಳ್ಳಿ ಗಳು ಹಬ್ಬುವುದನ್ನು ಗಮನಿಸಿನೋಡಿದರೆ, ಇವೂ ಬೆಳಕಿಗೋಸ್ಕರವೇ ಬಿಸಿಲುಚೆನ್ನಾಗಿ ತಗುಲುವ ಹೊರಗಡೆಯಲ್ಲಿಯೇ ವಿಶೇಷವಾಗಿ ಕವಲೊಡೆದು ಹಬ್ಬಿ ಬರುವುದೆಂಬುದನ್ನು ಚೆನ್ನಾಗಿ ತಿಳಿಯಬಹುದು, ಹಂದರದ ಕೆಳಗೂ, ಕತ್ತಲೆಯುಳ್ಳ ಕಡೆಗಳಲ್ಲಿಯ ಕುಡಿಗಳ ಎಲೆಗಳ ವಿಶೇಷವಾಗಿ ಉಂ ಟಾಗವು, ಮರ, ಹುಲ್ಲು, ಗೆಡ್ಡೆ, ಮೊದಲಾದುವುಗಳಲ್ಲಿ, ಸಕಾಂಡ ವೆಂದೂ ಬೇರೆಂದೂ ಮುಖ್ಯವಾದ ಎರಡುಭಾಗಗಳಿರುವುವು. ಯಾವಸಸಿ ಗಳಲ್ಲಿ ನೋಡಿದರೂ ಪ)ಕಾಂಡವೆಂಬುದು ಒಂದೇ ಶಾಖೆಯುಳ್ಳುದಾಗಿರು ವುದು. ಬೆಳೆಯುತ್ತ ಬಂದಹಾಗೆ, ಕೆಲವು ಮರಗಳಲ್ಲಿ ಆ ಒಂದು ಶಾಖೆ ಯೆ ಅನೇಕ ಕವಲುಗಳಾಗಿ ಒಡೆದು ಹರಡಿಕೊಳ್ಳುವುವು. ಕೆಲವು ಗಿಡಗ ಇಲ್ಲಿ, ಸಕಾಂಡವು ಯಾವಾಗಲೂ ಒಂದೇ ಶಾಖೆಯಾಗಿರುವುದೇ ಸ್ವಭಾವವಾ ಗಿದೆ. ಅಡಿಕೆ, ತೆಂಗು, ಈಚಲು, ಮೊದಲಾದುವು ಇಂತವುಗಳೆಂಬುದನ್ನು ಮೊದಲೇ ಸೂಚಿಸಿರುತ್ತೇವೆ. ಸಕಾಂಡದ ಭಾಗಗಳಾದ ಶಾಖೆಗಳಲ್ಲಿರುವ ಭಾಗಗಳಾವುವೆಂದರೆ : ದಿಂಡು, ಎತಿ, ಹೂ, ಕಾಯಿ ಗುಳಿಗಳುಮೊದಲಾ ದುವು. ಶಾಖೆಗಳು, ಬಹಳ ಎಳೆ ದಾಗಿರುವ ಸ್ಥಿತಿಯಲ್ಲಿ ಗಿಣ್ಣು ಸಂದು ಗಳಲ್ಲಿ ಸುಳಿಗಳಾಗಿ ಸೇರಿಕೊಂಡಿರುವುವು. ಎಲೆಗಳು ದಿಂಡಿನಸುತ್ತಲೂ ಒಂದೊಂದು ಗಿಣ್ಣುಗಳಲ್ಲಿ ಒಂದೊಂದ ರಂತೆಯಾಗಲಿ, ಜತೆಜತೆಯಾಗಿಯಾಗಲಿ, ಅಥವಾ ಅದಕ್ಕಿಂತ ಹೆಚ್ಚಾಗಿಯಾ ಗಲಿ ಸೇರಿಕೊಂಡಿರುವುವು.