ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅದ್ಯಾ] ಗಿಡಗಳ ದಳಿಕೆಯ ಕೆಲಸವೂ. 303 ಬಂದು, ಕಾವಿನ ಮೂಲಕವಾಗಿ ಸತುಗಳೆಳ ಹೊಕ್ಕು, ವಿಸ್ತರಿಸಿಕೊಂಡ ನಾಳಕೊರ್ಚಗಳ ಸಮುದಾಯಗಳೇ. ಇವುಗಳಲ್ಲಿ ದೊಡ್ಡ ಭಾಗವೇ ದಾರು ವಾಗಿರುವುದು. ಶಣವು ಘನವಾದ ನರಗಳಲ್ಲಿ ಮಾತು ಇರುವುವು, ಸೂಕ್ಷ್ಮವಾದುವುಗಳಲ್ಲಿರುವುದಿಲ್ಲ, ಏತದಿಂದ ಬರುವನೀರು ಎಲೆಯ ನರದೊಳಗೆ ಹೊರಟು, ಅದರೊಳಗಿ ನ ಬಲೆಯ ಕಣ್ಣುಗಳ ಅಂಚಿನಲ್ಲಿರುವ ನರಳಿಗೆ ಬರುವುವು. ಈ ನರಗಳ ಅಂ ಚಿನಸುತ್ತಲೂ ಇರುವ ಗೂಡುಗಳಲ್ಲಿ ಅಡಗಿರುವ ಜೀವಾಣುವೆಲ್ಲಾ ಬೇಕಾದ ಷ್ಟು ನೀರನ್ನು ಈನರಗಳ ತುದಿಯಿಂದ ಹೊಂದುವುವು, ಎಲೆಗಳ ವಿಸ್ತಾರವಾದ ಭಾಗಗಳರಿಂದಲೂ ನೀರು ಆವಿಯಾಗಿ ಹೊರಕ್ಕೆ ಹೋಗುತ್ತಲೇ ಇರು ವುವು. ನಾವು ಗಿಡಗಳಿಂದ ಕೆಲವು ಕೆನೆಗಳನ್ನು ಕಡಿದು ಸ್ವಲ್ಪ ಹೊತ್ತು ಇಟ್ಟಿದ್ದರೆ, ಅವು ಸುಕ್ಕಿ ಬಾಡಿಹೋಗುವುವು. ನೀರು ಆವಿಯಾಗಿ ಹೊರಕ್ಕೆ ಹೊರಟುಹೋಗುವುದೇ ಇದಕ್ಕೆ ಕಾರಣವು. ಈ ಕೊಂಬೆಗಳು ಬಹಳ ಒಣಗಿ ಹೋಗದಂತೆ ಹಸಿಯಾಗಿರುವಾಗಲೇ ಅದರ ಅಡಿಯಭಾಗವನ್ನು ನೀರಿನಲ್ಲಿ ಅದ್ದಿಟ್ಟರೆ, ಆ ಕೊನೆಗಳು ಬಾಡದೆ ಉಲ್ಲಾಸಹೊಂದುವುವು. ಕೊನೆಗಳು ಹುಲುಸಾಗುವುವು. ಬಹಳ ಹೊತ್ತು ನೀರಿನಲ್ಲಿಯೇ ಇಟ್ಟಿದ್ದರೆ, ಪಾತದೊಳಗಣ ನೀರ ಕಡಿಮೆಯಾಗುವುದು, ಈ ಎರಡು ಅನುಭವಗ ೪೦ದ, ನೀರು ಎಲೆಗಳೊಳಗೆ ಸೇರುತ್ತಲೇ ಇರುವುದೆಂದೂ, ಹಾಗೆ ಸೇರುತ್ತಿ ರುವ ನೀರು ಆವಿಯಾಗಿ ಹೊರಕ್ಕೆ ಹೋಗುತ್ತಿರುವುದೆಂದೂ, ನಾವು ಊಹಿಸ ಬೇಕಲ್ಲವೆ ? ಮತ್ತು ಎಲೆಗಳಿಂದ ನೀರು ಆವಿಯರೂಪವಾಗಿ ಹೊರಕ್ಕೆ ಹೋಗುವುದನ್ನೂ ಸುಲಭವಾಗಿ ನಿರೂಪಿಸಿ ತೋರಿಸಬಹುದು.