ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.] ಗಿಡಗಳ ಬಾಳಿಕೆಯ ಕೆಲಸವೂ . 315 ದಿಂದಲೇ, ವಿಶೇಷವಾಗಿ ಕೆಲಸನಡೆಯುವ ಕಡೆಗಳೊಳಗೆಲ್ಲ ಪ್ರಾಣವಾಯು ವಿನ ಸಂಯೋಗವು ಹೆಚ್ಚು. ತಾವರೆಯ ಹೂಗಳು ಅರಳುವ ಕಾಲ ದಲ್ಲಿಯ, ಬೀಜವು ಮೊಳೆಯುವಾಗಲೂ, ಉಸ್ಮವು ಹೆಚ್ಚಾಗಿ ಉಂಟಾ ಗುವುದು. ಪಾಣವಾಯು ಸಂಯೋಗವು, ಜೀವಾಣುವು ಸರಿಯಾದ ಸ್ಥಿತಿಯಲ್ಲಿರು ವವರೆಗೂ, ನಡೆಯುತ್ತಲೇ ಇರುವುದು, ಹೀಗೆ ನಡೆಯುತ್ತಿರುವವರೆಗೂ ಪ್ರಾಣ ವಿರುತ್ತಿರುವುದೆಂದು ಹೇಳಬಹುದು. ಇದು ನಿಂತ ಕಡೆಯಲ್ಲಿ ಪ್ರಾಣವಿಲ್ಲ. ಎಂದರೆ ಜೀವಾಣುವು ಸ್ವಂಭಿಸುವುದು ಯಾವ ಕೆಲಸವೂ ನಡೆಯದು, ಬಹಳ ಹೊತ್ತಿನವರೆಗೆ ಪ್ರಾಣವಾಯುಸಂಬಂಧವಿಲ್ಲದ ಜೀವಾಣುವು ಕೆಟ್ಟೆ ಗುವುದು, ಜೀವಾಣುವಪ್ಪ ಕೆಟ್ಟು ಹೋಗುವುದೇ ಸಾವೆನಿಸುವುದು. ಓಷಧಿಗಳಲ್ಲಿ ಎಲೆಯ ಹಸುರುರೇಣುಗಳಿಲ್ಲದ ಗಿಡಗಳ ಕೆಲ ವುಂಟು. ಇವು ಹಿಟ್ಟನ್ನು ಮಾಡಿಕೊಳ್ಳತಕ್ಕ ಶಕ್ತಿಯಿಲ್ಲದುವುಗಳು. ಬೇರೆ ಗಿಡಗಳಿಂದಲಾಗಲಿ, ಜಂತುಗಳಿಂದಲಾಗಲಿ, ಹಿಟ್ಟಿನ ರೇಣುಗಳನ್ನೊ, ಅಥವಾ ಜೀವಾಣುವಿನಂತಿರುವ ವಸ್ತುಗಳನ್ನೋ, ಹೊಂದಿಯೇ ಇವು ಬಾಳಬೇಕು. ಅಣಬೆ ಅಥವಾ ನಾಯಿಕೊಡೆ ಎಂದು ನಾವು ಕರೆಯುವ ಗಿಡಗಳೆಲ್ಲವೂ ಈಬಗೆಯಾದುವುಗಳೆ, (226, 22 7 ನೆಯ ಪಟವನ್ನು ನೋಡಿರಿ.) ಇವುಗಳಿಗೆ ಆಹಾರವನ್ನು ಕೊಡುವುದಕ್ಕಾಗಿ ಬೇರೆ ಗಿಡಗಳಾಗಲಿ, ಜಂತುಗ ಳಾಗಲಿ, ಅವುಗಳ ಭಾಗಗಳಾಗಲಿ ಇರಬೇಕು. ಬದನಿಕೆ, ಮುಂತಾದುವು ಗಳು ಆಶ)ಯ ವೃಕ್ಷಗಳ ಮೇಲೆಯೇ ಬೆಳೆಯುವುವೆಂದು ಮೊದಲೇ ಹೆಳ ಲ್ಪಟ್ಟಿದೆ. ಈ ಗಿಡಗಳಲ್ಲಿ ಎಲೆಗಳು ಇರುವುದರಿಂದ ಬೆಳಕಿನ ಸೇರುವೆಯಿಂ ದಾದ ಕೆಲಸವೂ ನಡೆಯುವುದು. ಹಿಟ್ಟಿನ ರೇಣುಗಳ ಇರುವುವು. ನೀರನ್ನು