ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯ] ಬೆ: ರು. ದರ ಒಂದುಗಿಡವನ್ನು ಬೇರುಸಹಿತ ಕಿತ್ತು, ಸ್ವಲ್ಪ ಹೊತ್ತು ಇಟ್ಟಿದ್ದರೆ, ಅದು ಬಾಡಿ ಸುರುಟಿಕೊಳ್ಳುವುದು. ಹೀಗೆ ಬಾಡಿ ಸುರುಟಿಕೊಂಡ ಗಿಡವನ್ನು ತೆಗೆದುಕೊಂಡು, ಅದರ ಬೇರನ್ನು ನೀರಿನಲ್ಲಿ ಅದ್ದಿ ಇಟ್ಟರೆ, ಸ್ವಲ್ಪ ಹೊತ್ತಿಗೆ ಮೇಲೆ, ಅದರ ಬಾಡಿದ ಸ್ಥಿತಿಯನ್ನು ಬಿಟ್ಟು, ಮೊದಲಿದ್ದ ಸ್ಥಿತಿಯನ್ನೆ ಹೊ೦ದಿಬಿಡುವುದು. ಈವಿಚಾರಗಳಿಂದ ನಾವು ತಿಳಿದುಕೊಳ್ಳ ಬಹುದಾದುದೇನೆಂದರೆ ; ಗಿಡ ವನ್ನು ಭೂಮಿಯೊಳಗಿಂದ ಕಿತ್ತು ಹಾಕಿದ ಮೇಲೆ, ಸೂರ್ಯನ ತಾಪವೂ, ಗಾಳಿಯ ಈ ಗಿಡದಲ್ಲಿರುವ ನೀರನ್ನು ಆವಿಯಾಪದಿಂದ ಎಳೆದುಬಿಡು ವುವು. ಗಿಡವು ಬಾಡಿ ಸುರುಟಿಕೊಳ್ಳುವುದಕ್ಕೆ ಇದೇ ಕಾರಣವು. ಅದರ ಬೇರನ್ನು ನೀರಿನಲ್ಲಿ ಅದ್ದಿದ ಮೇಲೂ, ಗಿಡದೊಳಗಿನ ಜಲಾಂಶವು ಆವಿಯಾಗಿ, ಹೋಗುತ್ತಲೇ ಇರುವುದು ; ಆದರೆ ಅದಕ್ಕೆ ತಕ್ಕಂತೆ, ಕಡಕೂಡಲೆ ಬೇರಿ ನಮಲಕವಾಗಿ ನೀರು ಗಿಡದೊಳಗೆ ವ್ಯಾಪಿಸುತ್ತಲೇ ಇರುವುದರಿಂದ, ಗಿಡ ವು ಬಾಡದೆ, ಹುಲುಸಾಗಿಯೇ ಇದ್ದುಕೊಂಡಿರುವುದು, ಗಿಡದ ಬೇರು, ಭೂಮಿಯೋಳಗಣ ನೀರನ್ನು ಬೇರಿನ ಮೂಲಕ ಎಳೆದುಕೊಳ್ಳುವುದು, ಈ ನೀರು ದಂಟುಗಳ ಮೂಲಕ ಎಲೆಗಳಿಗೂ ಕೊಂಬೆಗಳಿಗೂ ವ್ಯಾಪಿಸುವುವು. ಈ ಹಿಂದೆ ತೋರಿಸಲ್ಪಟ್ಟಿರುವ ಸುರಹೊನ್ನೇಸಸಿಯ ಚಿತ್ರವನ್ನು ನೋಡಿ ದರೆ, ಅದರ ಬೇರು ಕೆಳಮುಖವಾಗಿ ಹಬ್ಬಿ ಹೋಗುವುದು ಸ್ಪಷ್ಟ ವಾಗುವುದು. ಇದಕ್ಕಿಂತಲೂ ಚಿಕ್ಕದಾದ ಕಂದುಗಳಲ್ಲಿಯ, ಮೊಳೆಗಳ ಯ, ಬೀಜವು ಯಾವಕಡೆಗಾಗಿದ್ದರೂ, ಬೇರು ಕೆಳಮುಖವಾಗಿಯೇ ಹೋಗುವುವು. ಹೀಗೆ ಕೆಳಮುಖವಾಗಿ ಹೋಗುವ ಗುಣವು ಬೇರುಗಳಲ್ಲಿ ಬಹುಮುಖ್ಯವಾದುದು. ಮೊಳೆಯ ಬೇರುಗಳು ಕೆಳಮುಖವಾಗಿ ಹೋದ ಲ್ಲದೆ, ನೆಲದೊಳಗಣ ನೀರನ್ನು ಎಳೆದುಕೊಳ್ಳುವುದಸಾಧ್ಯವು, ಮತ್ತು ನೇರವಾಗಿ ಹೋದರೆ ಮಾತ) ವೇ ಪಕ್ಕಗಳಲ್ಲಿ ಕವಲುಗಳು ಹೊರಟು