ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

38 ಓಷಧಿ ಶಾಸ್ತ್ರ ) IV ನೆಯ ಲವೆ ? ಇವೂ ಕೊಂಬೆಗಳ ದಂಟಿನ ರೂಪಾಂತರಗಳೆ, ಇದರಲ್ಲಿ ಕೊಂಬೆ ಗಳ ಸ್ವಭಾವವಾವುದೂ ಸ್ಪಷ್ಮವಾಗಿ ತಿಳಿಯದಿರುವುದರಿಂದ, ನೋಡಿದರೂ ಇದನ್ನು ಕೊಂಬೆಯೆಂದು ಹೇಳುವುದಕ್ಕಾಗುವುದಿಲ್ಲ, ಮಲವಹ, ಗೆಡ್ಡೆ, ಇವೆರಡೂ ಕೊಂಬೆಗಳ ಸ್ವರೂಪದಿಂದ ಬಿಡಲ್ಪಟ್ಟಿದ್ದರೂ ಇವು ಕೊಂಬೆಯ ಗುಣಗಳನ್ನೇ ಹೊಂದಿರುವುದು ವ್ಯಕ್ತವಾಗಿ ತಿಳಿಯುವುದು. ಸುವರ್ಣ ಗೆಡ್ಡೆ ಯ ಗಿಡಗಳಲ್ಲಿ ಗಿಣ್ಣಾಗತಿ, ಗಿಣ್ಣಿನ ಮಧ್ಯವಾಗಲಿ, ಕಾಣುವುದಿಲ್ಲ. ಮೊಗ್ಗೆ ಗಳುವಾತ) ಅಲ್ಲಲ್ಲಿ ಕುಮುತಪ್ಪಿ ಇರುವುವು. ದಂಟಬೇರುಗಳು ಇರುವು ದೂ ಉಂಟು, ಈ ವಿಧವಾಗಿ ವ್ಯತ್ಯಾಸ ಹೊಂದಿದ ಕೊಂಬೆಗಳನ್ನು ಕಂದಗ ಳೆಂದು ಹೇಳಬಹುದು. ಗಿಡ ವೊಂದಕ್ಕೆ ಉರುಳುಗೆಡ್ಡೆಗಳು ಅನೇಕ ವಾಗಿ ಉಂಟಾಗುವಂತೆ ಕಂದಗಳುಂಟಾಗವು, ಕಂದವೆಂಬುದು ಒ೦ ದೊ೦ದು ಗಿಡಕ್ಕೆ ಒಂದೊಂದರಂತೆಯೇ ಇರುವುದು, ಉರುಳುಗೆಡ್ಡೆಯ ಗಿಡದಲ್ಲಿ, ಸಕಾಂಡದ ಕೆಲವು ಶಾಖೆಗಳು ನೆಲ ದೊಳಗೆ ನುಗ್ಗಿ ಬೆಳೆಯುವುದರಿಂದ, ಆಗಿಡದಲ್ಲಿ ಗೆಡ್ಡೆಗಳು ಹಲವು ಉ೦ ಟಾಗುವುವು. 23 ನೇ ಆಕೃತಿಯನ್ನು ನೋಡಿರಿ) ಸುವರ್ಣಗೆಡ್ಡೆಯ ಗಿಡ ದಲ್ಲಿ ಸಕಾಂಡವು ಕವಲೊಡೆಯದಂತೆಯೇ, ಮೊತ್ತಕ್ಕೆ ಎಲ್ಲವೂ ದಪ್ಪ. ನಾಗಿ, ಒ೦ದೇ ಕಂದವಾಗುವುದು. ಸಾಧಾರಣವಾಗಿ ಕಂದದ ಮೇಲ್ಬಾಗದಲ್ಲಿ ರುವ ಹಳ್ಳದಿಂದ ಹೊರಕ್ಕೆ ಎದ್ದು ಬರುವ ಭಾಗವೇ ಅದರ ಎಲೆಗಳಾ ಗಿರುವುವು. ಮಲನಹ, ಗೆಡ್ಡೆ, ಕಂದ ಈ ಮರ ರಯ ಮೊಗ್ಗೆಗಳು ತುಂ ಬಿರುವುದರಿಂದ, ಇವುಗಳನ್ನು ಕತ್ತರಿಸಿ ತುಂಡುಗಳಾಗಿ ಮಾಡಿ, ಆತುಂಡು ಗಳನ್ನು ನಟ್ಟು ಬೆಳೆಯಿಸುವುದೇ ಬಳಕೆಯಾಗಿರುವುದು. .