ಈ ಪುಟವನ್ನು ಪ್ರಕಟಿಸಲಾಗಿದೆ

೭೨

ಮೇಲೆ ಹರಿದಾಡುತ್ತಿದ್ದ ಅವಳ ಉದ್ದವಾದ ಜಡೆ ಮಾತ್ರ ಮೂರ್ತಿಗೆ ಕಾಣಿಸುತ್ತಿತ್ತು. ಆ ಜಡೆಯ ಪರಿಚಯವೂ ಮರ್ತಿಗಿತ್ತು. ಆದುದರಿಂದಲೇ ಮೂರ್ತಿಗೆ ಪಾತ್ರೆ ಬೆಳಗುತ್ತಿದ್ದವಳು ನಲಿನಿ ಎಂದು ಗೊತ್ತು.

ನಲಿನಿ ಪ್ರಭೆಯು ದೊಡ್ಡಮ್ಮನ ಮಗಳು. ಅದೇ ಊರಿನವಳು. ತಾಯಿತಂದೆ ಇಲ್ಲದ ತಬ್ಬಲಿ. ನಲಿನಿ ಹುಟ್ಟಿದ ವರ್ಷವೇ ತಂದೆ ತೀರಿ ಹೋಗಿದ್ದ. ಎರಡು ವರ್ಷಗಳ ತರುವಾಯ ಅವಳ ತಾಯಿ ಆತ್ಮಹತ್ಯ ಮಾಡಿಕೊಂಡಿದ್ದಳು. ಅಂದಿನಿಂದ ಪ್ರಭೆಯ ತಾಯಿತಂದೆಯರೇ ನಲಿನಿಗೂ ತಾಯಿತಂದೆ. ಅವಳ ಚಿಕ್ಕಮ್ಮ ಅಕ್ಕನ ಅನಾಥ ಮಗಳನ್ನು ಬಹಳ ಆದರದಿಂದ ಸಾಕುತ್ತಿದ್ದಳು.

ನಲಿನಿಯ ತಾಯಿಯ ಆತ್ಮಹತ್ಯದ ಏಷಯ ಜನರು ಅನೇಕ ವಿಧವಾಗಿ ಹೇಳುತ್ತಿದ್ದರು. ಸತ್ತು ಹೋದ ತನ್ನ ತಾಯಿಯ ವಿಷಯವಾಗಿ ಜನರ ಮಾತು ಕೇಳಿ ಕೇಳಿ ನಲಿಸಿಯ ಮನಸ್ಸು ನೊಂದುಹೋಗಿತ್ತು. ಅವಳ ಚಿಕ್ಕಪ್ಪ ಅವಳ ಮದುವೆಯ ಸಲುವಾಗಿ ಬಹಳ ಪ್ರಯತ್ನ ಪಟ್ಟಿದ್ದರೂ 'ತಾಯಿಯ ಶೀಲ ನಡತೆಗಳು ಚನ್ನಾಗಿರಲಿಲ್ಲ. ಮಗಳೂ ಅವಳ ದಾರಿ ಹಿಡಿಯದಿರಲಾರಳು' ಎಂದುಕೊಂಡು ಅವಳಿಗೆ ಹದಿನೈದು ವರ್ಷಗಳು ತುಂಬಿದ್ದರೂ ಯಾರೂ ಅವಳನ್ನು ಮದುವೆಯಾಗಿರಲಿಲ್ಲ. ಮೂರ್ತಿಗವಳದು ಚಿಕ್ಕಂದಿನಿಂದಲೂ ಗೊತ್ತು. ತಾಯಿ ಕೆಟ್ಟವಳಾದರೆ ಮಗಳ ಅಪರಾಧವೇನು ? ಎಂದವನು ಕೇಳುತ್ತಿದ್ದ. ಮೂರ್ತಿ ಸಣ್ಣವನಾಗಿದ್ದಾಗ ನಳಿನಿಯೊಡನೆ ಆಡುತ್ತಿದ್ದ. ಮರದಿಂದ ಅವಳಿಗೆ ಹೂ ಕೊಯ್ದು ಕೊಡುತ್ತಿದ್ದ. ಅವಳಿಗೆ ಚಿತ್ರ ಬಿಡಿಸಿ ಕೊಡುತ್ತಿದ್ದ. ದೊಡ್ಡವನಾದಂತೆ ಅವರಿಬ್ಬರೊಳಗೆ ಮಾತುಕತೆ ನಿಂತುಹೋಗಿತ್ತು. ಮೂರ್ತಿ ಬೆಂಗಳೂರಿಗೂ ಹೋದ. ಇನ್ನೊಂದು ಕಾರಣವೇನೆಂದರೆ ಅವನ ತಂದೆ ನಲಿಸಿಯೊಡನೆ ಮಾತನಾಡಕೂಡದೆಂದು ಮಾಡಿದ ಆಜ್ಞೆ. ಆಜ್ಞೆಗೆ ಮೂರ್ತಿ ಹೆದರದವನಾದರೂ ತಾಯಿಗೆ ತೊಂದರೆಯಾದೀತೆಂಬ ಭಯದಿಂದ ಸುಮ್ಮನಿದ್ದ. ಅವಳೊಡನೆ ಮಾತಾಡಿ ನಾಲೈದು ವರ್ಷಗಳಾಗಿ ಹೋಗಿದ್ದವು. ಅವ ಸಿಗೆ ಅವಳೊಡನೆ ಮಾತು ಬಿಡುವುದೂ ಕಷ್ಟವಾಗಿರಲಿಲ್ಲ. ಬೆಂಗಳೂರಿಗೆ