ಈ ಪುಟವನ್ನು ಪ್ರಕಟಿಸಲಾಗಿದೆ

೭೪

ಅಪರೂಪದಲ್ಲೆಲ್ಲಾದರೂ ಒಂದು ನಗು ನಲಿನಿಯ ದುಃಖಾವೃತವಾಗಿದ್ದ ಮುಖದಲ್ಲಿ ನೋಡಿದರೆ ಆಗವಳ ಮುಖವು ಅರೆಬಿರಿದ ಕುಮುದದಂತೆ ತೋರುತ್ತಿತ್ತು. ಪ್ರಭೆಯ ಬಣ್ಣ ಗುಲಾಬಿಮಿಶ್ರಿತವಾದ ಬಿಳುಪು. ನಲಿನಿ ಕಪ್ಪುಮಿಶ್ರಿತವಾದ ಕೆಂಪು, ಪ್ರಭೆಯ ಕಣ್ಣುಗಳು ಚಪಲ ಚಂಚಲ. ಸ್ಥಿರ ಗಂಭೀರ ನಳಿನಿಯ ಕಣ್ಣುಗಳು. ಆ ಕಣ್ಣುಗಳು ಏನನ್ನಾದರೂ ನೀಡುತ್ತಿರುವಾಗ ಹೇಳಲಸಾಧ್ಯವಾದ ಒಂದು ತರೆದ ಲಾವಣ್ಯವು ಅವಳ ಮುಖದ ಮೇಲೆ ನಲಿಯುತ್ತಿತ್ತು; ಬೆಳಕನ್ನು ತೋರಿಸಿದರೆ ಜಿಂಕೆ ಮರಿ ಆಶ್ಚರ್ಯದಿಂದ ನೋಡುವಾಗ ಹೇಗೋ ಹಾಗೆ.

ಮೂರ್ತಿ ಮೂರು ದಿನಗಳಿಂದಲೂ ಮರಹತ್ತಿ ನಲಿನಿಗೆ ತಿಳಿಯದಂತೆಯೇ ಅವಳು ಮಾತ್ರ ಬೆಳಗುವಾಗ ಅವಳನ್ನು ನೋಡುತ್ತಿದ್ದನು. ಪ್ರಭೆಯನ್ನು ತಿಂಡಿ ಕೊಟ್ಟು ಮನೆಗೆ ಕರೆತಂದು ಹೂ ಕೊಟ್ಟು ಕಳುಹಿಸುತ್ತಿದ್ದ, ನಿನ್ನ ತಾಯಿಗೆ ಕೊಡೆಂದು ಹೇಳಿ. ನಲಿನಿಗೂ ಆರು ತಲುಪುವುದೆಂದು ಅವನಿಗೆ ಗೊತ್ತು. ಚಿಕ್ಕಂದಿನ ತುಂಟಾಟಿಕೆಯ ನಲಿಸಿಯು ಎಂದೂ ಮಾಡದಿದ್ದ ಅಧಿಕಾರವನ್ನು, ಸ್ಥಿರ-ಗಂಭೀರ ನಸುನಗಳ ನಲಿನಿಯ ರೂಪವು ಮೂರ್ತಿಯು ಹೃದಯದ ಮೇಲೆ ನಡೆಸತೊಡಗಿತು.

ಮೂರ್ತಿಯ ತಾಯಿಗೂ ಅನಾಥೆ ನಲಿನಿಯ ಮೇಲೆ ಅಪಾರ ಪ್ರೇಮ... ಗಂಡನು ಊರಿನಲ್ಲಿಲ್ಲದಾಗ ಅವಳನ್ನೂ ಪ್ರಭೆಯನ್ನೂ ಮನೆಗೆ ಕರೆದುಕೊಂಡು ಬಂದು ಜಡೆಹೆಣೆದು ತಿಂಡಿ ಕೊಟ್ಟು ಉಪಚರಿಸುತ್ತಿದ್ದಳು. ನಲಿನಿಯ ವಿಷಾದಮಯಜೀವನಕ್ಕಾಗಿ ಎಷ್ಟೋ ಸಾರಿ ಯಾರಿಗೂ ಕಾಣದಂತೆ ಅವಳು ಕಣ್ಣೀರು ಸುರಿಸಿದ್ದಳು. 'ದೇವರೇ, ನಲಿನಿ ಒಳ್ಳೆಯವನ ಮಡದಿಯಾಗಿ ಸುಖಸಂತೋಷದಿಂದಿರುವಂತೆ ಮಾಡು' ಎಂದವಳು ನಲಿನಿಯನ್ನು ನೋಡಿದಾಗಲೆಲ್ಲಾ ಮನಸ್ಸಿನಲ್ಲಿಯೇ ಮೊರೆ ಕೊಡುತ್ತಿದ್ದಳು.

ಮೂರ್ತಿ ಬಂದು ಆರು ದಿನಗಳಾಗಿದ್ದವು. ಆ ದಿನ ಸಾಯಂಕಾಲ ಅವನ ತಾಯಿ ಹಿತ್ತಲು ಜಗುಲಿಯ ಮೇಲೆ ಕುಳಿತು ನಲಿನಿಯ ತಲೆ ಬಾಚುತ್ತಿದ್ದಳು. ಮೂರ್ತಿ ಮರಹತ್ತಿ ಹೂ ಕೊಯ್ಯುತ್ತಿದ್ದ ನಲಿನಿಗಾಗಿ. ಪ್ರಭೆ