ಈ ಪುಟವನ್ನು ಪ್ರಕಟಿಸಲಾಗಿದೆ

ಅವನಿಗೆ ಒಪ್ಪಿಗೆ ಇಲ್ಲ. ಮತ್ತೆ ಆ ಸಮಯದಲ್ಲಿ ಅಷ್ಟೊಂದು ಯೋಚಿಸುವಂತೆಯೂ ಇರಲಿಲ್ಲ ಅವನ ಮನಸ್ಸು !

"ಏನು ತೋರಿತೋ! ತನ್ನ ಕಾಲುಗಳನ್ನು ಹಿಡಿದುಕೊಂಡು 'ನನ್ನನ್ನು ಕೊಂದುಬಿಡು ಎನ್ನುತ್ತಿದ್ದ ಅವಳನ್ನು ಹಿಡಿದೆತ್ತಿ-ಕಣ್ಣೀರಿನಿಂದ ತೋಯ್ದ ಮುಖವನ್ನು ಒರಸಿ, ಅವಳ ಅಗಲವಾದ ಹಣೆಗೆ ಭಕ್ತಿಯಿಂದ ಮುತ್ತಿಟ್ಟು 'ಅಳಬೇಡ ಲತೀ, ನಾವಿಬ್ಬರೂ ಜೊತೆಯಾಗಿ ಹೋಗೋಣ. ನನ್ನೊಡನೆ ಬರಲು ನಿನಗೆ ಬೇಸರವಿಲ್ಲ ತಾನೆ ?' ಎಂದು ಕೇಳಿದ.

“ತಿರುಗಿ ಅವಳವನ ಕಾಲುಗಳನ್ನು ಹಿಡಿದು-'ಅವನ ಕೈ ಹಿಡಿದು ಬಾಳುವುದಕ್ಕಿಂತ ನಿನ್ನ ಕೈಯಿಂದ ನನಗೆ ಸಾವೇ ಹಿತ. ನನ್ನನ್ನು ಕೊಂಡುಬಿಡು' ಎಂದಳು.

"ಪುನಃ ಅವಳನ್ನು ಹಿಡಿದೆತ್ತಿ, ಅವಳ ಮುಖವನ್ನು ಎರಡು ಕೈಗಳಿಂದ ಹಿಡಿದು, ಅವಳ ಶಾಂತ-ಗಂಭಿರ ನಯನಗಳಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದ. ಮತ್ತೆ-'ತಯಾರಾದೆಯಾ ಲತೀ?' ಎಂದ. ಆರೆಗಳಿಗೆಯ ಹಿಂದೆ ಆಳುವಿನಿಂದ ಕಳೆಗುಂದಿದ್ದ ಮುಖ ನಗುವಿನಿಂದ ಅರಳಿತು. ಅವನನ್ನೆ ತದೇಕದೃಷ್ಟಿಯಿಂದ ನೋಡುತ್ತ 'ಹೂಂ' ಎಂದುವು ಅವಳ ಕಣ್ಣುಗಳು. ಅವಳ ಕಣ್ಣುಗಳಲ್ಲಿ ಆ ಮೂಕ ಅನುಮತಿಯನ್ನು ಓದಿ ಆತ ತಡೆಯಲಾರದೆ ಹೋದ; ಹತ್ತಿರ ಸೆಳೆದು ಅವಳ ಮುಖವನ್ನು ತನ್ನೆದೆಯಲ್ಲಿ ಅವಿಸಿಕೊಂಡ. ಮತ್ತೆ ಒಂದೇ ಒಂದು ಕ್ಷಣದಲ್ಲಿ ಅವನ ಸೆಳೆತವು ಸಡಿಲಾದಾಗ ಅವಳು ಶವವಾಗಿದ್ದಳು. ಅವಳ ಬೆನ್ನಿನಿಂದಾಗಿ ಎದೆಯಲ್ಲಿ ಹೊರಟ ಅವನ ಚೂರಿ ಅವಳ ಶರೀರದಲ್ಲಿತ್ತು. ಒಂದರೆಕ್ಷಣದ ಮೊದಲು ಅರಳಿ ಅವಳ ಮುಖವನ್ನು ಬೆಳಗಿಸಿದ್ದ ನಗುವೂ, ಆ ಕಣ್ಣುಗಳ ಶಾಂತ ನೋಟವೂ ಹಾಗೆಯೇ ಇದ್ದುವು.

“ಆದರವನಿಗದೊಂದೂ ಕಾಣದು. ರಕ್ತದ ಮಡುವಿನಲ್ಲಿ ಬಿದ್ದಿದ್ದು ಶರೀರ ಅವನಿಗೆ ಕಾಣಿಸಲಿಲ್ಲ. ಜಾತಿಬಂಧನದ ಆಚ ನಿಂತು

೯೫