ಈ ಪುಟವನ್ನು ಪರಿಶೀಲಿಸಲಾಗಿದೆ

ಹಾಗಾಗಿರಲಿಲ್ಲ. ತಂದೆ-ತಾಯಿಲ್ಲದ ತಬ್ಬಲಿಯನ್ನು ಸಾಕಿ ಮುಂದೆ ತಂದು ಮನುಷ್ಯನನ್ನಾಗಿ ಮಾಡಿದ್ದರು. ತನ್ನ ಪ್ರೀತಿಯ ಮಗಳನ್ನು ಕೊಟ್ಟು ಪುರಸ್ಕರಿಸಿದ್ದರು. ಅದರ ಪ್ರತಿಫಲ ಈ ರೀತಿಯಾಗಬಹುದೆಂದು ಅವರು ಕನಸಿನಲ್ಲಿ ಸಹ ಚಿಂತಿಸದ ಮಾತಾಗಿತ್ತು. ಈಗ....?

“ಪಾಪನನ್ನು ನೆನೆಸಿಕೊಂಡು ಎಂದೂ ಅಳದಿದ್ದ ನಾನೂ ಆ ದಿನ ಚಿಕ್ಕಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತೆ, ತಲೆ ತಲೆ ಹೊಡೆದುಕೊಂಡೆ. ಅವಳ ಗಂಡನನ್ನು ಕೊಂದೇಬಿಡುತ್ತೇನೆ ಎಂದುಕೊಂಡೆ. ನೆನಸಿಕೊಂಡರೆ ಈಗಲೂ ಹಾಗೆಯೇ ಆಗುತ್ತೆ.

"ಪಾಪ ಕಾಗದ ನೋಡಿದಳು. ನಾನೆಣಿಸಿದಂತೆ ಅವಳ ಅತ್ತು, ಕರೆಯಲಿಲ್ಲ. ಬೇರೆ ಯಾವ ವಿಧದಲ್ಲಿ ತಾನು ನೆಂದಿರುವೆನೆಂದು ತೋರ ಗೊಡಲಿಲ್ಲ. ಅವಳ ಶಾಂತತೆಯನ್ನು ನೋಡಿ ನಾಚಿ ನನ್ನನ್ನು ನಾನೇ ಸಂತೈಸಿಕೊಂಡೆ. ಆದರೂ ಒಳಗೊಳಗೇ ಒಂದು ಭಯ; ಯಾರಿಗೂ ಹೇಳದೆ ಎಲ್ಲಾದರೂ ಜಾಗ ಆತ್ಮಹತ್ಯೆ ಮಾಡಿಕೊಂಡರೇನು ಗತಿ? ಈ ವಿಷಯ ದಲ್ಲಿ ಮಾತ್ರ ನನ್ನ ಹೆಯು ತಪ್ಪಾಯ, ನಾನವಳನ್ನು ಎಡೆಬಿಡದಿರು ವದನ್ನು ನೋಡಿ ಅವಳು 'ಏನಣ್ಣಾ, ಎಲ್ಲಾದರೂ ಬಾವಿಗೆ ಬಿದ್ದು ಬಿಟ್ಟೇನು ಎಂತ ಭಯವೋ ?' ಎಂದು ಒಂದು ಒಣ ನಗು ನಕ್ಕಳು. 'ಹಾಗೇನೂ ಇಲ್ಲ ಪಾಪ-ನೀನೊಬ್ಬಳೇ ಇದ್ದರೆ ಸುಮ್ಮನೆ ಚಿಂತಿಸಿ ಚಿಂತಿಸಿ ನೊಂದುಕೊಳ್ಳುತ್ತಿ' ಎಂತ ಬಾಯಿ-ಹಾರಿಸಿದೆ. 'ನೆಂದು ಕೊಂಡರೆ, ತಾನೆ ಫಲ ಏನು ? ಹಾಗೇನಾದರೂ ಫಲ ಇದ್ದಿದ್ದರೆ ಈ ಎರಡು ವರ್ಷಗಳಲ್ಲೇ ಅದೆಲ್ಲಾ ಬರುತ್ತಿತ್ತು' ಎಂದಳು. ಊಹಿಸಿದ್ದರೂ ಗೊತ್ತಿಲ್ಲದವನಂತೆ “ ಎರಡು ವರ್ಷಗಳ ಮೊದಲೇ ಹೀಗಾಗುವುದೆಂದು ನಿನಗೆ ಹೇಗೆ ಗೊತ್ತು ಪಾಪ?' ಎಂದು ಪ್ರಶ್ನಿಸಿದೆ. ಪಾಪ ಎರಡು ವರ್ಷ ಗಳಿಂದಲೂ ಹೇಳದಿದ್ದ ಆ ದಿನದ ಸುದ್ದಿಯನ್ನು ಆಗ ನನಗೆ ಹೇಳಿದಳು. ವಸಂತ, ನಾನು ಊಹಿಸಿದಂತೆ ಆ ದಿನ ಪಾಪ ಅವನನ್ನು ' ಇಂಗ್ಲೆಂಡಿಗೆ

ಹೋಗಬಾರದೆಂದು ಪ್ರಾರ್ಥಿಸಿದಳಂತೆ. ಎಷ್ಟಾದರೂ ಹುಡುಗತನ

೧೧೭