ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ಕಂಡ ಗೌರಮ್ಮನವರು

ಮಖಂಡಿಯಲ್ಲಿ ಸೇರಿದ ಕ. ಸಾ. ಸಮ್ಮೇಲನದ ಮಂಟಪದಲ್ಲಿ ಗೌರವರ್ಣದ, ಅಷ್ಟು ಎತ್ತರವಲ್ಲದ, ತೆಳ್ಳಗಿದ್ದರೂ ಹಾಗೆ ಕಾಣದ, ಒಬ್ಬ ಮಹಿಳೆ ಕುಳಿತದ್ದನ್ನು ನೋಡಿದೆ. ಉಟ್ಟದೊಂದು ಬಾರಿಯ ಬಟ್ಟೆ; ತೊಟ್ಟಿದ್ದೂ ಜಾದಿಯೋ, ಮtಂದು ಹರಳಿನ ಮೂಗುಬಟ್ಟು, ಉಳಿದ ಯಾವ ಆಭರಣವೂ ಇಲ್ಲ, ಕಣ್ಣುಗಳಲ್ಲಿ ಅದೊಂದು ಬಗೆಯ ಒಳನೋಟ, ಮುಖದಲ್ಲಿ ಅದೇನೋ ಒಂದು ಗಂಭೀರಭಾವ, ಆದರೂ ಯಾರಾದರೂ ಮಾತನಾಡಿಸಿದರೆ ಮೊದಲು ನಗೆ, ಆಮೇಲೆ ಮಾತು. ಒಮ್ಮೊಮ್ಮೆ ನಗುವಷ್ಟೇ ಸುಸುಳಿ, ಮಾತುಬಾರದೆ ಉಳಿಯುತ್ತಿತ್ತು. ಒಮ್ಮೆ ನೋಡಿದರೆ ಸಾಕು; ಇವರ ಪರಿಚಯವಾಗಬೇಕು ಎನಿಸು ವಂತಹ ವ್ಯಕ್ತಿತ್ವ.

ಅವರು ಕೊಡವರೆಂದು ತಿಳಿದಾಗ ನನಗೆ ತುಂಬ ಕುತೂಹಲವಾಯಿತು. ಮತ್ತೆ ವಿಚಾರಿಸುವಾಗ ಅವರೇ ಶ್ರೀಮತಿ ಗೌರಮ್ಮ—ಮಿಸೆಸ್ ಬಿ. ಟಿ. ಜಿ. ಕೃಷ್ಣ ——ಎಂದು ತಿಳಿದು ಬಹಳ ಸಂತೋಷವಾಯಿತು.

ಅದಕ್ಕೂ ಮೊದಲು 'ರಂಗವಲ್ಲಿ' ಕಥಾಸಂಗ್ರಹದ ಕಾರ್ಯದಲ್ಲಿ, ಪತ್ರವ್ಯವಹಾರದಿಂದ ಅವರ ಪರಿಚಯವಾಗಿತ್ತು. ಹಿಂದೆ ' ಜಯಕನಾ೯ಟಕ ' ದ ಸಣ್ಣಕತೆಗಳ ಸ್ಪರ್ಧೆಯಲ್ಲಿ ಮೆಚ್ಚುಗೆಯನ್ನು ಪಡೆದ ' ಒಂದು ಪುಟ್ಟ ಚಿತ್ರ ' ಓದಿದಾಗ, ಅದನ್ನು ಬರೆದವರ ಬಗ್ಗೆ ಏನೋ