ಈ ಪುಟವನ್ನು ಪರಿಶೀಲಿಸಲಾಗಿದೆ
೧೩೦

'ರಾಣಿ' ಎಂದ. ರಾಜಮ್ಮ ನನ್ನ ಕಡೆಗೊಮ್ಮೆ ಕೃತಜ್ಞತೆಯಿಂದ ನೋಡಿ, 'ಏನು ಮನು ?' ಎಂದಳು. ಪಾಪ, ಅವಳಿಗೆ ಗೊತ್ತಿರಲಿಲ್ಲ-ಆರುವ ಮೊದಲು ದೀಪ ಜೋರಾಗಿ ಉರಿಯುವದೆಂದು, “ ರಾಣಿ, ರಾಣಿ, ರಾಣ ' ಎಂದು ಕೂಗುತ್ತ ಆತ ಅವಳ ಕೈಗಳನ್ನು ಹಿಡಿದುಕೊಂಡ. ಇಲ್ಲೆ ಇದ್ದೇನೆ, ನಾನು ಏನು ?' ಎಂದು ರಾಜಮ್ಮು ಕೇಳಿದಳು. ಪುನಃ ಇನ್ನೊಮ್ಮೆ 'ರಾಣಿ' ಎಂದು ಜೋರಾಗಿ ಚೀರಿದ ಆತ, ಆರು ಅದೇ ಅಂತ್ಯ,

ಬೆಳಗಿನ ಹತ್ತುಗಂಟೆಯಾಗಿತ್ತು ಮರುದಿನ ನಾನು ಮನೆಗೆ ಹೋಗುವಾಗ ಮಕ್ಕಳಿಬ್ಬರೂ ಸ್ಕೂಲಿಗೆ ಹೋಗಿದ್ದರು. ಪಾರ್ವತಿ ಹೋದೊಡನೆಯೇ 'ಎಲ್ಲಿಗೆ ಹೋಗಿದ್ರಿ? ರಾತ್ರಿನೇ ಹೋದ್ರೂ, ಬೆಳ ಗಾಗಿತ್ತೋ ? ಯಾರಿಗೆ ಕಾಯ್ದೆ?' ಎಂದು ಮುಂತಾಗಿ ಪ್ರಶ್ನೆಗಳ ಮಳೆಯನ್ನೇ ಸುರಿಸಿಬಿಟ್ಟಳು. ಆದರೆ ಆಗ ಅವಳ ಪ್ರಶ್ನೆಗಳಿಗೆ ಪ್ರತ್ಯ ತರವನ್ನು ಕೊಡುವ ಸ್ಥಿತಿಯಲ್ಲಿರಲಿಲ್ಲ ನನ್ನ ಮನಸ್ಸು. ಹಿಂದಿನ ದಿನದ ಆ ಕೋಳಿ, ಕೆದರಿದ ಕೂದಲಿನ ಊದಿದ ಕಣ್ಣುಗಳ ಬಾಡಿದ ಮುಖದ ರಾಜಮ್ಮ, ಅವಳ ಮಕರೋದನ ಎಲ್ಲಾ ಕಣ್ಣುಮುಂದೆ ಕಟ್ಟಿದಂತಿತ್ತು, ನನ್ನಿ ದಿರು ಪಾರ್ವತಿಯೇ ನಿಂತಿದ್ದರೂ ನನ್ನ ಕಣ್ಣುಗಳಿಗೆ ರಾಜಮ್ಮನ ಬಾಡಿ ಬೆಂಡಾಗಿದ್ದ ಆ ಮುದಿ ಕಾಣಿಸುತ್ತಿತ್ತು,

ನಾನು ಮುಕನಂತೆ ಬೆಪ್ಪಾಗಿ ನಿಂತಿರುವುದನ್ನು ನೋಡಿ ಪಾರ್ವ ತಿಗೆ ಆಶ್ಚರ್ಯವೇ ಆಗಿರಬೇಕು. ಹಿಂದಿನ ದಿನದ ನನ್ನ ವಿಪರೀತದ ಕೆಲಸ ದಿಂದಲೇ ನಾನು ಹಾಗಿರುವದೆಂದು ಅವಳು ಬಲು ಕೊಂದುಕೊಂಡಳು. 'ನಿನ್ನೆ ಇಡೀ ದಿನ ನಿದ್ರೆಯಲ್ಲ; ಹೊತ್ತಿಗೆ ಸರಿಯಾಗಿ ಊಟವಿಲ್ಲ. ಇನ್ನಾ ದರೂ ಫಲಾಹಾರ ಮಾಡಿ ವಿಶ್ರಾಂತಿ ತಕೊಳ್ಳಿ' ಎಂದು ಕಾಫಿ ತಿಂಡಿ ಯನ್ನು ತಂದಿಟ್ಟುಕೊಂಡು ಬಲವಂತಪಡಿಸತೊಡಗಿದಳು. 'ಈಗೇನೂ ಬೇಡ ಪಾರ್ವತಿ, ಸ್ವಲ್ಪ ಮಲಗಿ ನಿದ್ರೆ ಮಾಡಿದರೆ ಎಲ್ಲಾ ಸರಿಯಾಗುತ್ತೆ' ಎಂದು ಬಟ್ಟೆಯನ್ನು ಸಹ ಬದಲಾಯಿಸದೆ ಹಾಗೆಯೇ ಬಿದ್ದುಕೊಂಡೆ. ನಾನು ನಿದ್ರೆ ಮಾಡಲೆಳಸುವೆನೆಂದೆಣಿಸಿ ಪಾರ್ವತಿ ಹೊರಗೆ ಹೊರಟಳು.