ಈ ಪುಟವನ್ನು ಪರಿಶೀಲಿಸಲಾಗಿದೆ

೧೪

ಕಂಬನಿ

ಮುಗಿಲಿನ ವರೆಗೆ ಹಬ್ಬಿ ನಿಂತ ಬೆಟ್ಟವನ್ನೂ ಅದರಲ್ಲೆಲ್ಲ ನೆಟ್ಟು ನಿಂತ fಡಗಳನ್ನೂ ನೋಡುತ್ತ, “ನೋಡಿ, ಎಂತಹ ರಮಣೀಯ ದೃಶ್ಯ!” ಎಂದರು ಗೋಪಾಲಯ್ಯ. “ ನನಗೆ ನಿಮ್ಮ ಕಣ್ಣಲ್ಲ ಎಂದರು ಗೌರಮ್ಮ, "ಮತ್ತೆ ನಿಮ್ಮ ಸ್ಥಳವಾವುದು ?' ನಾನೆಂದೆ. “ ನನ್ನದು ಬಹಳ ಸುಂದರ ವಾಗಿದೆ. ನಾವಿಬ್ಬರೇ ಹೋಗೋಣ, ಈ ಜನರ ದೃಷ್ಟಿ ತಾಕೀತು ನನ್ನ ಆ ಸ್ಥಳಕ್ಕೆ” ಎಂದರವರು.

ಅದರಂತೆಯೇ ಮರುದಿನ ನಾವಿಬ್ಬರೇ ಹೊರಟೆವು. ಅದೂ ಕಾಡಾ ದರೂ ದಾರಿಯಿತ್ತು. ಸ್ವಲ್ಪ ದಿಬ್ಬ ಹತ್ತಿದ ಮೇಲೆ, ಕೆಳಗೆ ದೂರದ ವರೆಗೆ ಬಯಲು ಹಬ್ಬಿದೆ. ಅಲ್ಲೊಂದು ಹೊಳೆ, ಥಳಥಳ ಹೊಳೆಯುತ್ತ ಸಾಗಿದೆ. ನಾನು ಹೋದ ಸಮಯದಲ್ಲಿ ಬಂಜೆಭೂಮಿ; ಬೆಳೆಗಾಲದಲ್ಲಾ ದರೆ ಬಯಲೆಲ್ಲ 'ಹಸಿರು ಹಾಸಿ 'ನಂತಿರುತ್ತದಂತೆ. ಅಲ್ಲಿಯೇ ಒಂದು ಕೃತ್ರಿಮ ಆಸನ ಸಿದ್ಧಪಡಿಸಿದ್ದಾರೆ ಗೌರಮ್ಮನವರು, ತಾವೊಬ್ಬರೇ ಬಂದು ಹಾಗೆಯೇ ನೋಡುತ್ತ ಕೂಡುವುದಕ್ಕೆಂದು. ಮಳೆಗಾಲದಲ್ಲಿ ಮಳೆಯ ಪರಿವೆಯಿಲ್ಲದೆ ಅಲ್ಲಿ ನೋಡುತ್ತ ಕುಳಿತಿರುತ್ತಿದ್ದರಂತೆ ಗೌರಮ್ಮ, ಅಲ್ಲಿಂದ ಇಳಿಯುತ್ತ ಇಳಿಯುತ್ತ ನದಿಯ ದಾರಿಗೆ ಬಂದೆವು. ಒಂದು ಲಾರಿ-ಇವರದೇ-ಕಾಫಿ ಬೀಜ ತರುವಂತಹದು-ಬರುತ್ತಿತ್ತು. 'ಅವರಿದ್ದಾರೆಯೇ ನೋಡಿ' ಎಂದರು. ಮುಂದೆಯೇ ಇದ್ದಾರಲ್ಲ ! ಕಾಣುವದಿಲ್ಲವೇ ನಿಮಗೆ?' ಎಂದೆ. ಅವರು ಬಿಟ್ಟು ಬಿದ್ದು ನಗಹತ್ತಿದರು, ನಾನು ಪೆಟ್ಟು ಬಿದ್ದು ಕೇಳಿದೆ: “ಏನದು?' ಎಂದು ಅವರು ಹೇಳಿದರು: “ ನೋಡಿ, ನಾನು ಮೊನ್ನೆ ಮಡಿಕೇರಿಗೆ ಹೋದಾಗ ದಾರಿಯ ಒಂದು ಬದಿಯಿಂದೆ ಹೋಗುತ್ತಿದ್ದೆ. ನನ್ನ ಹಿರಿಯಣ್ಣ ಅದೇ ದಾರಿಯಿಂದ ಎದು ರಾಗಿ ಬರುತ್ತಿದ್ದ. ನನಗೆ ಕಾಣಲಿಲ್ಲ. ಏನು ಗೌರಮ್ಮ, ಯಾವಾಗ ಬಂದೆ ? ಹಾಗೆ ಹೊರಟಿದ್ದೀಯಲ್ಲ !' ಎಂದು ಆರಂಭಿಸಿದ. ನನಗೆ ಬಹಳ ನಾಚಿಕೆಯಾಯಿತು. ಈಗ ಬೇಗನೆ ಕಣ್ಣಿನ ಚಿಕಿತ್ಸೆ ಮಾಡಿಸುವುದೆಂದು ನಿರ್ಧರಿಸಿದ್ದೇನೆ. ತಾರೀಖು ಗೊತ್ತಾಗಿದೆ. ನನ್ನಣ್ಣನೊಡನೆ ಬೆಂಗಳೂರಿಗೆ ಹೊಗುರುವೆ. ನಾಲ್ಕು ಕಣ್ಣು' ಆಗದಂತೆ ಕಳೆಗೊಳಿಸಲು ಕೇಳಿ ಕೊಂಡಿದ್ದೇನೆ ಡಾಕ್ಟರನ್ನು-ನೋಡಬೇಕು' ಎಂದರು.