ಈ ಪುಟವನ್ನು ಪರಿಶೀಲಿಸಲಾಗಿದೆ

ನಾನು ಕಂಡ ಗೌರಮ್ಮನವರು

೧೭

ಶ್ರೀ ಗೋಪಾಲಯ್ಯನವರೂ ಗೌರಮ್ಮನವರನ್ನು ತುಂಬ ಪ್ರೀತಿಸುತ್ತಿ ದ್ದರು. ಗೋಪಾಲಯ್ಯನವರು ಬರೆದ ಒಂದು ಕಾಗದದಲ್ಲಿ ಹೀಗಿದೆ: ನೀವು ನನ್ನ ಗೌರಮ್ಮನಿಗೆ ಬರೆದ ಕಾಗದ ನೋಡಿದೆ. ಅದರಲ್ಲಿ ಮಾಸ್ತಿಯವರು ಮತ್ತೆ ಬೇಂದ್ರೆಯವರೂ ಸಹ, ರಾಮ-ಲಕ್ಷ್ಮಣರಂತೆ ನಮ್ಮ ದಂಡ ಕಾರಣ್ಯಕ್ಕೆ ಬರುವವರಾಗಿ ತಿಳಿದೆ. ನನ್ನ ಗೌರಮ್ಮ-ಶಬರಿಗಂತೂ ಹಿಗ್ಗೆ ಹಿಗ್ಗು. ನೀವು ಪ್ರಕಟಿಸುವ 'ಚಿಗರಿಗಿಂತಲೂ ಚಿಗರಿಬಿಟ್ಟಿದ್ದಾಳೆ.

ಗೌರಮ್ಮನವರಲ್ಲಿ ದೇಶಭಕ್ತಿಯ ಉಜ್ವಲವಾಗಿತ್ತು. ಹತ್ತು, ಹನ್ನೆರಡು ವರುಷಗಳಿಂದ ಸಂಪೂರ್ಣವಾಗಿ ಖಾದಿ ಧರಿಸುತ್ತಿದ್ದರು. ಬಾದಿಯನ್ನು ಉಡ-ತೊಡುವವರನ್ನು ಕಂಡರೆ ಅವರಿಗೆ ತುಂಬಸಂತೋಷ, ಮಹಾತ್ಮಾ ಗಾಂಧಿಯವರೊಮ್ಮೆ ಕೊಡಗಿಗೆ ಒಂದಾಗ, ಶ್ರೀ ಮಂಜು ನಾಥಯ್ಯನವರಲ್ಲಿ ಬಂದರಂತೆ. ಆಗ ಗೌರಮ್ಮನವರು ತಮ್ಮ ಮನೆಗೂ ಮಹಾತ್ಮರನ್ನು ಕರೆದರಂತೆ. ಸಮಯವಿಲ್ಲದ್ದರಿಂದ ಅವರು ಹೋಗಲು ಅಷ್ಟ ಆತುರಪಡಲಿಲ್ಲವಂತೆ. ಗೌರಮ್ಮನವರು ' ಫಾಸ್ಟ' ಆರಂಭಿಸುವೆ ಸಂದು ಹೇಳಿ ಕಳಿಸಿದರು; ಹೆದರಿ ಒಂದ ಮುದುಕ. ಗೌರಮ್ಮ ತಮ್ಮ ಮೈಮೇಲಿನ ಎಲ್ಲ ಆಭರಣ ಬಿಚ್ಚಿ ಕೊಟ್ಟುಬಿಟ್ಟರಂತೆ. ಮಹಾತ್ಮರು ಗೋಪಾಲಯ್ಯನವರನ್ನು ಕರೆದು “ ನಿಮ್ಮ ಆಕ್ಷೇಪಣೆ ಇಲ್ಲವಷ್ಟೇ ?' ಎಂದರಂತೆ. ಅವಳಿನ್ನು ಆಭರಣ ಬೇಡದಿದ್ದರಾಯಿತು !' ಎಂದು ನಕ್ಕು ನುಡಿದರಂತೆ ಗೋಪಾಲಯ್ಯ, ಆಗ “ ಹರಿಜನ" ದಲ್ಲಿ ಮಹಾತ್ಮರು ಈ ವಿಷಯದಲ್ಲಿ ಒಂದು ಲೇಖನ ಬರೆದರಂತೆ. ನನಗಿದನ್ನು ಮಡಿಕೇರಿ ಯಲ್ಲಿ ಒಬ್ಬ ಸ್ನೇಹಿತರು ಹೇಳಿದರು. ನಾನು ಬಂದು ಈ ವಿಷಯ ನೀವೂ ನನಗೆ ತಿಳಿಸಲಿಲ್ಲವಲ್ಲ!' ಎಂದೆ. ಇಲ್ಲಿಯ ಒಹಳ ಜನರಿಗೆ ಈ ವಿಷಯ ಸೇರುವುದಿಲ್ಲವೆಂದು ನನೀ ವಿಷಯವನ್ನು ಎತ್ತುವುದಿಲ್ಲ' ಎಂದು ಹೇಳಿ ದರು. ಕೊಡಗು ಟಿಶ್ ಕನ್ನಡನಾಡಿನೊಡನೆ ಒಂದಾಗದೆ ಗತಿಯಿಲ್ಲ!' ಎಂದು ಅವರು ಅಲ್ಲಿಯ ಕಿಕರಣ ನಕ್ಷದ ಮುಖಂಡರಾಗಿ ಕೆಲಸ ಮಾಡುತ್ತಿದ್ದರು.