ಈ ಪುಟವನ್ನು ಪ್ರಕಟಿಸಲಾಗಿದೆ
'ಒಂದ್ ಪಕ್ಷ ಆದೇಂತಿಟ್ಕ-ಆಗೇನು ಕೊಡ್ತಿ ?'
'ಆಗ್ಗೆ ಹೋದ್ರೆ ನೀನು ಕೊಡಿ, ಹೇಳೋದು.' ಮೊನ್ನೆ ಕೊಂಡ್ಕೊಂಡ ಕೆಮರಾ ಕೊನೆ-ಈಗೇಳು ನೀನು ಏನ್ಕೊಡ್ತಿ.'
'ನಾನೇ-ನನ್ನ ಕೈಲಿರೋ ಉಂಗ್ರ ಕೊಡ್ತೀನೆ.'
'ನಿಜ ತಾನೆ ? '
'ನಿಜ್ವೇ; ಬಿದ್ಕೋ ಇನ್ಯಾ.'
'ಸ್ವಲ್ಪ ತಡಿ, ಬಿದ್ಕೋತೇನೆ-ಆದ್ರೆ....'
'ಏನೋ ಅದು ಆದ್ರೆ-ದೆ?'
'ಏನೂ ಇಲ್ಲ-ಎರಡು ವರ್ಷ ತುಂಬೋದೊಳ್ಳೆ ನಿನ್ನೆ ಮುದ್ದೆ ಆಗಿರುತ್ತೆ ಅಂತ.'
'ನಿನ್ನ ಕೆಮರಕ್ಕೆ ಒಂದಿದೆ ಹೊತ್ತು-ಸುಮ್ಮನೆ ಕಳಕೊತಿ ಅದನ್ನ'
'ನಿನ್ನುಂಗ್ರಕ್ಕೆ ನನ್ನ ಬೆರಳಿನ ಮೇಲೆ ಪ್ರೀತಿ ಬಂದಿರೋ ಹಾಗಿದೆ- ಎರಡು ವರ್ಷ ಕಳೆಯೋದೊಳೆ ಕಾಣುತ್ತಲ್ಲ ಸನ್ಯಾಸಿಗಳ ಬೇಳೇ ಕಾಳು ... '
'ಬಿದ್ದಳೋ ಬಾಯ್ಮುಚ್ಕೊಂಡು.'
'ಉಂಗುರಕ್ಕೆ ಹೊತ್ತು ಬಂದಿದೆ' ಎನ್ನುತ್ತಾ ರಾಜ ದೀಪ ಆರಿಸಿ ಮಲಗಿಕೊಂಡ. “ ಇವನಿಗೊಂದು ಹುಚ್ಚು' ಎಂದು ರತ್ನನೂ ಕಣ್ಣು ಮಚ್ಚಿಕೊಂಡ. ಆದರೆ ಆ ದಿನ ಅವರಿಗೆ ಬಹಳ ಹೊತ್ತು ನಿದ್ದೆ ಬರಲಿಲ್ಲ.

ರಾಜ ಬಿ. ಎ. ಆದ ವರ್ಷವೇ ಅವನ ಅಜ್ಜಿ ಸತ್ತುಹೋದರು. ಆದುದರಿಂದ ಆ ವರ್ಷ ರಾಜನ ಮದುವೆ ನಿಂತು ಹೋಯಿತು. ಅಜ್ಜಿ

ಮುದುಕಿ; ಸತ್ತು ಹೋದರು. ಆದರೆ ನಾನಿನ್ನೂ ಸೀತೆಯನ್ನು ಮದುವೆಯಾಗುವದಕ್ಕೆ ಒಂದು ವರ್ಷ ಕಳೆಯಬೇಕಲ್ಲಾ ಎಂದು ರಾಜನಿಗೆ

೨೩