ಈ ಪುಟವನ್ನು ಪ್ರಕಟಿಸಲಾಗಿದೆ

ಲಿನ್ನಿ ಊರಿಗೆ ಬರುತ್ತೇನೆಂದು ಬರೆದುದಕ್ಕಿಂತಲೂ ಒಂದು ದಿನ ಮುಂದಾಗಿ ನಾವು ಹೊರಟೆವು. ನಾವು ಆದಿನ ಬರುವುದು ಅವರ ಮನೆಯವರಿಗೆ ತಿಳಿದಿರಲಿಲ್ಲವಾದ್ದರಿಂದ ಸ್ಟೇಶನ್‌ದಲ್ಲಿ ನಾವು ರೈಲಿನಿಂದಿಳಿಯುವಾಗ ನಮ್ಮನ್ನು ಕರೆದುಕೊಂಡು ಹೋಗುವುದಕ್ಕೆ ಯಾರೂ ಬಂದಿರಲಿಲ್ಲ. ಸ್ಟೇಶನ್‌ದಿಂದ ಲಿನ್ನಿಯ ಮನೆಗೆ ಮರು ಮೈಲಿ ದೂರ, ಕಾನ್ವೆಂಟಿನಲ್ಲಿ ಜೈಲಿನಲ್ಲಿದ್ದವರಂತೆ ಇದ್ದವರಿಗೆ ಅನಾಯಾಸವಾಗಿ ಮರು ಮೈಲು ನಡೆಯುವುದಕ್ಕೆ ಅದೊಂದು ಸೌಭಾಗ್ಯದಂತೆ. ಅನ್ನಿ ಯು ಪರಿಚಯದವರು ಸ್ಟೇಶನ್ ಮಾಸ್ಟರ್. ಅವರು ಕಾರು ಮಾಡಿ ಕೊಡುತ್ತೇನೆಂದರೂ ಬೇಡವೆಂದು ಹಾಸಿಗೆ ಪೆಟ್ಟಿಗೆಗಳನ್ನವರ ಸ್ವಾಧೀನಕ್ಕೆ ಕೊಟ್ಟು ಹೊರಟೆವು. ಕಾಡುಗಳ ನಡುವಿನಿಂದ, ತೋಟಗಳ ಮಧ್ಯದಿಂದ ತೋಡುಗಳನ್ನು ದಾಟಿಕೊಂಡು ಓಡುತ್ತಾ ಕೂರುತ್ತಾ, ಕಂಡ ಕಂಡ ಕಾಡುಹೂಗಳನ್ನು ಕೀಳುತ್ತಾ, ಹೇಗೆ ದಾರಿ ಮುಗಿಯಿತೆಂಬುದೇ ತಿಳಿಯದಷ್ಟು ಬೇಗ ಲಿನ್ನಿಯ ಮನೆಯ ಹತ್ತಿರ ತಲುಪಿದೆವು. ಆಗ ಬೆಳಗಿನ ಒಂಬತ್ತು ಗಂಟೆಯಾಗಿತ್ತು. ಬಿಸಿಲಿನ್ನೂ ಹೆಚ್ಚಾಗಿರಲಿಲ್ಲ. ಅವರ ಮನೆ ಎತ್ತರವಾದ ಒಂದು ಗುಡ್ಡದ ಮೇಲಿತ್ತು. ಮನೆಗೆ ಹೋಗಬೇಕಾದರೆ ಮರಗಳ ಗುಂಪೊಂದನ್ನು ದಾಟಿ ಹೂವಿನ ತೋಟದ ನಡುವಿನಿಂನ ಹೋಗಬೇಕಾಗಿತ್ತು. ಮರಗಳ ಹತ್ತಿರ ಬಂದಿದ್ದೆವು. ಒಂದು ಮರದಡಿಯಲ್ಲಿ ಬಿದ್ದಿದ್ದ ಮರದ ಕುಂಟೆಯೊಂದರ ಮೇಲೆ ಯಾರೋ ಒಬ್ಬರು ಕೂತು Fitzgeraldನ 'ಉಮರ್ ಖಯ್ಯಾಮ್' ಗಟ್ಟಿಯಾಗಿ ಓದುತ್ತಿದ್ದನು. ರಸ್ತೆಯ ಕಡೆ ಬೆನ್ನು ಮಾಡಿ ಕೂತಿದ್ದುದರಿಂದ ಅವನ ಮುಖ ನಮಗೆ ಕಾಣಿಸುತ್ತಿರಲಿಲ್ಲ. ಅವನನ್ನು ನೋಡಿ ಲಿನ್ನಿ ಶಬ್ದ ಮಾಡದಂತೆ ನನಗೆ ಸಂಜ್ಞೆ ಮಾಡಿ, ಮೆಲ್ಲಮೆಲ್ಲನೆ ಹಿಂದಿನಿಂದ ಹೋಗಿ ಅವನ ಕಣ್ಣುಗಳನ್ನು ಮುಚ್ಚಿದಳು. ಕೂತಿದ್ದಾತನು ಒಮ್ಮೆ ಫಕ್ಕನೆ ಬೆಚ್ಚಿಬಿದ್ದು ಕಣ್ಣುಗಳನ್ನು ಮುಚ್ಚಿದ್ದಲಿಯ ಲಿನ್ನಿಯ ಕೈಗಳನ್ನು ಹಿಡಿದು ನೋಡಿ ಬಹು ಮೆಲ್ಲನೆ - ವಸಂತ' ಎಂದನು. ನಗುತ್ತಾ

೪೯

7