ಕ ಥಾವಳಿ. ಪ್ರ ಥ ನು ಭಾ ಗ. ಕಾಗಕ್ಕ ಗುಬ್ಬಕ್ಕ. ಒಂದು ಮರದ ಕೊಂಬೆಯ ಮೇಲೆ ಒಂದು ಕಾಗೆಯ, ಒಂದು ಗುಬ್ಬಿಯ ಹತ್ತಿರ ಹತ್ತಿರ ಗೂಡುಗಳನ್ನು ಕಟ್ಟಿಕೊಂಡು ಇದ್ದುವ, ಒಂದುದಿನ ಗುಬ್ಬಿಗೆ ಬಲು ಹಸಿವಾಗಿದ್ದಿತು. ಕಾಗೆಯ ಗೂಡಿನಿಂದ ಒಳ್ಳೆ ಯ ದೋಸೆಯ ವಾಸನೆ ಬಂದಿತು. ಆಗ ಗುಬ್ಬಿಯು, ಕಾಗೆಯ ಗೂಡಿನ ಹತ್ತಿರಕ್ಕೆ ಬಂದು,- ಕಾಗಕ್ಕಾ, ಕಾಗಕ್ಕಾ, ಸ್ವಲ್ಪ ಬಾಗಿಲು ತೆಗೆ- ಎಂದಿತು. ಕಾಗಕ್ಕನು ದೋಸೆಯನ್ನು ತಿನ್ನು ತಾ- ನನ್ನ ಕೂಸಿಗೆ ನೀರು ಹಾಕು ತಿದೇನೆ, ಸ್ವಲ್ಪ ತಾಳು~ ಎಂದಿತು. ಒಂದು ಗಳಿಗೆ ಬಿಟ್ಟು ಗುಬ್ಬಿಯುಕಾಗಕ್ಕಾ, ಕಾಗಕ್ಕಾ, ಸ್ವಲ್ಪ ಬಾಗಿಲು ತೆಗೆಯೇ- ಎಂದು ಮತ್ತೆ ಕೂಗಿತು. ಆಗ ಕಾಗಕ್ಕನು-ನನ್ನ ಕೂಸನ್ನು ಮಲಗಿಸುತ್ತಿದೇನೆ, ತಾಳಮ್ಮ ಎಂದಿತು. ಹಸಿವನ್ನು ತಡೆಯಲಾರದೆ ಗುಬ್ಬಿಯು ಹಾರಿಹೋಗಿ ಎಲ್ಲಿಂದಲೋ ಹತ್ತು ಕಡಲೆಕಾಳುಗಳನ್ನು ತಂದು ಗೂಡಿನಲ್ಲಿಟ್ಟು, ಬಾಗಿಲನ್ನು ಹಾಕಿ ಕೊಂಡು, ಒಳಗೆ ಕಟು೦, ಕುಟು೦, ಎಂದು ತಿನ್ನುತ್ತಿದ್ದಿತು. ಈ ಸದ್ದನ್ನು, ಕಾಗಕ್ಕನು ಕೇಳಿ, ಸಡಗರದಿಂದ ಬಂದು- ಎಲೆ ಗುಬ್ಬಕ್ಕಾ, ಗುಬ್ಬ ಕ್ಯಾ ! ಅದೇನೆ ಕಟು೦, ಕುಟುಂ, ಎಂದು ಅಷ್ಟು ಗಟ್ಟಿಯಾಗಿ ತಿನ್ನುತ್ತಿರುವುದು ? ಬಾಗಿಲು ತೆಗೆಯೇ! ಎಂದಿತು. ಗುಬ್ಬ ಕೈನು- ಅದು ಹುರಿಗಡಲೇ ಕಾಣೆ- ಎಂದು ಉತ್ತರವನ್ನು ಕೊಟ್ಟಿತು. ಕಾಗೆಯುನನಗೊಂದೆರಡು ಕೊಟ್ಟಿದ್ದೇನೆ ? ಎಂದು ಕೇಳಿತು. ಅದಕ್ಕೆ ಗುಬ್ಬಿಯುಊ ! ನೀನು ದೋಸೆ ಕೊಟ್ಟಹಾಗೆ-ಎಂದಿತು.
ಪುಟ:ಕಥಾವಳಿ.djvu/೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.