೧೫ ೧೧, ನಾಯಿಯ ಕಥೆ. ಒಬ್ಬ ದೊರೆಯು ಒಂದು ದಿನ ಬೇಟೆಗಾಗಿ ಬಹುಮಂದಿಯೊಡನೆ ಒಂದು ಕಾಡಿಗೆ ಹೊರಟನು, ಕಾಡಿನಲ್ಲಿ ಇಬ್ಬರು ಮಾತ್ರ ಒಂದು ಜಿಂಕೆ ಯನ್ನು ಅಟ್ಟಿ ಕೊಂಡು ಮುಂದೆ ಮುಂದೆ ಹೋದರು, ಜಿಂಕೆಯು ಸಿಕ್ಕ ಲಿಲ್ಲ. ಆಗ ಅವರವರಿಗೆ ಜಗಳಬಂದು, ಒಬ್ಬನು ತನ್ನ ಜತೆಗಾರನನ್ನು ಹೊಡೆದು ಕೊಂದು ಹಿಂದಿರುಗಿ ಬಂದು ಗುಂಪನ್ನು ಸೇರಿದನು. ಸತ್ತವನ ನಾಯಿ ಮಾತ್ರ ತನ್ನ ಯಜಮಾನನ ಹೆಣದ ಬಳಿಯಲ್ಲಿಯೇ ಕಾದಿದ್ದಿತು. ಮಾರನೆಯ ದಿನ, ಒಂದು ಕಾಡುಹಂದಿಯನ್ನು ಅಟ್ಟಿಕೊಂಡು ದೊರೆಯೇ ಆ ಮಾರ್ಗವಾಗಿ ಬಂದನು, ಅಲ್ಲಿ ಬಿದ್ದಿದ್ದ ಹಣವನ್ನು ನೋಡಿ ತನ್ನ ಕಡೆಯವನೆಂದು ತಿಳಿದು, ಒಪ್ಪ ಮಾಡಿಸಿ, ಆ ನಾಯಿಯನ್ನು ಕರೆದು ಕೊಂಡು ಹಿಂದಿರುಗಿದನು. ಅವನು ಸತ್ತ ಬಗೆಯನ್ನು ತನ್ನ ಪಾಳಯದಲ್ಲಿ ದೊರೆಯು ವಿಚಾರಿ ಸಲು ಯಾರೂ ಹೇಳಲಿಲ್ಲ. ಕೊಂದವನು ತಲೆ ಮರೆಸಿಕೊಂಡು ಇದ್ದನು. ಕೆಲವು ದಿನಗಳಾದುವು. ದೊರೆಯ ಬಳಿಯಲ್ಲಿಯೇ ಈ ನಾಯಿ ಇದ್ದಿತು. ಒಂದು ದಿನ ತನ್ನ ಯಜಮಾನನನ್ನು ಕೊಂದವನು ದೊರೆಯ ಹತ್ತಿರಕ್ಕೆ ಒಂದು ಕೆಲಸಕ್ಕಾಗಿ ಬರಲು, ನಾಯಿಯು ಅವನ ಮೇಲೆ ಬಿದ್ದಿತು ; ದೊರೆ ಯು ಆಗ ಅವನನ್ನು ಹಿಡಿಸಿ ಬೆದರಿಸಲು, ಅವನು ನಡೆದುದನ್ನೆಲ್ಲಾ ನಿಜ ವಾಗಿ ಹೇಳಿಬಿಟ್ಟನು. ಬಳಿಕ ದೊರೆಯು ಅವನಿಗೆ ಶಿಕ್ಷೆಮಾಡಿದನು. ೧೨. ಎರಡು ನದಿಗಳು. ಒಂದು ದೊಡ್ಡ ಬೆಟ್ಟದಲ್ಲಿ ಹತ್ತಿರ ಹತ್ತಿರ ಎರಡು ನದಿಗಳು ಹುಟ್ಟಿ ಹರಿಯಲಿಕ್ಕೆ ಮೊದಲಾದುವು. ಒಂದು ನದಿಯು ಬಹಳ ಎತ್ತರವಾದ ಸ್ಥಳದಲ್ಲಿ ಹುಟ್ಟಿತಾದುದರಿಂದ ಗುಡ್ಡದಿಂದ ಗುಡ್ಡಕ್ಕೆ ಬಿದ್ದು, ಧಡಧಡನೆ ಹರಿಯುತಿದ್ದಿತು. ಇನ್ನೊಂದು
ಪುಟ:ಕಥಾವಳಿ.djvu/೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.