೨೧ ಟೆಯನ್ನು ಸವರಿಕೊಳ್ಳುತಿದ್ದನು. ಇದನ್ನು ಬಕಾಸುರನು ಕಂಡು, 'ಎಲಾ! ಎಲಾ ! ನರಾಧಮ, ನಿನ್ನನ್ನು ಮೊದಲು ತಿಂದು, ಆಮೇಲೆ, .ಊಟ ವಾ ಡುವೆನು. ತರುವಾಯ ಇಷ್ಟು ಸಾವಕಾಶಮಾಡಿದುದಕ್ಕಾಗಿ ಈ ಪಟ್ಟಣ ವನ್ನೇ ಸುಟ್ಟುಬಿಡುವೆನು,' ಎಂದು ಆರ್ಭಟಿಸಿ, ಭೀಮನನ್ನು ಭಂಡಿಯಿಂದ ಈಚೆಗೆ ಸೆಳೆಯ ಹೋದನು. ಭೀಮನು ಅಲ್ಲಾಡಲಿಲ್ಲ, ಆಗ ಬಕನಿಗೆ ಇನ್ನೂ ಕೋಪ ಹೆಚ್ಚಿ ಭಂಡಿಯನ್ನು ಒಡೆದು ಇಡಿ ಇಡಿಮಾಡಿದನು. ಭೀ ಮನು ಮೆಲ್ಲನೆ ಈಚೆಗೆ ಬಂದು ನಿಂತನು. ಆಗ ಇಬ್ಬರಿಗೂ ಭಯಂಕರ ವಾದ ಹೊಡೆದಾಟವ್ರ ಆರಂಭವಾಯಿತು, ಒಂದೊಂದಾವೃತ್ತಿ ಭೂಮಿ ಯನ್ನು ತುಳಿದರೆ ಭೂಮಿಯಲ್ಲಾ ನಡುಗಿಹೋಗುತಿದ್ದಿತು. ಅದೇನೋ ಅನರ್ಥ ನಡೆಯುತ್ತಿದೆ ಎಂದು ದೂರದಲ್ಲಿದ್ದ ಏಕಚಕ್ರನಗರಿಯ ಜನರೆಲ್ಲ ಮನೆಯಲ್ಲಿಯೇ ಅಡಗಿಕೊಂಡಿದ್ದರು. ಭೀಮ ಬಕರ ಹೋರಾಟವೂ ಹೆಚ್ಚಿ ಭೀಮನಿಗೆ ಬಕನು ಒಂದು ಗುದ್ದನ್ನು ಗುದ್ದಿದನು. ಭೀಮನು-ಆ8 | ನಾನು ತಿಂದುದೆಲ್ಲ ಜೀರ್ಣಕ್ಕೆ ಬಂದಿತು. ಇನ್ನು ಪಟುವಾಗಿ ಯುದ್ಧ ಮಾಡುವೆನು ಎಂದು ಬಕನೊಡನೆ ಯುದ್ಧ ಮಾಡಿ ಅವನಿಗೆ ಒಂದು ಬಲಿ ವಾದ ಗುದ್ದನ್ನು ಹಾಕಿ ಕೆಡವಿ ಅವನ ಪ್ರಾಣವನ್ನೇ ತೆಗೆದನು. ಬಳಿಕ ಬಕನು ಆ ಉದ್ದದಿಂದ ಈ ಉದ್ದದವರೆಗೂ ಕಾಲು ಚಾಚಿಕೊಂಡು ಬಿದ್ದನು. ಈ ಗದ್ದಲವ ನಿಂತ ಬಹು ಹೊತ್ತಿನಮೇಲೆ ಊರ ಜನರೆಲ್ಲರೂ ಮೆಲ್ಲ ಮೆಲ್ಲನೆ ಅಲ್ಲಲ್ಲಿ ಸುಳಿದಾಡುತ ರಾಕ್ಷಸನು ಬಿದ್ದಿದ್ದು ದನ್ನೂ ಭೀಮನು ಸುಖ ವಾಗಿ ಓಡಾಡುತಿದ್ದುದನ ಕಂಡರು. ತರುವಾಯ ಅವರೆಲ್ಲರೂ ಬಹು ಸಂತೋಷದಿಂದ ಬಂದು ಭೀಮನನ್ನು ಕೊಂಡಾಡಿ- ಅ೦ತಹ ಮಗನನ್ನು ಪಡೆದ ಕುಂತಿಯು ಎಂತಹ ಧನ್ಯಳೊ! ನಮ್ಮ ಪಟ್ಟಣವನ್ನೇ ಉಳುಹಿದನಲ್ಲ! ಎಂದು ಹೊಗಳುತ, ಭೀಮನೊಡನೆ ಸುಖವಾಗಿ ಪಟ್ಟಣಕ್ಕೆ ಹಿಂದಿರುಗಿದರು. ೧೬, ಮಾವಿನಗಿಡ, ಗೊಬ್ಬ ಳಿಯಗಿಡ. ಒಂದಾನೊಂದು ಪಟ್ಟಣವಿದ್ದಿತು, ಆ ಪಟ್ಟಣಕ್ಕೆ ಸವಿಾಪವಾಗಿಯೇ ಒಂದು ಉದ್ಯಾನವನ, ಆ ವನದಲ್ಲಿ ಮಲ್ಲಿಗೆ, ಜಾಜಿ, ಸಂಪಿಗೆ, ಗುಲಾಬಿ
ಪುಟ:ಕಥಾವಳಿ.djvu/೩೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.