೨೩ ಬೀಳುವವ, ಮೋಸಗಾರರಿಗಲ್ಲವೆ ನೀನು ಆಶ್ರಯ ? ನನ್ನನ್ನು ನೋಡು ! ನನ್ನ ಹೂವನ್ನು ನೋಡು, ಎಷ್ಟು ಸುಗಂಧವುಳ್ಳು ದಾಗಿರುವುದು ! ನನ್ನ ಕಾಯನ್ನು ನೋಡು, ಎಷ್ಟು ಉಪಯೋಗವಾಗಿರುವುದು ! 'ನಿನ್ನ ಮು ಳ್ಳನ್ನು ನೋಡು' ಎಂದರೆ ಅಹುದು ; ಮುಳ್ಳಿರುವುದು ಕಷ್ಟವು ಬೆರೆ ಯದ ಸುಖವೆಲ್ಲಿರುವುದು ? ಮುಳ್ಳಿಲ್ಲದ ಗುಲಾಬಿ ಎಲ್ಲಿ ನಾನು ಬಹು ಗಟ್ಟಿ, ನನ್ನಿಂದ ಬೇಕಾದ ಮುರಮುಟ್ಟುಗಳಾಗುವವ; ನನ್ನ ನು ಅರಿ ಯದ ಜನರು ಬೇಗನೆ ಕಡಿದುಹಾಕುವರು. ಆದುದರಿಂದ ದೇವರು ನನ್ನ ರಕ್ಷಣೆಗಾಗಿ ಮುಳ್ಳನ್ನು ಕೊಟ್ಟಿರುವನು. ಈ ಹೊತ್ತಿಗಾಯಿತು, ನಾಳೆ ಯಿ೦ದ ಇ೦ತಹ ಮಾತನಾಡಬೇಡ ' ಎ೦ದಿತು. ಇದಕ್ಕೆ ಮಾವಿನಮರವ-“ ನಮ್ಮ ವಂಶಕ್ಕೆ ಮೃತ್ಯುವಾದ ನಿನ್ನೊ ಡನೆ ನನಗೇನುಮಾತು ? ನೀನು ಜನೋಪಕಾರಿ ಎಂದು ಹೇಳಿಕೊಂಡರೆ ಜನರು ನಂಬುವರೆ ? ನನ್ನ ಯೋಗ್ಯತೆಯನ್ನು ಹೊಗಳಲು ಮನುಷ್ಯರಲ್ಲಿ ಶ್ರೇಷ್ಟರಾದ ಕವಿಗಳು ಇರುವರು ; ಪಕ್ಷಿಗಳಲ್ಲಿ ಕೋಗಿಲೆಗಳಿರುವುವು ; ನೀನು ನನ್ನ ನ್ನು ಸ್ತೋತ್ರಮಾಡ ಬೇಕೆಂದಿಲ್ಲ, ಕೈಯಲ್ಲಾದರೆ ಪರೋಪಕಾರ ಮಾಡಬೇಕು, ಇಲ್ಲದಿದ್ದರೆ ಉಪಕಾರ ಹೊಂದತಕ್ಕವರಿಗೆ ಕಂಟಕನಾಗಿ ಬಾರದೆ, ತಟಸ್ಥನಾಗಿರಬೇಕು, ನಿನ್ನ ಬಾಳು ಎಂತಹ ಬಾಳು ಹೇಳು " ಎಂದು ಮಾವಿನಮರವು ಸುಮ್ಮನೆ ಆಯಿತು. ೧೭, ಕೋಳಿಯ-ರತ್ನವೂ. ಒಂದು ಹೆಣ್ಣು ಕೋಳಿಯು ತನ್ನ ಮರಿಗಳನ್ನೆಲ್ಲಾ ಜತೆಯಲ್ಲಿ ಕರೆದು ಕೊಂಡು ತಾಸಿದ್ದ ಅಂಗಳದಲ್ಲಿದ್ದ ಕಸ ಕಡ್ಡಿಯನ್ನು ಕಾಲಿನಿಂದ ಕೆದಕುತ್ತಾ ಕೊಕ್ಕಿನಿಂದ ಕುಕ್ಕುತ್ತಾ ಕೊ ಕ್ಕೊ ಎಂದು ಗಂಟಲಲ್ಲಿ ಕೂಗುತ್ತಾ ಅಲ್ಲಲ್ಲಿಯೇ ಸುತ್ತಾಡುತಿದ್ದಾಗ ಆ ಕಸದಲ್ಲಿ ಒಂದು ಕಡ್ಡಿಯ ಕೆಳಗೆ ಥಳಥ ಳನೆ ಹೊಳೆಯುತ್ತಿದ್ದ ಒಂದಾನೊಂದು ವಸ್ತುವನ್ನು ಕಂಡಿತು. ಆಗ ಬಹು ಸಡಗರದಿಂದ, ರೆಕ್ಕೆಯನ್ನು ಬಡಿಯುತ್ತಾ ಕತ್ತನ್ನು ಎತ್ತಿ ಕೊ, ಕೆ, , ಎಂದು ಗಟ್ಟಿಯಾಗಿ ಕೂಗಿ ಕಿಚ್, ಕಿಚ್, ಕಿಚೆನ್ನುತ
ಪುಟ:ಕಥಾವಳಿ.djvu/೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.