೩೩ ಕೊಂಡರು. ಈ ಕೂಗು ಅಂತಃ ಪ್ರರದಲ್ಲಿದ್ದ ಉತ್ತರನಿಗೆ ಮುಟ್ಟಿತು. ಆಗ ತಾಯಿ, ತಂಗಿ, ಮತ್ತು ಇತರ ಹೆಂಗಸರೊಡನೆ ಮಾತನಾ ಡುತ್ತ ಕುಳಿತಿದ್ದ ಉತ್ತರನು ಆ ಕೂಗನ್ನು ಕೇಳಿ, “ ಏನು ನಮ್ಮ ಹಸುಗಳನ್ನು ಹಿಡಿದಿರುವರೆ? ಆವರಿಗೆ ಎಷ್ಟು ಧೈರ್ಯ ' ನಾನು ಇರುವುದನ್ನು ಮರೆತಿರು ವರೋ ? ಈಗ ಹೊರಟು ಅವರುಗಳನ್ನು ಪ್ರತಿ ಪ್ರಡಿ ಮಾಡಿ ಬರುವೆನು, ಎಲ್ಲಿ ನನ್ನ ಸಾರ ಥಿಯಲ್ಲಿ- 'ಹಾ ! ಈ ಸಮಯದಲ್ಲಿ ನನಗೆ ತಕ್ಕ ಸಾರಥಿ ಇದೆಹೋದನಲ್ಲ' ಸಾರಥಿಯೊಬ್ಬನಿದ್ದರೆ ಆ ದುಷ್ಟಕೌರವರ ಅಹಂಕಾರವನ್ನು ಅಡಗಿಸುತ್ತಿ ದೈನಲ್ಲ; ಆ ಶತ್ರುಸೇನೆಯಲ್ಲಿರುವ, ಭೀಷ್ಮ, ದ್ರೋಣ, ಕೃಪಾಚಾರ ಮೊದ ಲಾದವರ ಮೇಲೆ ಬಿದ್ದು ನುಗ್ಗಿ ನುಚ್ಚು ನುರಿಮಾಡುತ್ತಿದ್ದೆನಲ್ಲ; ಕರ್ಣ, ಅಶ್ವತ್ಥಾಮ ಮುಂತಾದವರ ಹೆಸರನ್ನೆ ಅಳಿಸಿಬಿಡುತ್ತಿದ್ದೆನಲ್ಲ ; ಯಮವು ರಿಯಲ್ಲಿ ಸ್ಥಳವಿಲ್ಲದಂತೆ ಮಾಡುತ್ತಿದ್ದೆನಲ್ಲ; ಏನು ಮಾಡಲಿ; ನನ್ನ ರಥವನ್ನು ನಡೆಯಿಸುವರು ಯಾರೂ ಇಲ್ಲವಲ್ಲ. ಹಾ ! ಎಂದು ಆರ್ಭಟಿಸುತ್ತಿದ್ದನು. ವಿರಾಟನ ಮಗಳಾದ ಉತ್ತರೆಗೆ ಪಾಠವನ್ನು ಕಲಿಸುತ್ತಿದ್ದ ಬೃಹನ್ನ ಳೆಯು ಸಾರಥ್ಯದಲ್ಲಿಯ ಬಲು ಗಟ್ಟಿಗನೆಂದು ಹತ್ತಿರದಲ್ಲಿದ್ದವರೊಬ್ಬರು ಉತ್ತರೆಗೆ ತಿಳಿಸಲು, ಅವಳು ಬೃಹನ್ನಳೆ ಯನ್ನು ಸಾರಥ್ಯಕ್ಕೆ ಕರೆದುಕೊಂಡು ಹೋಗಬಹುದೆಂದು ಹೇಳಿದಳು. ಅದಕ್ಕೆ ಉತ್ತರನು “ ಛೇ ! ಬೃಹನ್ನಳೆಗೆ ಏನು ಬರುವದು ? ಕುಣಿವುದಕ್ಕೆ ಬಂದರೆ ಯುದ್ದದಲ್ಲಿ ರಥವನ್ನು ನಡಿಸುವು ದಕ್ಕೂ ಬಂದೀತೆ ? ಚೆನ್ಯಾ ಯಿತು ” ಎಂದನು. ' ಆಗ ಅಲ್ಲಿದ್ದವರು ಬೃಹ ನೃಳೆಯು ನಮ್ಮ ಅರಮನೆಗೆ ಬರುವುದಕ್ಕೆ ಮುಂಚೆ ಮಹಾಪರಾಕ್ರಮಶಾಲಿ ಯಾದ ಅರ್ಜುನನಸಾರಥಿ; ತಾವ ಪರೀಕ್ಷಿಸಬಹುದು' ಎಂದರು.ಉತ್ತರನು ಅದಕ್ಕೆ ಒಪ್ಪಿ ಬೃಹನ್ನಳೆಗೆ ರಥವನ್ನು ಸಿದ್ದಪಡಿಸುವಂತೆ ಹೇಳಿ, ಅಲ್ಲಿದ್ದ ಹೆಂಗ ಸರಿಗೆಲ್ಲಾ ನಿಮಗೇನು ಬೇಕು ? ನಿಮಗೇನು ತರಲ ? ಯುದ್ಧರಂಗದಿಂದ ಯಾವ ರಾಜನ ಆಭರಣವನ್ನು ಬೇಕಾದರೂ ತರುತ್ತೇನೆ ಹೇಳಿ - ಎಂದು ವಿಚಾರಿಸಿಕೊಂಡು ಯುದ್ಧಕ್ಕೆ ಹೊರಟನು, ಬೃಹನ್ನಳೆಯು ಅತಿವೇಗದಿಂದ ರಥವನ್ನು ಓಡಿಸಿ, ಹಿಂದೆ ಇಟ್ಟಿದ್ದ ತನ್ನ ಬಾಣಗಳನ್ನು ತೆಗಿಸಿಕೊಂಡು ಕೌರವರ ಸೇನೆಗೆ ಇದಿರಾಗಿ ಉತ್ತರನ ರಥವನ್ನು ನಿಲ್ಲಿಸಿದನು. ಆ ಸೇನೆಯ ಕೋಲಾಹಲವನ್ನು ನೋಡಿದೊಡ
ಪುಟ:ಕಥಾವಳಿ.djvu/೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.