ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭ ಆಷ್ಟರಲ್ಲಿಯೆ ಸಮುದ್ರದ ಮಧ್ಯೆ ದೂರದಲ್ಲಿ ಒಂದು ಅರಮನೆಯು ಕಾಣಿಸಿತು. ಒಂದು ಕ್ಷಣ ದೃಷ್ಟಿಸಿ ನೋಡಲು ಅದು ಸೊಗಸಾದ ಏಳು ಪ್ಪರಿಗೆಯ ಮನೆಯೆಂದು ಗೊತ್ತಾಯಿತು. ಆಗ ದೊರೆಯು “ನಾನು ಸಾಯುವದೇನೋ ನಿಜ, ನಾನು ಸತ್ತರೆ ಅಳುವವರು ಯಾರು ? ಸಾಯು ವೆನೆಂಬ ಹೆದರಿಕೆಯಾಗಲಿ, ವ್ಯಸನವಾಗಲಿ ಯಾವುದೂ ನನಗೆ ಇಲ್ಲ' ಆದುದರಿಂದ ಹೇಗಾದರೂ ಆ ಅರಮನೆಯನ್ನು ಸೇರಬೇಕು' ಎಂದು ಯೋಚಿಸುತ್ತಿದ್ದನು. ಅಷ್ಟರಲ್ಲಿಯೇ ಒಂದು ದೋಣಿಯು ದಡದ ಕಡೆಗೆ ಹೊಡೆದುಕೊಂಡು ಬರುತ್ತಿತ್ತು. ಅದನ್ನು ನೋಡಿ ಅದು ಬರುವುದನ್ನೇ ಕಾದಿದ್ದು, ಬಂದ ಮೇಲೆ ಅದನ್ನು ಹತ್ತಿ ಅರಮನೆಯಿದ್ದ ಕಡೆಗೆ ಹೊರಟನು. ಎಷ್ಟು ದೂರ ಹೋದರೂ, ಅರಮನೆಯು ಇನ್ನೂ ದೂರವಾಗಿ ಕಾಣುತ್ತಿತ್ತೇ ಹೊರತು ಸಿಕ್ಕುವಂತೆ ಇರಲಿಲ್ಲ. ಅಷ್ಟು ಹೊತ್ತಿಗೆ ಬಹು ಕತ್ತಲೆಯಾಯಿತು. ಅರಮನೆಯು ಸಿಕ್ಕಲಿಲ್ಲ, ನಡುಸಮುದ್ರ, ಆ ದೊರೆಯು ಏನು ಮಾಡ ಬೇಕು ? ಏನಾದರೂ ಆಗಲಿ 'ನಾನು ಸತ್ತರೆ ಅಳುವವರು ಯಾರು ?? ಎಂದು ದೋಣಿಯನ್ನು ಮುಂದೆಮುಂದೆ ನಡೆಯಿಸಿಕೊಂಡು ಹೋದನು. ೨೫, ನಾಗಲೋಕ (೨ ನೆಯ ಭಾಗ) ಹಾಗೆ ಬಹುದೂರ ಹೋದ ಮೇಲೆ ದೋಣಿಯನ್ನು ಏನೋ ತಡೆ ದಂತೆ ಆಯಿತು. ಕೂಡಲೆ ದೋಣಿಯಿಂದ ಇಳಿದು ನೋಡುವಲ್ಲಿ ದಡವು ಸಿಕ್ಕಿದಂತೆ ಕಾಣಿಸಿತು. ದಡದಮೇಲೆ ಇಳಿದನು. ಅಷ್ಟು ಕತ್ತಲೆಯಾಗಿ ದ್ದರೂ ಅಲ್ಲಿ ನಿಲ್ಲದೆ ಆಗಲೇ ಹೊರಟನು. ಎಲ್ಲೆಲ್ಲೂ ಗಿಡಗಳು ಬೆಳೆದಿ ದ್ಗುವ, ದಾರಿಯೇ ಕಾಣದು. ಹಾವ ಹಲ್ಲಿಯ ಓಡಾಟದ ಶಬ್ದವು ಎಲ್ಲೆಲ್ಲೂ ತುಂಬಿದ್ದಿತು. ದುಂಬಿಗಳ ಚೀತ್ಕಾರವ ಕಿವಿ ಚಿಟ್ಟುಹಿಡಿಸುತ್ತಿ ದ್ವಿತು. ಇವನು ಯಾವುದಕ್ಕೂ ಅಂಜದೆ ಹೋಗುತ್ತಲೇ ಇದ್ದನು. ಆಗ