೪೦ ಆ ಉತ್ತರಕ್ಕೆ ನಾಗಕನೈಯು ಮೆಚ್ಚಿ, “ ಮಹಾರಾಜರೇ ನಿಮಗೆ ನಾಗಲೋಕದಲ್ಲಿ ವಾಸಮಾಡುವುದಕ್ಕೆ ಅಪೇಕ್ಷೆ ಇದ್ದರೆ ನನ್ನೊಡನೆ ಬನ್ನಿ' ಎಂದಳು. ಸಂತೋಷದಿಂದ ಇವನು ಒಂದೆರಡು ಹಜ್ಜೆ ಮುಂದೆ ಇಡುವು ದರಲ್ಲಿಯೇ ಥಟ್ಟನೆ ಕತ್ತಲಾಯಿತು, ನಾಗಕನೈಯು ಮಾಯವಾದಳು. ಪಕ್ಷಿಗಳೆಲ್ಲಾ ತಮ್ಮ ತಮ್ಮ ಗೂಡುಗಳನ್ನು ಹುಡುಕಿಕೊಂಡು ಮರಗಳನ್ನು ಅಡರುತ್ತಿದ್ದವು, ಅರಳಿದ ಹೂವುಗಳೆಲ್ಲಾ ಬಾಡಿರಬಹುದು ; ಅವು ಬಾಡಿ ಹೋದುದು ಇವನಿಗೆ ಕಾಣಲಿಲ್ಲ ; ಆದರೆ ಸುಗಂಧದಿಂದ ಕೂಡಿ ಬೀಸು ತಿದ್ದ ಗಾಳಿಯು ಬರಿದಾಯಿತು. ರಾಜನು ಭ್ರಾಂತನಾಗಿ, ನಾಗಕನೈಯು ಕುಳಿತಿದ್ದ ಸ್ಥಳದ ಹತ್ತಿರಕ್ಕೆ ಎಡವರಿಸಿ ಮುಗ್ಗರಿಸಿಕೊಂಡು ಹೋದನು. - ಅಲ್ಲಿ ೬೪ನೀರಿನಿಂದ ಕೂಡಿದ ಒಂದು ಸಣ್ಣ ಕೊಳವನ ಆ ಕೊಳ ದಲ್ಲಿ ಮಹಾ ಜ್ಯೋತಿಯೊಂದು ಮುಳುಗುತ್ತಿದ್ದುದನ್ನೂ ಕಂಡನು “ ನಾನು ಸತ್ತರೆ ಅಳುವವರು ಯಾರು ? ವ್ಯಸನವು ಯಾರಿಗೆ ? ನನಗೆ ಇಲ್ಲ' ಎಂದು, ಆ ಕೊಳದಲ್ಲಿ ಬೆಳಕಿನ ಜತೆಯಲ್ಲಿ ಹೋಗಬೇಕೆಂದು ತಡಮಾಡದೆ ದುಮಿ ಕಿದನು, ಹಾಗೆ ದುಮಿಕಿದೊಡನೆ ನಾಗಕನ್ಯಯ ಮಾಯದಿಂದ ಸ್ವಲ್ಪವೂ ಆಯಾಸವಾಗದಂತೆ ಆ ದೊರೆಯು, ನಾಗಲೋಕದಲ್ಲಿದ್ದ ಅರಮನೆಯನ್ನು ಸೇರಿದನು, ಅಲ್ಲಿ ನಾಗಕನೈಯ ನಂಟರಿಷ್ಟರು ಇವನನ್ನು ಆದರದಿಂದ ಇದಿರುಗೊಂಡರು. ದೊರೆಯು ಅಲ್ಲಿ ನಾಗಕನೆಯನ್ನು ಮದುವೆಯಾಗಿ, ಬಹುಕಾಲ ಸುಖವಾಗಿ ಇದ್ದನು. ೨೭, ಹಾವಾಡಿಗನೂ ಹಾವೂ ಇಲಿಯೂ. ಒಬ್ಬ ಹಾವಾಡಿಗನು ಹಾವಿನ ಬುಟ್ಟಿಯನ್ನು ಅಡ್ಡೆ ಕಟ್ಟಿ, ಹೆಗಲ ಮೇಲೆ ಇಟ್ಟು, ಊರಿಂದೂರಿಗೆ ಹೋಗಿ ಹಾವುಗಳನ್ನು ಆಡಿಸಿಕೊಂಡು ಹಣವನ್ನು ಸಂಪಾದಿಸುತ್ತಿದ್ದನು. ಒಂದು ಊರ ಹೊರಗಿನ ಹಾಳುಗುಡಿ ಯಲ್ಲಿ ಆ ಹಾವಾಡಿಗನು ಇಳಿದಿದ್ದನು. ಅಲ್ಲಿ ಅವನಿಗೆ ಜ್ವರಬಂದು ಅನ್ನ ನೀರು ಇಲ್ಲದೆ ಸಂಕಟಪಡುತ್ತಿದ್ದನು. ಒಂದೆರಡು ದಿನಗಳಾದುವ, ಹಾವಾ ಡಿಗನಿಗೂ ಅನ್ನವಿಲ್ಲ, ಹಾಸಿಗೂ ತಿಂಡಿಯಿಲ್ಲ.
ಪುಟ:ಕಥಾವಳಿ.djvu/೫೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.