೪೨ ವನ್ನೂ ಮಾಡಿಕೊಡುವರು, ನಾನು ಸಿಕ್ಕಿದರೆ ಒಡನೆಯೆ ಕೊಲ್ಲುವರು. ನಾನು ಜನರಿಗೆ ಮಾಡುವ ಅಪಕಾರವೇನು ? ನೀನು ಮಾಡುವ ಉಪಕಾರ ವೇನು ? ಹೇಳು ' ಎಂದು ಕೇಳಿತು. ಅದಕ್ಕೆ ಜೇನುಹುಳುವ “ ನೀನು ಮನುಷ್ಯರಿಗೆ ಯಾವ ಉಪಕಾರ ವನ್ನೂ ಮಾಡುವುದಿಲ್ಲ, ಅವರ ಮನೆಯ ಮರ ಮುಟ್ಟನ್ನು ಕೊರೆದು ಹಾಳುಮಾಡುತ್ತೀಯೆ ; ನಾನಾದರೋ ಹಗಲೆಲ್ಲಾ ಕೆಲಸಮಾಡಿ, ಸಿಹಿ ಯಾದ ಜೇನುತುಪ್ಪವನ್ನು ಕೂಡಿಹಾಕುವೆನು, ಜನರಿಗೆ ಅದರಿಂದ ಪ್ರಯೋ ಜನವಾಗುವುದು. ಆದುದರಿಂದ ಜನರು ನನ್ನನ್ನು ಆದರಿಸುವರು. ನೀನು ಜನರಿಗೆ ಕೆಡುಕನ್ನು ಮಾಡದೆ, ಉಪಯೋಗವಾಗಿದ್ದರೆ, ನನ್ನಂತೆ ನಿನ್ನ ಜನರು ಉಪಚರಿಸುತ್ತಿದ್ದರು. ೨೯, ನಾ ಬಿ ಯ ಸ್ನೇಹ. ಮಳವಿ ಎಂಬವಳಲ್ಲಿ ಒಂದು ನಾಯಿ ಇದ್ದಿತು. ಆ ನಾಯಿಯನ್ನು ಅವಳು ತನ್ನ ಮಗುವಿನೊಡನೆ ಸಾಕುತ್ತಿದ್ದಳು. ಆ ನಾಯಿಯು ಯಾವಾ ಗಲೂ ಆ ಮಗುವಿನಬಳಿಯಲ್ಲಿಯೆ ಆಡಿಕೊಂಡು ಇರುತ್ತಿದ್ದಿತು. ಆ ಮಗುವು ಆಡುವುದಕ್ಕೆ ಎಲ್ಲಿಗೆ ಹೋದರೂ ನಾಯಿ ಯ ಜತೆಯಲ್ಲಿ ಹೋಗುತಿ ದ್ವಿತು. ತುಂಟ ಹುಡುಗರು ಆ ಮಗುವಿನ ತಂಟೆಗೆ ಹೋದರೆ ನಾಯಿಯು ಅವರ ಮೇಲೆ ಬಿದ್ದು ಓಡಿಸುವುದು, ಮಗುವು ಊಟಮಾಡುವಾಗಲೂ ಆಡುವಾಗಲೂ, ಮಲಗಿಕೊಳ್ಳುವಾಗಲೂ ನಾಯಿಯು ಜತೆಯಲ್ಲಿಯೇ ಇರುವದು. ಹೀಗಿರುತ್ತಿರಲು ಮಗುವಿಗೆ ರೋಗವು ಬಂದಿತು, ಕೆಲವು ದಿನಗ ಳಲ್ಲೇ ಅದು ಸತ್ತೂ ಹೋಯಿತು. ನಾಯಿಯು ಆ ದಿನವೇ ತಪ್ಪಿಸಿಕೊಂ ಡಿತು ; ಎಲ್ಲೆಲ್ಲಿ ಹುಡುಕಿದರೂ ಸಿಕ್ಕಲಿಲ್ಲ, ಕೆಲವು ದಿನಗಳಾದಮೇಲೆ ಒಂದು ದಿನ ಆ ಮಗುವಿನ ತಾಯಿಯು ಮಗುವನ್ನು ಮಣ್ಣುಮಾಡಿದ್ದ ಸ್ಥಳಕ್ಕೆ
ಪುಟ:ಕಥಾವಳಿ.djvu/೫೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.