೪೬ ಕುಳಿತಿದ್ದುವು. ಅಷ್ಟು ಹೊತ್ತಿಗೆ ಸರಿಯಾಗಿ ಮಂತ್ರಿಶ್ರೇಷ್ಟನಾದ ಜಂಬು ಕನು (ನರಿಯು) ಬಂದು ರಾಜಪ್ರತ್ರರಿಗೆ ಸಮಾಧಾನವನ್ನು ಹೇಳಿ, ಹೆದರ ಬೇಡಿ ಯೆಂದು ಇತರ ಸಣ್ಣ ಸಣ್ಯ ಮೃಗಗಳಿಗೆ ಧೈರವನ್ನು ಕೊಟ್ಟು, ಮುಂದಣ ಕ್ರಮವನ್ನು ನಡೆಸಲು, ಬಹುಬೇಗ ಒಂದು ಉಪಾಯವನ್ನು ತನ್ನೊಳಗೆ ತಾನೇ ಯೋಚಿಸಿತು. ' ಈಗಲಾದರೋ ನಮ್ಮ ಮಹಾರಾಜ ಸಿಂಹರಾಜನು ಸತ್ತು ಬಿದ್ದಿರುವನು. ಅವನಿಗೆ ಪರಮಮಿತ್ರನಾದ ನಾನು ಅವನ ಹಿರಿಯ ಮಗನಿಗೆ ಪಟ್ಟ ವನ್ನು ಕಟ್ಟಿ, ಅವನು ದೊಡ್ಡವನಾಗುವ ವರೆಗೂ ನಾನೇ ನಿಂತು ರಾಜ್ಯಭಾರವನ್ನು ಮಾಡುವುದು ಧರ್ಮ, ಆದರೆ ನನಗೆ ಸಲಹೆ ಕೊಡುವುದಕ್ಕೆ ಬರುದೇ ಹೊರತು ನಿಂತು ರಾಜ್ಯಭಾರ ವನ್ನು ಮಾಡುವದಕ್ಕೆ ತಿಳಿಯದು, ನನಗೆ ತಿಳಿಯದ ಕೆಲಸವನ್ನು ಮಾಡು ವದಕ್ಕೆ ಹೋಗಿ, ನಾನು ಅವಿವೇಕಿ ಎನ್ನಿಸಿಕೊಳ್ಳಬಾರದು, ನನ್ನ ಮಂತಿ ತ್ವವೇನೋ ನನಗೆ ಉಳಿಯಬೇಕು ; ರಾ ಜನು ಯಾವನಾದರೇನು ? ನನ್ನ ಮಾತನ್ನು ಕೇಳುವವನು ಸಿಕ್ಕಿದರೆ ನನಗೆ ಬೇರೆ ದೊರೆತನವೇಕೆ ? ದೊರೆತ ನದ ಕಷ್ಟವಿಲ್ಲದೆ ದೊರೆಯ ಸುಖವನ್ನೆಲ್ಲಾ ನನ್ನ ಮನಸ್ಸು ಬಂದ ಹಾಗೆ ನಾನು ಅನುಭವಿಸಬಹುದು. ಇದಕ್ಕಾಗಿ ನಾನೇ ಮುಖ್ಯಮುಖ್ಯವಾದ ಪ್ರತಿಯೊಂದು ಜಾತಿಯ ಮೃಗದ ಬಳಿಗೂ ಹೋಗಿ--ಸಮಯವ್ರ ಹೀಗೆ ಇದೆ, ನೀನೇ ಹೇಗಾದರೂ ದೊರೆಯಾಗಬೇಕ೦ಬುದು ನನ್ನ ಮನಸ್ಸು ; ತಕ್ಕ ಪ್ರಯತ್ನವನ್ನು ಮಾಡು ಎಂದು ಹೇಳಿ ಬರುವೆನು. ಯಾರಾದರೂ ನನ್ನನ್ನೇ ಆಪ್ತನೆಂದು ಕರೆದರು ಎಂದು ಯೋಚಿಸಿ, ಹೊರಟ, ಆ ಕಾಡಿನಲ್ಲಿ ದ್ದ ಮೃಗಗಳಿಗೆಲ್ಲಾ ವರ್ತಮಾನವನ್ನು ಕೊಟ್ಟನು ಆಗ ಪ್ರತಿಯೊಂದು ಮೃ ಗವ್ರ * ಮಂತ್ರಿಯಂದರೆ ಜಂಬುಕನೇ ಮಂತ್ರಿ, ನಾನು ದೊರೆಯಾದರೆ ಅವ ನನ್ನೇ ಮಂತ್ರಿಯಾಗಿ ಇಟ್ಟುಕೊಳ್ಳುವೆನು, ನಮಗೆ ಎಂತಹ ಮಿತ್ರ, ' ಎಂದು ಕೊಂಡು ಸಿಂಹರಾಜನ ಅರಮನೆಯಾಗಿದ್ದ ಒಂದು ದೊಡ್ಡ ಗವಿಯ ಬಳಿಗೆ ಬಂದು ಸೇರಿತು. ನರಿಯ ಅಷ್ಟು ಹೊತ್ತಿಗೆ ಅಲ್ಲಿಗೆ ಬಂದು, ' ಎಲೈ, ಮೃಗಶ್ರೇಷ್ಟರಿರಾ ! ನಮ್ಮ ಮಹಾರಾಜನು ದೈವಾಧೀನನಾಗಿರುವನು. ಅವನ ಮಕ್ಕಳು ಶಕ್ತರೇ ಆದರೂ ಇನ್ನೂ ಚಿಕ್ಕವರಾಗಿರುವರು. ಅವರು ದೊಡ್ಡವರಾಗುವವರೆಗೂ ರಾಜ್ಯಭಾರವನ್ನು ನಿಮ್ಮಲ್ಲಿ ಯೋಗ್ಯರಾದವ ರಿಗೆ ಒಪ್ಪಿಸಬೇಕೆಂದು ಯೋಚಿಸಿರುವರು. ಆದುದರಿಂದ ನಿಮ್ಮಲ್ಲಿ ಶ್ರೇಷ್ಠ
ಪುಟ:ಕಥಾವಳಿ.djvu/೬೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.