೫೦ ೩೩, ವರಲಕ್ಷ್ಮೀ ಕಥೆ. ಎದರ್ಭದೇಶವೆಂದು ಒಂದು ದೇಶ. ಆ ದೇಶದಲ್ಲಿ ಕುಂಡಿನ ನಗರ ವೆಂಬುದೊಂದು ಪಟ್ಟಣ. ಆ ಪಟ್ಟಣದಲ್ಲಿ ಚಾರುಮತಿ ಎಂಬ ಪತಿವ್ರ ತಾ ಶಿರೋಮಣಿಯೊಬ್ಬಳಿದ್ದಳು, ಆ ಚಾರುಮತಿಯು, ತನ್ನ ಗಂಡನೇ ದೇವರೆಂದು ತಿಳಿದು, ಗಂಡನಮಾತಿಗೆ ಇದಿರಾಡದೆ, ಯಾವಾಗಲೂ ಗಂ ದನ ಉಪಚಾರದಲ್ಲಿಯೇ ಸಂತೋಷದಿಂದ ಕಾಲವನ್ನು ಕಳೆಯುತ್ತಿದ್ದಳು. ಗಂಡನಾದರೋ ಬಹು ಬಡವ; ಬೆಳಗ್ಗೆ ಊಟಕ್ಕೆ ಇದ್ದರೆ ಸಾಯಂಕಾ ಲಕ್ಕೆ ಇರುತ್ತಿರಲಿಲ್ಲ; ಬಹು ಕಷ್ಟ ಪಟ್ಟು ಅನ್ನ ವನ್ನು ಸಂಪಾದಿಸಿ ತರು ತಿದ್ದನು. ಗಂಡನು ತಂದುದನ್ನು ಸಂತೋಷದಿಂದ ತೆಗೆದಿಟ್ಟು., ದೇವ ರಿಗೆ ಸಮರ್ಪಿಸಿ, ಗಂಡನಿಗೆ ಊಟಕ್ಕೆ ಇಟ್ಟು, ಮಿಕ್ಕುದನ್ನು ಆ ಚಾರು ಮತಿಯು ಊಟಮಾಡಿ ಸುಖವಾಗಿರುತ್ತಿದ್ದಳು. ಒಂದು ದಿನವಾದರೂ ತನ್ನ ಗಂಡ ಬಡವನೆಂದು ಅವಳು ಅಸಮಾಧಾನಪಟ್ಟು ದಿಲ್ಲ, ಗಂಡನ ಬಡ ತನವನ್ನ ತಾಡಿ ಯಾವಾಗಲೂ ಅವನ ಮನಸ್ಸನ್ನು ನೋಯಿಸಿದುದೂ ಇಲ್ಲ, ನೆರೆಹೊರೆಯವರ ಐಶ್ವರವನ್ನು ನೋಡಿ ದುಃಖತಪಟ್ಟವಳಲ್ಲ, ಒಬ್ಬರೊಡ ನೆಯ ಅವಳು ಗಟ್ಟಿಯಾಗಿ ಮಾತನಾಡಿದವಳಲ್ಲ, ಯಾವ ಪ್ರಾಣಿಯನ್ನು ಕಂಡರೂ ಅವಳು ಪ್ರೀತಿಸುತ್ತಿದ್ದಳು. ಹೀಗಿದ್ದ ಚಾರುಮತಿಯ ಒಳ್ಳೆಯತನಕ್ಕೂ, ಸುಗುಣಕ್ಕೂ, ಅವರನ್ನು ಲಕ್ಷ್ಮಿದೇವಿಯೇ ಮೆಚ್ಚಿ, ಒಂದುದಿನ ರಾತ್ರಿ ಚಾರುಮತಿಯ ಸ್ವಷ್ಟದಲ್ಲಿ ಬಂದು “ಎಲ್! ಚಾರುಮತೀ, ನಿನಗೆ ಗಂಡನಲ್ಲಿರುವ ಭಕ್ತಿವಿಶ್ವಾಸಕ್ಕೂ, ಪ್ರಾಣಮಾತ್ರದಲ್ಲಿರುವ ಪ್ರೀತಿಗೂ ನಾನು ಮೆಚ್ಚಿದೆನು. ಇಂತಹವರನ್ನ ಇವೆ ದೇವಾನುದೇವತೆಗಳು ಮೆಚ್ಚತಕ್ಕುದು! ನಾನು ವರಲಕ್ಷ್ಮೀದೇವಿ. ಏಳು! ಏಳು! ನಾನು ಹೇಳುವುದನ್ನು ಕೇಳು. ಬರುವ ಶ್ರಾವಣಮಾಸದ ಶುಕ್ಲ ಪಕ್ಷದ ಎರಡನೆಯ ಶುಕ್ರವಾರದಲ್ಲಿ ನನ್ನನ್ನು ಪೂಜೆಮಾಡು, ಹಾಗೆ ನನ್ನನ್ನು ಮನಃಪೂರ್ವಕ ಪೂಜೆಮಾಡಿದವರಿಗೆ ಬೇಕಾದುದನ್ನೆಲ್ಲಾ ಕೋ ಡುವೆನು' ಎಂದು ಹೇಳಿ ಮಾಯವಾದಳು. ಬೆಳಗಾಯಿತು. ಚಾರುಮತಿಯು ತನ್ನ ಸ್ವಪ್ನವನ್ನು ತಿಗೆ ತಿಳಿ ಸಿದಳು. ಅವನು ಸಂತೋಷದಿಂದ ಶ್ರಾವಣ ಶುಕ್ರವಾರ ವರಲಕ್ಷ್ಮೀಪೂಜೆಗೆ
ಪುಟ:ಕಥಾವಳಿ.djvu/೬೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.