೫೯ ಕಿವಿಗೊಟ್ಟು ಕೇಳಿ ! ಹೆಂಗಸರು ಮಕ್ಕಳು ಕಿರಿಚಿಕೊಳ್ಳುವುದು ಇಲ್ಲಿಗೆ ಕೇಳು ತಿದೆ! ರಾಮ ರಾಮ !ಅಲ್ಲಿ ನೋಡಿ, ಹೊಗೆ ! ಓಹೋ ! ಉರಿ ಇಲ್ಲಿಗೆ ಕಾಣು ತಿದೆಯಲ್ಲ ! ಶಿವ ಶಿವ ! ಇಲ್ಲಿಗೂ ಬರುವರಲ್ಲ, ನಾವೇನು ಮಾಡೋಣ ! ಮುಂದೇನು ಗತಿ ! ಆ ಹಾಳು ಪಿಂಡಾರಿಯವರು ! ಅವರಿಗೆ ದಿಕ್ಕು ದಿವಾಳಿ ಯಾರೂ ಇಲ್ಲವಲ್ಲ ! ಅವರಿಗೆ ದೇಶ, ಮನೆ, ಭೂಮಿ, ಕಾಣಿ ಎಂಬುದೇ ಇಲ್ಲ ವಲ್ಲ ! ಅವರಿಗೆ ಹೆಂಡಿರು ಮಕ್ಕಳು ಇದ್ದಾರೆಯೋ ಇಲ್ಲವೋ ಅರಿಯವಲ್ಲ ! ಅವರಿಗೆ ಕರುಣವೆಂಬುದೇ ಇಲ್ಲವಲ್ಲ ! ಆಗೋ ಕೇಳಿ, ಪಟ, ಪಟ, ಕುದು ರೆಯ ಶಬ್ದ ! ಒಂದು ದಿನಕ್ಕೆ ಎಷ್ಟು ಹಳ್ಳಿಗಳನ್ನು ಸುಟ್ಟರೆ ಇವರಿಗೆ ತೃ ಪ್ರಿಯೋ ಕಾ ಸವಲ್ಲ ! ಇನ್ನೇನು ಬಂದೇ ಬಂದರು ! ನಾವೇನು ಕೊಡೋಣ! ನಾವೆಲ್ಲಿಗೆ ಹೋಗೋಣ! ನಾವೆಲ್ಲಿ ಅವಿತುಕೊಳ್ಳೋಣ ! ನಾವೆ ನಮ್ಮ ಊರಿಗೆ ಬೆಂಕಿಹಾಕಿಬಿಟ್ಟು, ಅವರಿಗೆ ನಮ್ಮ ಹೆಂಗಸರು ಮಕ್ಕಳು, ನಮ್ಮ ಹಣ, ಸಿಕ್ಕದಹಾಗೆ ಮಾಡಿಬಿಡೋಣವೇ ? ಎಂಬೀ ಭಯವು ಯಾವಾಗಲೂ ಇದ್ದೇ ಇರುತಿದ್ದಿ ತು, ಮರಾಟೆಯವರೂ, ಪಿಂಡಾರೆಯವರೂ ದಿನಕ್ಕೆ ನಲ ವತ್ತು ಐವತ್ತು ಮೈಲಿಗಳದೂರವಾದರೂ ಸವಾರಿಮಾಡಿಕೊಂಡು ಹೋ। ಗುಹೋಗುತ ಕೊಳ್ಳೆ ಹೊಡೆದು, ಹಳ್ಳಿಗಳಿಗೆ ಬೆಂಕಿಹಚ್ಚಿ, ಸಿಕ್ಕಿದುದನ್ನು ಎತ್ತಿಕೊಂಡುಹೋಗುತಿದ್ದರು. ಇವರ ಹಾವಳಿಯು ಈಚೀಚೆಗೆ, ಎಂದರೆ ಅರವತ್ತು, ಎಪ್ಪತ್ತು ವರ್ಷಗಳಿಂದ ತಪ್ಪಿತು. ಇಂತಹ ಭಯವನ್ನು ತಪ್ಪಿಸಿ, ಜನರಿಗೆ ಸುಖವನ್ನುಂಟುಮಾಡಿದ ಇಂಗ್ಲಿ ಷರನ್ನು ಈವಿಷಯದಲ್ಲಿ ಎಷ್ಟು ಕೊಂಡಾಡಿದರೂ ಸ್ವಲ್ಪವೆ. ೪೦, ವಿನಾಯಕನ ಕಥೆ. ವಿನಾಯಕನು ಪಾಶ್ವತೀದೇವಿಯ ಮಗನು. ಒಂದುದಿನ ಪಾರ ತಿದೇವಿಯು ನೀರು ಎರೆದುಕೊಳ್ಳಲು ಹೋಗುವಾಗ, ಬಾಗಿಲನ್ನು ಕಾ ಯಲು, ಮಣ್ಣಿನಿಂದ ಒಂದು ಬೊಂಬೆಯನ್ನು ಮಾಡಿ, ಅದಕ್ಕೆ ಜೀವಕಳೆ ಯನ್ನ ತುಂಬಿ-ಮಗು, ನಾನು ನೀರೆರೆದುಕೊಳ್ಳಲು ಹೋಗುತ್ತೇನೆ, ನೀನು ಇಲ್ಲಿಯೇ ಇದ್ದು ಯಾರು ಬಂದರೂ ಒಳಕ್ಕೆ ಬಿಡದಂತೆ ಕಾದಿರು-ಎಂದು ಒಳಕ್ಕೆ ಹೋದಳು.
ಪುಟ:ಕಥಾವಳಿ.djvu/೭೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.