೭ ೪೫, ಸಾವಿತ್ರಿಯ ಕಥೆ-೧ ನೆಯ ಭಾಗ, ಮದ್ರದೇಶವೆಂದು ಒಂದು ರಾಜ್ಯವಿದ್ದಿತು, ಆ ರಾಜ್ಯಕ್ಕೆ ಅಶ್ವಪತಿ ಎಂಬುವನು ದೊರೆಯಾಗಿದ್ದು, ಆತನಿಗೆ ಬಹುಕಾಲ ಮಕ್ಕಳೇ ಇರಲಿಲ್ಲ. ಆದುದರಿಂದ ಅವನು ಸಾವಿತ್ರಿದೇವಿಯನ್ನು ಕುರಿತು ತಪಸ್ಸು ಮಾಡಿದನು. ಸಾವಿತ್ರಿಯು ಮೆಚ್ಚಿ ಅವನಿಗೆ ಪತಿವ್ರತೆಯಾದ ಒಬ್ಬಳು ಹೆಣ್ಣುಮಗಳು ಜನಿಸುವಳೆಂದು ವರವನ್ನು ಕೊಟ್ಟಳು. ಹಾಗೆಯೆ ದೊರೆಯ ಹೆಂಡತಿಯು ಬಹು ಚೆನ್ನಾದ ಒಂದು ಹೆಣ್ಣು ಮಗುವನ್ನು ಹೆತ್ತಳು. ಆ ಮಗುವಿಗೆ ಸಾವಿ ತ್ರಿಯೆಂದು ದೇವಿಯ ಹೆಸರನ್ನೇ ಇಟ್ಟರು, ಸಾವಿತ್ರಿಯು ಸುಖವಾಗಿ ಬೆಳೆದಳು, ಚಿಕ್ಕ ವಯಸ್ಸಿನಲ್ಲೇ ವಿದ್ಯೆಯನ್ನು ಚೆನ್ನಾಗಿ ಕಲಿತಳು. ಸಾವಿತ್ರಿಗೆ ಮದುವೆ ಮಾಡಬೇಕೆಂದು ದೊರೆಯು ಯೋಚಿಸಿ, ವರ ನನ್ನು ಹುಡುಕಿಸಿದನು. ದೊರೆಯು ಎಷ್ಟು ಹುಡುಕಿದರೂ ಅನುಕೂಲ ನಾದ ವರನು ಸಿಕ್ಕಲಿಲ್ಲ. ಆದುದರಿಂದ ಬೇಕಾದ ವರನನ್ನು ಹುಡುಕುವು ದಕ್ಕೆ ಸಾವಿತ್ರಿಯನ್ನೇ ಕಳುಹಿಸಿದನು. ಸಾವಿತ್ರಿಯು ಬಹು ದೇಶಗಳನ್ನು ಸುತ್ತಿದಳು. ಎಲ್ಲಿಯ ಅನುಕೂಲನಾದ ವರನು ಸಿಕ್ಕದೆ ಇರಲು, ಕಾಡಿ ನಲ್ಲಿದ್ದ ಆಶ್ರಮಗಳಲ್ಲಿ ಹುಡುಕುವುದಕ್ಕೆ ಹೊರಟಳು. ಕೊನೆಗೆ ಒಂದು ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದ ದ್ವು ಮತ್ತೇನನಂಬ ದೊರೆಯ ಮಗ ಸತ್ಯ ವಾನನನ್ನು ಮೆಚ್ಚಿ, ಹಿಂದಿರುಗಿ ಬಂದು ತನ್ನ ತಂದೆಗೆ ತಿಳಿಸಿದಳು. - ಇಷ್ಟರಲ್ಲಿಯೇ ಅಶ್ವಪತಿಯನ್ನು ನೋಡುವುದಕ್ಕೆ ನಾರದರು ಬಂದರು, ದೊ ರೆಯು ಅವರೊಡನೆ ಮಾತನಾಡುತ್ತಾ ಸಾವಿತ್ರಿಯು ಸತ್ಯವಾನನನ್ನು ಮೆಚ್ಚಿ ಬಂದಿರುವಳೆಂದು ತಿಳಿಸಿದನು. ನಾರದರು ಅಯ್ಯಾ, ಮಹಾರಾಜನೆ! ಸತ್ಯ ವಾನನು ಬಹು ಗುಣ ಸಂಪನ್ನನು, ಯೋಗ್ಯನು! ನಿಜ; ಆದರೆ ಅವನು ಬಹು ಕಾಲ ಬದುಕುವುದಿಲ್ಲ, ಇನ್ನೂಂದುವರಕ್ಕೆ ಸರಿಯಾಗಿ ಅವನುಸಾಯುವನು' ಎಂದು ಹೇಳಿದರು, ರಾಜನು, ಇದನ್ನು ಕೇಳೆ ವ್ಯಸನಪಟ್ಟು,ಮಗಳನ್ನು ಕರೆದು ಅಮ್ಮಾ ಮಗುವೇ! ನಿನ್ನನ್ನು ಆವರನಿಗೆ ಕೊಡುವದು ನನಗೆ ಇಷ್ಟವಿಲ್ಲ. ಬೇರೆ ವರನನ್ನು ಹುಡುಕು' ಎಂದು ಹೇಳಿದನು. ಅದಕ್ಕೆ ಸಾವಿತ್ರಿ'ಯು, 'ಸತ್ಯವಾನ ನನ್ನು ನೋಡಿದಂದಿನಿಂದಲೂ, ಮನಸ್ಸಿನಲ್ಲಿ ನಾನು ಆತನ ಹೆಂಡತಿಯೆಂದೇ ತಿಳಿದಿರುವನು. ಆತನಲ್ಲದೆ ಇತರರನ್ನು ನಾನು ಎಂದಿಗೂ ವರಿಸುವಳಲ್ಲ. ಆತ
ಪುಟ:ಕಥಾವಳಿ.djvu/೮೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.