ರ್೬ ನಾನೇ ಯಮಧರರಾಯನು, ನನ್ನ ದೂತರಿಗೆ ಅಸಾಧ್ಯವಾದ ನಿನ್ನ ಗಂ ಡನ ಪ್ರಾಣವನ್ನು ನಾನೇ ತೆಗೆದುಕೊಂಡು ಹೋಗಲು ಬಂದಿರುವೆನು. ನೀನು ಮಹಾ ಪತಿವ್ರತೆಯಾದುದರಿಂದಲೂ, ನಿನ್ನ ಗಂಡನು ಧರ್ಮಿಷ್ಟನಾದುದ ರಿಂದಲೂ, ನನ್ನ ದೂತರು, ಅವನ ಪ್ರಾಣವನ್ನು ಎಳೆದು ತರಲಾರದೆ ಹೋ। ದರು' ಎಂದು ಹೇಳಿ ಸತ್ಯವಾನನ ಪ್ರಾಣವನ್ನು ತೆಗೆದುಕೊಂಡು ಹೊರಟನು' ಆಗ ಸಾವಿತ್ರಿಯು ಯಮನ ಹಿಂದೆಯೇ ಹೊರಟಳು. ಅವನು ಸಾವಿ ತಿಯನ್ನು ನೋಡಿ - ಅಮ್ಮಾ, ನೀನು ಬರಬಾರದು. ಹಿಂದಿರುಗು ' ಎಂದನು. ಸಾವಿತ್ರಿಯು ಅದಕ್ಕೆ ' ನನ್ನ ಪತಿಯನ್ನು ಬಿಟ್ಟು ನಾನೆಲ್ಲಿ ಹೋಗಲಿ ! ಅವ ನನ್ನು ಅಗಲಿ ನಾನು ಹೇಗೆ ಇರಲಿ! ಆ ಪ್ರಾಣವೇ ಹೋದಮೇಲೆ ನಾನು ಪ್ರಾಣದಿಂದ ಇದು ಏನು ಫಲ? ಈ ಪ್ರಪಂಚದಿಂದ ನನಗೇನು ಆಗಬೇಕು ? ಸ್ತ್ರೀಯರಿಗೆ ಸರಸ್ವವೂ ಪತಿಯೇ ಅಲ್ಲವೇ ? ಪತಿಯೇ ದೇವರು. ಅಂತಹ ದೇವರನ್ನು ಬಿಟ್ಟು ಜನರು ಇರುವುದು ಹೇಗೆ ? ಒಂದು ಕ್ಷಣವೂ ನಾನು ನನ್ನ ದೇವರನ್ನ ಗಲಿ ಇರಲಾರೆನು ' ಎಂದಳು. ಸಾವಿತ್ರಿಯ ಸಹಜವಾದ ಸಂಕಟವನ್ನು ಕೇಳಿ ಯಮನಿಗೂ ಕರುಣ ಹುಟ್ಟಿತು. ಆಗ ಯಮನು ಸಾವಿತ್ರಿಯನ್ನು ನೋಡಿ, " ನಿನ್ನ ಪತಿಭಕ್ತಿಗೆ ನಾನು ಮೆಚ್ಚಿದೆನು, ನಿನ್ನ ಪತಿಯ ಪ್ರಾಣ ಒ೦ದು ಹೋರತು, ನೀನು ಬೇಕಾದ ವರಗಳನ್ನು ಕೇಳು, ಕೊಡುವೆನು' ಎಂದನು. ಆಗ ಸಾವಿತ್ರಿಯು ಹಾಗಾದರೆ, ಕುರುಡನಾಗಿರುವ ನನ್ನ ಮಾವನಿಗೆ ಕಣ್ಣುಬರಲಿ ; ಶತ್ರು ಗಳ ವಶವಾಗಿರುವ ನಮ್ಮ ಮಾವನ ರಾಜ್ಯವು ಮತ್ತೆ ನಮ್ಮ ಮಾವನ ಕೈಸೇ ರಲಿ ; ನಮ್ಮ ತಂದೆಗೆ ಗಂಡುಮಕ್ಕಳಾಗಲಿ, ನನಗೆ ಸಂತಾನವೃದ್ಧಿಯಾಗಲಿ' ಈ ವರಗಳನ್ನು ಕೊಡಬೇಕೆಂದು ಬೇಡಿದಳು. ಯಮನು ಇವಳ ಗುಣಕ್ಕೆ ಮೆಚ್ಚಿ ನೀನು ಬೇಡಿದ ವರಗಳನ್ನೆಲ್ಲಾ ಕೊಟ್ಟಿರುವೆನು, ಇನ್ನು ಹೋಗು' ಎಂದನು. ಆದರೂ ಸಾವಿತ್ರಿಯು ಯಮನ ಬೆನ್ನು ಹತ್ತಿದಳು. ಯಮನು, ನೀನು ಬೇಡಿದ ವರಗಳನ್ನೆಲ್ಲಾ ಕೊಟ್ಟುದು ಆಯಿತು ; ಇನ್ನು ಸುಖವಾಗಿ ಹೋಗಬಹುದಲ್ಲವೆ ? ಹೋಗು' ಎಂದನು. ಅದಕ್ಕೆ ಸಾವಿತ್ರಿಯು " ಅಯ್ಯಾ! ಯಮಧರರಾಯನೇ ! ಪತಿಯನ್ನು ಕಳೆದುಕೊಂಡ ನನಗೆ ಸಂತಾನ ಹೆಚ್ಚು
ಪುಟ:ಕಥಾವಳಿ.djvu/೮೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.