೭೩ ತ್ಯ, ತಂಬೂರಿ, ಮೃದಂಗದೊಡನೆ ಜನರು ಗುಂಪಗುಂಪಾಗಿ ಹೊರಟಿರು ವರು, ಜನರಿಗೆ ಸೌಖ್ಯವೆಂಬುದು ನನ್ನ ಕಾಲದಲ್ಲಿ ಅಲ್ಲದೆ ಇನ್ನಾ ವಕಾ ಲದಲ್ಲಿ ಉಂಟು, ನಾನು ಬರುವುದಕ್ಕೆ ಮುಂಚೆ ಮೊದಲು ಮೊದಲಲ್ಲಿ ಚಳಿ ಯಲ್ಲಿ ನಡುಗಿ, ಹಿಮದಲ್ಲಿ ನೆನೆದು, ದವಸ ಧಾನ್ಯಗಳನ್ನು ತುಂಬಿ ಒದೆದಾ ಡುತಿದ್ದರು. ಒಂದು ಗಿಡದಲಾ ದರೂ ಎಲೆ ಇಲ್ಲ, ಚಿಗುರು ಇಲ್ಲ, ಹಣ್ಮನ ಹೆಸರೇ ಇಲ್ಲ. ಈಗ ನೋಡು ಹೇಗಿರುವುದು?-ಎನ್ನಲು, ಮಳೆಗಾಲವು ಒಂದು ಮಾತನ್ನೂ ಆಡದೆ ಆಕಾಶವನ್ನೆಲ್ಲಾ ಕರಿಯ ಮೋಡದಿಂದ ಮುಚ್ಚಿ ಗುಡುಗು ಮಿಂಚು ಸಿಡಿಲುಗಳೊಡನೆ ಆರ್ಭಟಿಸುತ್ತ ಪಟಪಟನೆ ಆಲಿಕಲ್ಲುಗಳನ್ನು ಬೀಸಿ ಭರಭರನೆ ಬಿರುಸಾಗಿ ಮಳೆಯನ್ನು ಕರೆಯಿತುಆಕಾಶವು ನಿರ್ಮಲವಾಯಿತು. ಗಿಡಗಳು ಮೈಯನ್ನೆಲ್ಲಾ ತೊಳದುಕೊಂ ಡಂತೆ ಕಂಗೊಳಿಸುತ್ತಿದ್ದುವು, ಊರಧಳು ಅಡಗಿತು, ಬೇಸಗೆಯ ಕೋ ಳೆಯಲ್ಲಾ ಕೊಚ್ಚಿ ಹೋಯಿತು, ಕೆರೆ ಬಾವಿಗಳಲ್ಲಿ ನೀರು ತುಂಬಿತು. ಕೆ ಟರಕೊಟರ, ಒಪ್ಪುಟ್ ಒಬಟ್, ಎಂದು ಕಪ್ಪೆಗಳು ಒರಳಲು ಆರಂಭಿಸಿದು ವು, ರೈತನು ನೇಗಿಲನ್ನು ಕಟ್ಟಿ ಕೊಂಡು, ಹೊಲವನ್ನು ಉಳಲಿಕ್ಕೆ ಹೊರ ಏನು, 'ಮಳೆ ಬಂದಿತು, ದೇಶಕೆ ತಂಪಾಯಿತು. ಇನ್ನು ಯೋಚನೆ ಇಲ್ಲ' ಎಂದು ಜನರು ಚಟುವಟಿಕೆಯಿಂದ ಕೆಲಸಮಾಡಲು ತೊಡಗಿದರು. ಮಳೆ ಗಾಲದ ಆರ್ಭಟದಿಂದ ಬೇಸಗೆಯು ಹಿಂಜರಿಯಿತು. ಎಲ್ಲೆಲ್ಲ ನೀರೂ, ಎಲ್ಲೆಲ್ಲೂ ಹಸಿರೂ ಮನಸ್ಸನ್ನು ಸಂತೋಷಪಡಿಸುತ್ತಿದ್ದು ವ. ೪೯, ಪುಷ್ಪಮಂಜರಿಯ ಕಥೆ-೧ ನೆಯ ಭಾಗ. ಪುಷ್ಟ ಪರಿಯೆಂದು ಒಂದು ಪಟ್ಟಣವಿದ್ದಿತು. ಆ ಪಟ್ಟಣದಲ್ಲಿ ಪ್ರಪ್ಪ ಶೇಖರನೆಂಬ ಒಬ್ಬ ದೊರೆಯು ಆಳುತ್ತಿದ್ದನು. ಅವನಿಗೆ ಮಕರಂದನೆಂಬ ಒಬ್ಬ ಮಗನಿದ್ದನು. ಅವನು ನೋಡುವುದಕ್ಕೆ ಬಹಳ ಚೆಲುವನಾಗಿಯೂ ಶಕ್ತಿ ಯುಕ್ತಿ ಯುಳ್ಳವನಾಗಿಯೂ ಇದ್ದನು. ೧೦
ಪುಟ:ಕಥಾವಳಿ.djvu/೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.