ಈ ಪುಟವನ್ನು ಪರಿಶೀಲಿಸಲಾಗಿಲ್ಲ.

92 KANARESE SELECTIONS—PART I ಡೆಗೆ ಬಂದು ತಬ್ಬಿಕೊಂಡು ಈ ಮಹಾ ಪ್ರಳಯದಲ್ಲಿ ಜೀವದಿಂದ ಉಳು ಕೊಂಡು ಇದ್ದೀಯಾ ? ಎಂದು ಕಣ್ಣೀರನ್ನು ಬಿಟ್ಟು ಕೇಳಿದನು. ಅದಕ್ಕೆ ಹರಿದತ್ತನುಯಾಕೆ ಅಳುತ್ತೀಯೇ ? ನಾವು ಮಾಡಿ ಇದ್ದ ಪಾಪಕ್ಕಾಗಿ ದೇವರು ನಮಗೆ ಶಿಕ್ಷೆ ಯನ್ನು ಕೊಟ್ಟನು. ಇದಕ್ಕೆ ನಾವು ಕಂಗೆಡದೆ ದೇವರನ್ನು ನಂಬಿ ಪ್ರಾರ್ಥಿಸಿಕೊಂಡಿ ದ್ದರೆ ಕಾಪಾಡುವನು ಎಂದು ಹೇಳಲು ಕಿರಾತಸೇನಾಧಿಪತಿಯು-ಯುವರಾಜ ನಾದ ಚಂಡಪರಾಕ್ರಮಿಯು ಏನಾದನೋ ? ತಿಳಿಯದು ಎಂದು ಹೇಳಿದನು. ಅದಕ್ಕೆ ಹರಿದತ್ತನು--ನಿನ್ನನ್ನೂ ನನ್ನನ್ನೂ ಕೂಡಿಸಿದ ದೇವರು ಅವನನ್ನೂ ಕೂಡಿಸುತ್ತಾನೆ ಎಂದು ಈರ್ವರೂ ಕಾಡಿನಲ್ಲಿ ಗೆಡ್ಡೆ ಗೆಣಸು ಹಣ್ಣು ಹಂಪಲುಗಳನ್ನು ತಂದು ತಿನ್ನುತ್ತಾ ದೇವರ ಧ್ಯಾನವನ್ನು ಮಾಡಿಕೊಂಡು ಇದ್ದರು. ಇತ್ತಲಾ ಸಿಂಹವಿಕ್ರಮನ ಮಗಳಾದ ಆನಂದವಲ್ಲಿಯು ಚಂಡಪರಾಕ್ರಮಿಯ ವಿಚಾರವನ್ನು ಕೇಳಿ ಕಣ್ಣಿನಲ್ಲಿ ಕಂಬನಿ ತುಳುಕುತ್ತಿರಲು ಬಂದು ತಂದೆಯ ಅಡಿಗೆ ಅಡ್ಡಬಿದ್ದು ಅಯ್ಯಾ, ತಂದೆಯೇ ! ನನ್ನ ಮನದಲ್ಲಿ ಮದುವೆಯಾದ ನನ್ನ ಮನೋವಲ್ಲಭನಾದ ಚಂಡಪರಾಕ್ರಮಿಯು ಸೈನ್ಯಸಹಿತ ಸಮುದ್ರದಲ್ಲಿ ಮುಳುಗಿ ಹೋದನಂತೆ ವಿಧವೆಯಾಗಿ ಬದುಕುವ ಈ ನನ್ನ ಬಾಳಿನಿಂದ ಏನು ಪ್ರಯೋಜನ? ಈ ಒಡಲಲ್ಲಿ ಹರಣವಿರುವ ತನಕ ಅರಣ್ಯದಲ್ಲಿ ಹಣ್ಣು ಹಂಪಲುಗಳನ್ನು ತಿಂದು ದೇವರ ಧ್ಯಾನವನ್ನು ಮಾಡಿಕೊಂಡು ಇರುವೆನು. ಇದಕ್ಕೆ ಅಪ್ಪಣೆಯನ್ನು ಕೊಡಬೇ ಕೆಂದು ಕೇಳಿದಳು, ಅದಕ್ಕೆ ಸಿಂಹವಿಕ್ರಮನು-ಅಮ್ಮಣ್ಣೀ ! ಆನಂದವಲ್ಲಿಯೇ ! ನಿನ್ನ ಪ್ರಿಯನಾದ ಚಂಡಪರಾಕ್ರಮಿಯು ಸತ್ತು ಹೋದನೆಂದು ಹೇಗೆ ನಿಶ್ಚಯಿಸಬೇಕು ? ಅರಣ್ಯದಲ್ಲಿ ಮಾಡುವ ದೇವರ ಧ್ಯಾನವನ್ನು ಅರಮನೆಯಲ್ಲಿಯೇ ಇದ್ದು ಕೊಂಡು ಮಾಡು, ದೇವರು ನಿನ್ನ ಮನೋಭಿಲಾಷೆಯನ್ನು ನೆರವೇರಿಸುವನು, ನಾನು ಸಮಸ್ಯ ದೇಶದ ಅರಸುಗಳಿಗೆ ನಿನ್ನ ಸ್ವಯಂವರಕ್ಕೋಸ್ಕರ ನಿರೂಪವನ್ನು ಬರೆಯಿಸಿ ಅವರನ್ನು ಕರೆಯಿಸುವೆನು, ನಿನ್ನ ಮನೋವಲ್ಲ ಭನು ಜೀವವಂತನಾಗಿದ್ದರೆ ಆತನೂ ಬರುವನು. ಆಗ ನೀನು ಆತನನ್ನು ವರಿಸಬಹುದು, ಎಂದು ಸಮಾಧಾನಗೊಳಿಸಿ ಸಕಲ ದೇಶದ ಅರಸುಗಳಿಗೂ ಸ್ವಯಂವರ ಪತ್ರಿಕೆಯನ್ನು ಬರೆಯಿಸಿ ಕಳುಹಿಸಿದುದರಿಂದ ಎಲ್ಲ ರೂ ಸಿಂಹವಿಕ್ರಮನ ಪಟ್ಟಣಕ್ಕೆ ಬರುತ್ತಿದ್ದರು. ಕುಶಲವತೀನಗರದ ಕುಶಲಶೇಖರರಾ ಜನೂ ತನ್ನ ಮಗನಾದ ಚಂಡಪರಾಕ್ರಮಿಯು ಸಮಸ್ತ ಪರಿವಾರದೊಡನೆ ಸಮುದ್ರ ದಲ್ಲಿ ಮುಳುಗಿಹೋದನೆಂಬ ಸುದ್ದಿಯನ್ನು ಕೇಳಿ ಮಹಾ ವ್ಯಾಕುಲದಿಂದ ಮಂತ್ರಿ ಸಹಿತ ಸಕಲ ಸೇನಾಸಮೇತನಾಗಿ ಸಿಂಹವಿಕ್ರಮನ ಪಟ್ಟಣವನ್ನು ಕುರಿತು ಹೊರಟು ಬರುವ ಮಾರ್ಗದಲ್ಲಿ ಒಂದು ಹೊಳೆಯ ದಡದಲ್ಲಿ ಸೈನ್ಯವನ್ನು ಬಿಡಿಸಿ ಇಳಿದು ಕೊಂಡು ಇದ್ದನು, “ಹರಿದತ್ತನ ತಂದೆಯಾದ ದೇವದಾಸನು ತನ್ನ ಪತ್ನಿಯಾದ ದೇವ ದಾಸಿಯೊಡನೆ ದೇಶಸಂಚಾರವನ್ನು ಮಾಡುವುದಕ್ಕೋಸ್ಕರ ಹೋಗಿದ್ದು ಆ ದಂಡಿಳಿದಿ ರುವ ಬಳಿಯಲ್ಲಿ ಬರುತ್ತಿರಲು ಆ ದಂಪತಿಗಳನ್ನು ಅರಸೂ ಮಂತ್ರಿಯ ಕಂಡು ಎದುರಾಗಿ ಹೋಗಿ ನಮಸ್ಕಾರವನ್ನು ಮಾಡಿ--ನಿಮ್ಮನ್ನು ನೋಡಿದರೆ ಬಹಳ