ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ--೩ನೆಯ ಭಾಗ 187 ಯ ಇದ್ದಾನೆ. ಆದಕಾರಣ ಲೋಕದಲ್ಲಿ ಅವರಿಗೆ ಯಾವ ಕಾರ್ಯವೂ ಅಸಾಧ್ಯ ವಲ್ಲ. ಆದುದರಿಂದ ನೀವು ನನ್ನ ಮೇಲೆ ಕರುಣವಿಟ್ಟು ನನ್ನ ಮಗನಾದ ಧರ್ಮರಾ ಜನಿಗೆ ರಾಜಸೂಯಯಾಗವನ್ನು ಮಾಡುವಂತೆ ತಿಳಿಸಿರಿ, ಆತನು ಮಾಡಿದುದೇ ಆದರೆ ನಾನು ತಂದೆ ಅಜ್ಜ ಮುತ್ತಜ್ಞರ ಗುಂಪುಗಳೊಡನೆ ಸೇರಿ ಸ್ವರ್ಗಲೋಕದಲ್ಲಿ ನಿತ್ಯ ಸುಖದಿಂದ ಇರುವೆನೆಂದು ಬೇಡಿಕೊಂಡನು. ನಾನು ಆತನ ಮಾತುಗಳನ್ನು ನಿನಗೆ ಹೇಳುವುದಕ್ಕಾಗಿ ಬಂದೆನು, ನಿನ್ನೆ ತಂದೆ ತಾತ ಮುತ್ತಾತಂದಿರು ದಿಗ್ವಿಜಯದಿಂದ ಸಂಪಾದಿಸಿದ ದ್ರವ್ಯಗಳಿಂದ ನಾಲ್ಕು ವರ್ಣದವರನ್ನೂ ಕಾಪಾಡಿ ಬಹಳ ಯಾಗಗ ಳನ್ನು ಮಾಡಿ ಇಂದ್ರನ ಸಭೆಯಲ್ಲಿ ಇರುವರು. ಅವರ ಹಾಗೆಯೇ ನೀನೂ ಈ ರಾಜಸೂಯಯಾಗವನ್ನು ಮಾಡು, ಈ ಯಜ್ಞವನ್ನು ಮಾಡುವುದು ಬಹಳ ಕಷ್ಟ . ಇದರಿಂದ ನಿನಗೆ ಬಹು ಮಂದಿ ಅರಸುಗಳೊಡನೆ ಜಗಳ ಉಂಟಾಗಿ ಅವರನ್ನು ಜಯಿ ಸಿದರೆ ಲೋಕದಲ್ಲಿ ನಿನಗೆ ಬಹು ಕೀರ್ತಿಯು ಬರುವುದೆಂದು ಹೇಳಿ ದೇವಲೋಕಕ್ಕೆ ಹೋದನು. ತರುವಾಯ ಯುಧಿಷ್ಠಿರನು ಕೃಷ್ಣ ಜೈಪಾಯನಮುನಿ ದೌಮ್ಯನು ನೆಂಟರಿ ಷ್ಟರು ಮಂತ್ರಿ ಜನಗಳು ಇವರ ಮುಂದೆ ತನ್ನ ತಮ್ಮಂದಿರೊಡನೆ ಹೀಗೆಂದನುಪ್ರಪಂಚದಲ್ಲಿ ಜನರು ಮಕ್ಕಳನ್ನು ಪಡೆದು ಅವರಿಂದ ತಮಗೆ ಸಂತೋಷ ಉಂಟಾಗು ವುದು ಎಂದು ನಿಜವಾಗಿ ತಿಳಿದಿರುವರು, ಆದಕಾರಣ ಒಳ್ಳೆಯ ಮಗನು ತನ್ನ ತಂದೆಯ ಸಂಕಲ್ಪವನ್ನು ಈಡೇರಿಸುವುದು ಅಗತ್ಯವಾದ ಕೆಲಸವಾಗಿಯೂ ನೀತಿಯಾಗಿಯ ಇರುವುದು, ಪರಲೋಕದಲ್ಲಿ ಇರುವ ನಮ್ಮ ತಂದೆಗೆ ಈ ಯಾಗವು ಹಿತವಾಗಿರುವುದು. ತಂದೆಯ ಹಿತಕ್ಕಾಗಿ ಈ ಯಾಗವನ್ನು ಮಾಡಬೇಕೆಂಬ ಬುದ್ದಿ ಯೂ ಉಂಟು. ಇದ ರಿಂದ ಎಲ್ಲ ಅರಸುಗಳೊಡನೆ ಜಗಳ ಉಂಟಾಗುವುದು ಎಂಬ ಭಯವೂ ಉಂಟು. ಇದಕ್ಕೆ ಹೇಗೆ ಮಾಡಬೇಕೆಂದು ಕೇಳಿದನು. ಆ ಮಾತನ್ನು ಕೇಳಿ ದೌಮ್ಯ ಮೊದ ಲಾದವರು-ಎಲೈ ಧರ್ಮರಾಜನೆ ! ಈ ಯಾಗದಿಂದ ಸರ್ವಪಾಪಗಳೂ ಹರಿದು ಹೋಗುವುವು ಎಲ್ಲಾ ಅರಸುಗಳ ಏಶ್ವರ್ಯವೂ ನಿನ್ನನ್ನು ಹೊಂದುವುದು, ಮರು ಲೋಕದಲ್ಲಿಯೂ ನಿನ್ನ ಕೀರ್ತಿಯು ಪ್ರಸರಿಸುವುದು, ನಿನಗೆ ದೈವ ಸಹಾಯವು ಇರುವ ಕಾರಣ ನೀನು ಸಂದೇಹ ಪಡದೆ ಭಾಜಸೂಯಯಾಗವನ್ನು ಮಾಡೆಂದು ಹೇಳಿದರು. ಧರ್ಮರಾಜನು ಅವರ ಮಾತುಗಳನ್ನು ಕೇಳಿ ಒಪ್ಪಿಕೊಂಡು....ಈ ಯಜ್ಞವನ್ನು ತಡೆಯಿಲ್ಲದೆ ನಡೆಸುವುದಕ್ಕೆ ಕೃಷ್ಣನೊಬ್ಬನೇ ಯೋಗ್ಯನೇ ಹೊರತು ಮತ್ತೊಬ್ಬರಿಗೆ ಸಾಮರ್ಥ್ಯವಿಲ್ಲ ವೆಂದು ಎಣಿಸಿ ಮಂತ್ರಿಗಳನ್ನು ಕರೆದು-ನಿಮ್ಮಲ್ಲಿ ಯಾರಾದರೂ ಒಬ್ಬನು ಚುರುಕಾಗಿ ನಡೆಯುವ ಕುದುರೆಗಳನ್ನು ಹೂಡಿರುವ ತೇರನ್ನು ಏರಿ ಬೇಗ ಹೋಗಿ ಕೃಷ್ಣನನ್ನು ಕರೆದು ಕೊಂಡು ಬರಲಿ ಎಂದು ಅಪ್ಪಣೆಯನ್ನು ಕೊಟ್ಟು ಕಳುಹಿಸಿ ಕೃಷ್ಣನ ಬರುವಿಕೆಯನ್ನೇ ಕಾದು ಕೊಂಡಿದ್ದನು. ಇತ್ತ ಕಳುಹಿಸಿದ ಮಂತ್ರಿಯು ದ್ವಾರಕಾವತಿಗೆ ಹೋಗಿ ಕೃಷ್ಣನಿಗೆ ಧರ್ಮ ರಾಜನ ಮಾತುಗಳನ್ನು ಅರಿಕೆ ಮಾಡಿದುದರಿಂದ ಆತನು ಸಂತೋಷಪಟ್ಟು ದ್ವಾರಕಾ