ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 221 ಸಂತೋಷಪಡುವನು ಎಂದು ಈ ಪ್ರಕಾರ ಆಲೋಚಿಸಿ ದಮಯಂತಿಯ ಬಳಿಗೆ ಹೋಗಿ--ತಾಯಾ ! ನಾನು ವಸುದೇವನೆಂಬ ಬ್ರಾಹ್ಮಣನು, ನಿನ್ನ ತಂದೆಯಾದ ಭೀಮಭೂಪಾಲನಿಗೆ ಮಿತ್ರನು ಆತನು ನಿನ್ನ ನ್ನು ಹುಡುವುದಕ್ಕೆ ನನ್ನನ್ನು ಕಳು ಹಿಸಲು ನಾನು ಇಲ್ಲಿಗೆ ಬಂದೆನು ನಿನ್ನ ತಾಯಿ ತಂದೆಗಳೂ ಒಡಹುಟ್ಟು ಗಳೂ ನಿನ್ನ ಮಗನೂ ನಿನ್ನ ಮಗಳೂ ಸುಖವಾಗಿ ಇದ್ದಾರೆ. ನಿನ್ನ ನೆಂಟರಿಷ್ಟರೆಲಾ ನಿನ ನು ನೋಡದೆ ಇರುವುದರಿಂದ ಪ್ರಾಣವಿಲ್ಲದವರ ಹಾಗೆ ಇದ್ದಾರೆ ನಿನ್ನನ್ನು ಹುಡುಕು ಇದಕ್ಕೆ ಸಾವಿರಾರು ಸಂಖ್ಯೆಯುಳ್ಳ ಬ್ರಾಹ್ಮಣರನ್ನು ಕಳುಹಿಸಿ ಇದ್ದಾರೆ ಎಂದು ಹೇಳಿದನು ಆಗ ದಮಯಂತಿಯು--ಆತನು ವಸುದೇವನು ಹೌದು ಎಂದು ತಿಳಿದು ತನ್ನ ಬಂಧು ಜನಗಳ ಕೈಮಗಳನ್ನು ಬೇರೆಬೇರೆಯಾಗಿ ಕೇಳಿ ತಿಳು ಕೊಂಡು ಆ ಮೇಲೆ ಇಷ್ಟು ಅಷ್ಟು ಎಂದು ಹೇಳಕೂಡದ ದುಃಖದಿಂದ ಕೂಗಿ ಅಳಲು ಸುನಂದಾದೇ ವಿಯು ಈ ಸಂಗತಿಯನ್ನು ತಿಳಿದು ತನ್ನ ತಾಯಿಗೆ ತಿಳಿಸಿದಳು ಆ ಅರಸಿನ ತಾಯಿಯು ಒಲು ಬೇಗನೆ ಅಲ್ಲಿಗೆ ಬಂದು ಆ ವಸುದೇವನೆಂಬ ಬ್ರಾಹ್ಮಣನನ್ನು ನೋಡಿ--ನೀನು ಇಲ್ಲಿಗೆ ಯಾಕೆ ಬಂದೆ ? ಇವಳ್ಯಾರು” ಇದನ್ನೆಲ್ಲಾ ಕ್ರಮವಾಗಿ ನನಗೆ ತಿಳಿಸು ಎಂದು ಕೇಳಿದಳು ಆಗ ವಸುದೇವನು--ಎಲೈ, ರಾಜ ಮಾತ್ರವೇ ! ಇವಳ ಹೆಸರು ದಮಯಂತಿಯು, ಮಹಾನುಭಾವನಾದ ನಳಚಕ್ರವರ್ತಿಯು ಈಕೆಯ ಗಂಡನು ಆತನು ದಾಯಾದಿಗಳೊಡನೆ ಜೂಜಾಡಿ ರಾಜ್ಯ ಕೋಶ ಮೊರ ಲಾದ ಸಕಲೈಶ್ವರ್ಯವನ್ನೂ ಕಳಕೊಂಡು ಈ ಹೆಂಡತಿಯೊಡನೆ ಪಟ್ಟಣವನ್ನು ಒಟ್ಟು ಅರಣ್ಯವನ್ನು ಹೊಕ್ಕನು. ಆತನು ಈಗ ಇ೦ಧಾ ಸ್ಥಳದಲ್ಲಿ ಇದ್ದಾನೆಂದು ಗೊತ್ತು ತಿಳಿಯದು, ಇವರನ್ನು ಹುಡುಕುವುದಕ್ಕೆ ಭೀಮರಾಜನು ಸಕಲ ದೇಶಗ ಳಿಗೂ ಬ್ರಾಹ್ಮಣರನ್ನು ಕಳುಹಿಸಿದುದರಿಂದ ಅವರು ದೇಶದೇಶಗಳಲ್ಲಿ ಹುಡುಕುತ್ತಿ ದಾರೆ ನಾನು ಒಬ್ಬನೇ ಈ ಪಟ್ಟಣಕ್ಕೆ ಒಂದು ಈಕೆಯನ್ನು ಕಂಡೆನು, ಸಕಿ ಶ್ರರ್ಯವೂ ಈಕೆಗೆ ಉಂಟು ಎಂಬುವುದಕ್ಕೆ ಸೂಕನೆಯಾಗಿ ಬ್ರಹ್ಮನಿಂದ ಈ ದಮ ಯಂತಿಯ ಭೂಮಧ್ಯದಲ್ಲಿ ಪದ್ಮಾ ಕಾರವಾದ ಒಂದು ಮತ್ತಿಯು ನಿರ್ಮಿತವಾಗಿ ರುವುದು ಅದು ಮೇಘದಿಂದ ಮುಚ್ಚಲ್ಪಟ್ಟ ಚಂದ್ರ ರೇಖೆಯ ಹಾಗೆ ಧೂಳಿ ಯಿಂದ ಮಾಸಿ ಈಗ ಚೆನ್ನಾಗಿ ಕಾಣಿಸುವುದಿಲ್ಲ, ಈಗ ನಾನು ಆ ಗುರುತಿನಿಂದ ಈಕೆಯನ್ನು ಗೊತ್ತು ಮಾಡಿದೆನು ಅಂದನು. ಅದನ್ನು ಕೇಳಿ ಸುನಂದಾದೇವಿಯು ದಮಯಂತಿಯ ಹಣೆಯಲ್ಲಿ ಇರುವ ಧೂಳಿಯನ್ನು ತನ್ನ ಸೀರೆಯ ಸೆರಗಿನಿಂದ ಒರ ಸಲು ಮೇಘಮಂಡಲದಿಂದ ಹೊರಟು ಬರುವ ಸೂರ್ಯಬಿಂಬದಂತೆ ತೋರುವ ಮತ್ತಿಯನ್ನು ನೋಡಿ ಸುಬಾಹುರಾಜನ ಮಾತೆಯು ದಮಯಂತಿಯನ್ನು ತಬ್ಬಿ ಕೊಂಡು ಕಣ್ಣೀರನ್ನು ಸುರಿಸುತ್ತಾ ಆಕೆಯನ್ನು ನೋಡಿ-ತಾಯಾ ! ನಿನ್ನ ಹುಬ್ಬುಗಳ ನಡುವೆ ಇರುವ ಮತ್ತಿಯನ್ನು ನೋಡಿದುದರಿಂದ ನನ್ನ ಒಡಹುಟ್ಟಿದವಳ ಮಗಳೆಂದು ತಿಳಿದೆನು, ನಾನೂ ನಿನ್ನ ತಾಯಿಯ ದಶಾರ್ಣ ದೇಶಾಧ್ಯಕ್ಷ ನಾದ