ಈ ಪುಟವನ್ನು ಪರಿಶೀಲಿಸಲಾಗಿಲ್ಲ.

232 KANARESE, SELECTIONS-PART 111 ಯನ್ನು ಬಿಟ್ಟು ನಿನ್ನಂತೆ ಪರಪುರುಷನನ್ನು ಪರಿಗ್ರಹಿಸುವ ಪತ್ನಿ ಯು ಲೋಕದಲ್ಲಿ ಉಂಟೆ ? ಪ್ರನಃ ಸ್ವಯಂವರದಲ್ಲಿ ಚೆಲುವುಳ್ಳ ಎರಡನೆಯ ಗಂಡನನ್ನು ದಮಯಂತಿಯು ತನ್ನಿಚ್ಛೆಯಿಂದ ವರಿಸುತ್ತಾಳೆ ಎಲ್ಲಾ ಅರಸುಗಳೂ ಬನ್ನಿರಿ ಎಂದು ನಿಮ್ಮ ಅಪ್ಪನು ಕಳುಹಿಸಿದ ಬೇಹಿನವರು ಎಲ್ಲಾ ದೇಶಗಳಲ್ಲಿಯೂ ತಿರುಗುತ್ತಿದ್ದಾರೆ. ಅದೆಲ್ಲವನ್ನೂ ಕೇಳಿ ಋತುಪರ್ಣರಾಜನು ಬೇಗ ಬಂದನು ಎಂದು ಹೇಳಿದನು ದಮಯಂತಿಯು ನಳನೆ ಕರ್ಣಕಠೋರವಾದ ಕೂರೋಕ್ಕಿಗಳನ್ನು ಕೇಳಿ ಬೆದರಿ ಬೆಂಡಾಗಿ ಬಸವಳಿದು ಗಡಗಡನೆ ನಡುಗುತ್ತಾ ಕೈಮುಗಿದುಕೊಂಡು.... ಎಲೈ, ಮಹಾತ್ಮನೇ ! ಇಂದ್ರಾದಿ ದೇವತೆಗಳನ್ನು ಬಿಟ್ಟು ನಿನ್ನ ಸ್ನೇ ಬಯಸಿರುವಂಧ ನನ್ನಲ್ಲಿ ಇ೦ಧಾ ಪಾಸಶಂಕೆಯನ್ನು ಮಾಡುವದು ಉಚಿತವೇ ? ನೀನು ಎಲ್ಲಿ ಇದ್ದೀಯೋ ತಿಳಿಯಬೇಕೆಂದು ನಾನು ಹೇಳಿದಂಥಾ ಮಾತುಗಳನ್ನು ಬ್ರಾಹ್ಮಣರು ಅಲ್ಲಲ್ಲಿ ನುಡಿಯುತ್ತಾ ಸರ್ವ ದಿಕ್ಕುಗಳಲ್ಲಿಯೂ ತಿರುಗಿ ಹುಡುಕುತ್ತಿರುವ ಪರ್ಣಾ ದನೆಂಬ ಬ್ರಾಹ್ಮಣನು ಋ ತುಸರ್ಣನ ಬಳಿಯಲ್ಲಿ ಆ ಮಾತುಗಳನ್ನು ಹೇಳಿದು ದಕ್ಕೆ ನೀನು ಮಾತ್ರ ಪ್ರತ್ಯುತ್ತರವನ್ನು ಕೊಟ್ಟೆ ಎಂದು ನನ್ನ ಕಡೆ ಹೇಳಿದವನಾದು ದರಿಂದ ಸೀನೇ ನಳನೆಂದು ಎಣಿಸಿ ನಿನ್ನನ್ನು ಇಲ್ಲಿಗೆ ಕರೆಸುವುದಕ್ಕೋಸ್ಕರ ನೂರು ಯೋಜನ ದಾರಿಯನ್ನು ಒಂದು ದಿವಸದಲ್ಲಿ ತಲಪುವಂತೆ ತೇರು ನಡಿಸುವ ಸಾಮ ರ್ಧ್ವವು ನಿನ್ನಲ್ಲಿ ಇರುವುದೆಂದು ನಾನು ತಿಳಿದವಳಾದುದರಿಂದ ಹಾಗೆ ಹೇಳಿ ಕಳುಹಿಸಿ ದೆನೇ ಹೊರತಾಗಿ ಮತ್ತೇನೂ ಇಲ್ಲ, ನಿನ್ನ ಮನಸ್ಸಿನಲ್ಲಿ ಏನಾದರೂ ಅಂಧಾ ಸಂಶ ಯ ಬಿದ್ದರೆ ನಿನ್ನಡಿಗಳ ಮೇಲೆ ಆಣೆಯನ್ನು ಇಕ್ಕುತ್ತೇನೆ ನಿನ್ನ ಮನಸ್ಸಿಗೆ ಅಸಮ್ಮ ತವಾದ ಕಾವ್ಯವನ್ನು ನಾನು ಮನಸ್ಸಿನಲ್ಲಿ ಸ್ಮರಿಸಿದ್ದರೆ ಸಕಲ ಭೂತ ಸಾಕ್ಷಿಯಾದ ವಾಯುವೂ ಸಕಲ ಜನರ ಕತ್ಮ ಸಾಕ್ಷಿಗಳಾದ ಸೂರ ಚಂದ್ರರೂ ಸರ್ವ ಜನಗಳ ಪಾಪ ಪುಣ್ಯಗಳನ್ನು ತಿಳಿದು ಶಿಕ್ಷೆ ರಕ್ಷೆಗಳನ್ನು ಮಾಡುವ ಯಮನೂ ಸಕಲ ಜನ ರನ್ನೂ ಹೊತ್ತು ಸಲಹುವ ಭೂಮಿಯ ಎಲ್ಲರಿಗೂ ಪರೋಪಕಾರಿಗಳಾದ ಒಲಾ ಗ್ರಿಗಳೂ ಈ ಮೊದಲಾದ ದೇವತೆಗಳೆಲ್ಲರೂ ಸತ್ಯವನ್ನೇ ನುಡಿಯಲಿ. ಹಾಗೆ ನುಡಿ ಯದೆ ಇದ್ದರೆ ಈ ಶರೀರವನ್ನು ಬಿಡುತ್ತೇನೆ ಎಂದು ಪ್ರತಿಜ್ಞೆಯನ್ನು ಮಾಡಲು ಆಗ ದೇವತೆಗಳೆಲ್ಲಾ ಅ೦ತರಿಕ್ಷದಲ್ಲಿ ಮರೆಯಾಗಿ ಇದ್ದು ಕೊಂಡು ನಳನನ್ನು ಕುರಿತು --ಎಲೈ, ರಾಜೇಂದ್ರನೇ ! ದಮಯಂತಿಯು ಪಾತಿವ್ರತ್ಯವೆಂಬ ನಿಕ್ಷೇಪವನ್ನು ಒಂದು ವರುಷದಿಂದ ಕಾಪಾಡಿದಳು ಇದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ ಒಂದು ದಿವಸದಲ್ಲಿ ನೂರು ಯೋಜನ ದಾರಿಯನ್ನು ತಲಪುವ ಶಕ್ತಿ ನಿನಗಿರುವದ ಅದೆ ಮತ್ತೊಬ್ಬರಿಗೆ ಇಲ್ಲವೆಂದು ಎಣಿಸಿ ನಿನ್ನನ್ನು ಕರೆಸುವುದಕ್ಕೋಸ್ಕರ ಈ ಉಪಾಯವನ್ನು ಮಾಡಿದಳು, ಈ ವಿಷಯದಲ್ಲಿ ನೀನು ಶಂಕಿಸಬೇಡ, ಈಕೆಯನ್ನು ಕೈಕೊಂಡು ಸುಖವಾಗಿರು ಎಂದು ಹೇಳಿದರು. ಆಗ ಆಕಾಶದಿಂದ ಹೂವಿನ ಮಳೆಯು ಸುರಿಯಿತು. ದೇವದುಂದುಭಿಗಳು ಮೊಳಗಿದವು, ಪರಿಮಳದಿಂದ ಕೂಡಿದ ಮಂದಮಾ ರುತವು ಬೀಸಿತು.